ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶವಾಗಿದ್ದರೂ ಲಕ್ಷದ್ವೀಪವು ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ಸ್ವರ್ಗವಾಗಿದೆ. 36 ಸುಂದರ ದ್ವೀಪಗಳು, ಕಡಲತೀರಗಳು ಮತ್ತು ಹಸಿರಿನಿಂದ ಕೂಡಿದ್ದು ಇದು ಭಾರತದಲ್ಲಿ ಭೇಟಿ ನೀಡಲೇಬೇಕಾದ ಉತ್ತಮ ಸ್ಥಳವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭೇಟಿಯ ನಂತರ ಅನೇಕ ಜನರು ಲಕ್ಷದ್ವೀಪಕ್ಕೆ ಅದ್ಭುತವಾದ ನೈಸರ್ಗಿಕ ಪರಿಸರವನ್ನು ವೀಕ್ಷಿಸಲು ಹೋಗುತ್ತಿದ್ದಾರೆ. ಆದರೆ ಲಕ್ಷದ್ವೀಪಕ್ಕೆ ಭೇಟಿ ನೀಡುವ ಮೊದಲು ಜನರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ.

ಲಕ್ಷದ್ವೀಪ ತಾಣಕ್ಕೆ ಭೇಟಿ ನೀಡಲು ವಿಶೇಷ ಪರವಾನಗಿಯ ಅಗತ್ಯವಿದೆ. ಅಲ್ಲಿ ವಾಸಿಸದ ಜನರು ಲಕ್ಷದ್ವೀಪಕ್ಕೆ ಭೇಟಿ ನೀಡಲು ಸಕ್ಷಮ ಪ್ರಾಧಿಕಾರದಿಂದ ನೀಡಿದ ಪರವಾನಗಿಯನ್ನು ಪಡೆಯಬೇಕು.

ಪರವಾನಗಿಗಾಗಿ ಅರ್ಜಿ ಸಲ್ಲಿಸಲು ನೀವು ಇ-ಪರ್ಮಿಟ್ ಪೋರ್ಟಲ್‌ಗೆ ಹೋಗಬೇಕು: https://epermit.utl.gov.in/pages/signup ಲಕ್ಷದ್ವೀಪವನ್ನು ಆಯ್ಕೆಮಾಡಿ, ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ದಾಖಲೆಗಳನ್ನು ಸಲ್ಲಿಸಿ. ಅರ್ಜಿ ಸಲ್ಲಿಸಿದ ಸರಿಸುಮಾರು 15 ರವರೆಗೆ ಅಧಿಕಾರಿಗಳಿಂದ ಅನುಮೋದನೆ ಸಿಗಲು ಕಾಯಬೇಕು. ಇದರೊಂದಿಗೆ ಲಕ್ಷದ್ವೀಪಕ್ಕೆ ಪರವಾನಿಗೆ ಪಡೆಯಲು ಆಫ್‌ಲೈನ್ ಮಾರ್ಗವೂ ಇದೆ.

ನೀವು ಲಕ್ಷದ್ವೀಪ ಆಡಳಿತದ ವೆಬ್‌ಸೈಟ್‌ನಿಂದ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ ಅಥವಾ ನೀವು ಅದನ್ನು ಕವರಟ್ಟಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಿಂದ ಪಡೆದುಕೊಳ್ಳಿ. ನಂತರ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಆಧಾರ್ ಕಾರ್ಡ್ ನಕಲು, ಫೋಟೋ, ಪ್ರಯಾಣ ಪುರಾವೆ ಮತ್ತು ಹೋಟೆಲ್ ಬುಕಿಂಗ್ ಪುರಾವೆಗಳಂತಹ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅದನ್ನು ಕಲೆಕ್ಟರ್ ಕಚೇರಿಗೆ ಸಲ್ಲಿಸಿ.

ಬೆಂಗಳೂರು, ಚೆನ್ನೈ ಮತ್ತು ಕೊಚ್ಚಿ ಸೇರಿದಂತೆ ಭಾರತದ ಕೆಲವು ನಗರಗಳಿಂದ ಲಕ್ಷದ್ವೀಪಕ್ಕೆ ನೇರ ಟಿಕೆಟ್‌ಗಳನ್ನು ಒದಗಿಸುವ ವಿಮಾನಗಳಿವೆ. ಹೀಗಾಗಿ ನಿಮ್ಮ ಸಾರಿಗೆ ವಿಧಾನವನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ. ಲಕ್ಷದ್ವೀಪದಲ್ಲಿ ಉಳಿಯಲು ಹಲವು ವಿಭಿನ್ನ ಸ್ಥಳಗಳಿವೆ. ಬೀಚ್ ಗುಡಿಸಲುಗಳಿಂದ ಹಿಡಿದು ಪರಿಸರ ಸ್ನೇಹಿ ಕುಟೀರಗಳು ಮತ್ತು ಕೆಲವು ಪ್ರದೇಶಗಳಲ್ಲಿ ಖಾಸಗಿ ರೆಸಾರ್ಟ್‌ಗಳು ಸಹ ಸಿಗಲಿವೆ.