ಬೆಳಗಾವಿ : ನಾಡದ್ರೋಹಿ ಎಂಇಎಸ್ ಗೆ ಬೆಳಗಾವಿ ಮಹಾನಗರ ಪಾಲಿಕೆ ಮತ್ತೊಂದು ಶಾಕ್ ನೀಡಿದ್ದು, ನಾಮಫಲಕಗಳಲ್ಲಿ ‘ಬೆಳಗಾವಿ’ ಎಂದು ಕಡ್ಡಾಯವಾಗಿ ಬರೆಯಲು ಪಾಲಿಕೆ ಸೂಚನೆ ನೀಡಿದೆ.

ಹೌದು, ನಾಮಫಲಕದಲ್ಲಿ ಶೇ.60 ರಷ್ಟು ಕನ್ನಡಕ್ಕೆ ಆದ್ಯತೆ ನೀಡಿ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕವಿರಬೇಕು, ಇದರ ಜೊತ ಬೆಳಗಾವಿ ಎಂದು ಸ್ಪಷ್ಟವಾಗಿ ಬರೆಯಬೇಕು ಎಂದು ಸೂಚನೆ ನೀಡಿದೆ.
ಬೆಳಗಾಂವ್, ಬೆಳಗಾಮ್ ಎಂದು ನಮೂದಿಸುವಂತಿಲ್ಲ, ಬೆಳಗಾವಿ ಎಂದು ಸ್ಪಷ್ಟವಾಗಿ ಬರೆಯಬೇಕು ಎಂದು ಪಾಲಿಕೆ ಆಯುಕ್ತರು ಸೂಚನೆ ನೀಡಿದ್ದಾರೆ. ಈ ಸಂಬಂಧ ಬೆಳಗಾವಿ ನಗರದ 2000 ಅಂಗಡಿಗಳಿಗೆ ಪಾಲಿಕೆ ನೋಟಿಸ್ ನೀಡಿದೆ. ಈ ಆದೇಶ ಪಾಲಿಸದಿದ್ರೆ ಲೈಸೆನ್ಸ್ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದೆ.

ಏನಿದೆ ಆದೇಶದಲ್ಲಿ..?

ಸಂಕೀರ್ಣಗಳ ನಾಮಫಲಕಗಳಲ್ಲಿ ಕನ್ನಡವನ್ನು ಪ್ರಧಾನವಾಗಿ ಅಂದರೆ, ಒಟ್ಟು ನಾಮಫಲಕದ ಶೇ.60 ರಷ್ಟು ಭಾಗವನ್ನು ಕನ್ನಡವನ್ನು ಬಳಸತಕ್ಕದ್ದು ಎಂದು ನಿರ್ದೇಶಿಸಿರುತ್ತಾರೆ ಹಾಗೂ ವಿಳಾಸದಲ್ಲಿ “ಬೆಳಗಾವಿ” ಎಂದು ನಮೂದಿಸಬೇಕಾಗಿರುತ್ತದೆ.ಆದರೆ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ಉದ್ದಿಮೆದಾರರು ತಮ್ಮ ಉದ್ದಿಮೆಯ ಸಾಮಫಲಕದಲ್ಲಿ ಬೆಳಗಾಂವ / ಬೆಲಗಾಮ್ ಎಂದು ನಮೂದಿಸಿದ್ದು ಹಾಗೂ ಶೇ.50 ಅರಷ್ಟು ಭಾಗವನ್ನು ಕನ್ನಡ ಭಾಷೆಗೆ ಪ್ರಥಮ ಆ ಧ್ಯತೆ ನೀಡದೇ ನಾಮಫಲಕವನ್ನು ಉಪಯೋಗಿಸುತ್ತಿದ್ದು ಕಂಡುಬಂದಿರುತ್ತದೆ. ಇಂತಹ ಉದ್ದಿಮೆದಾರರಿಗೆ ಪಾಲಿಕೆ ವತಿಯಿಂದ ನೀಡಿದ ಪರವಾನಿಗೆಯನ್ನು ರದ್ದುಗೊಳಿಸಿ ಅಂಗಡಿಯನ್ನು ಬಂದ್ /ಸೀಲ್ ಮಾಡಲಾಗುವುದು ಸೂಚನೆ ನೀಡಿದೆ.