ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದಾದಮೇಲೊಂದರಂತೆ ಮುಂಜಾನೆಯಿಂದಲೇ ಅವಘಡ ಸುದ್ದಿಗಳು ವರದಿಯಾಗಿವೆ. ಮೆಟ್ರೋ ನಿಲ್ದಾಣದ ಬಳಿ ಅಗ್ನಿ ಅವ್ಘಡ ಸಂಭವಿಸಿ ನಾಲ್ಕು ಬೈಕ್ ಗಳು ಬೆಂಕಿಗಾಹುತಿಯಾಗಿರುವ ಬೆನ್ನಲ್ಲೇ ಇದೀಗ ಯಲಹಂಕದಲ್ಲಿ ಸಿಲಿಂಡರ್ ಸ್ಫೋಟಗೊಂಡು 6 ಜನರು ಗಂಭಿರವಾಗಿ ಗಯಗೊಂಡಿದ್ದಾರೆ.

ಯಲಹಂಕದ ಎಲ್ ಬಿ ಎಸ್ ಲೇಔಟ್ ನಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ 6 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಲಿಂಡರ್ ಸ್ಫೋಟದ ತೀವ್ರತೆಗೆ 5 ಮನೆಗಳು ಡ್ಯಾಮೇಜ್ ಆಗಿವೆ. ಮನೆಯ ಮೇಲ್ಛಾವಣಿ ಛಿದ್ರ ಛಿದ್ರಗೊಂಡಿದ್ದು, ಕೆಲ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಇನ್ನು ಕೆಲ ಮನೆಗಳು ಕುಸಿದಿವೆ.