ಬೆಂಗಳೂರು: ಕಳೆದ 30 ವರ್ಷಗಳಿಂದ ದಕ್ಷಿಣ ಭಾರತದಲ್ಲಿ ರಾಜಕೀಯ ವಾಗಿ, ಸಾಮಾಜಿಕವಾಗಿ ಸಂಚಲನ ಮೂಡಿಸಿತ್ತಿರುವ ಪ್ರಮುಖ ವಿಷಯ ಒಳ ಮೀಸಲಾತಿ ಆಗಿದೆ. ದಕ್ಷಿಣ ಭಾರತದಲ್ಲಿ ಮಾದಿಗ ಸಮುದಾಯ ಪ್ರಬಲವಾಗಿ ಹೋರಾಟ ಮಾಡಿದರೆ, ಪಶ್ಚಿಮ ಭಾರತದಲ್ಲಿ ಅಲ್ಲಿನ ವಾಲ್ಮೀಕಿ ಸಮುದಾಯ ಪ್ರಬಲವಾಗಿ ಹೋರಾಟ ಮಾಡುತ್ತಿದೆ. ಉತ್ತರ ಮತ್ತು ಪೂರ್ವ ಭಾರತದಲ್ಲಿ ಈ ಹೋರಾಟ ಪ್ರಬಲವಾಗಿ ಕಾಣಿಸುವುದಿಲ್ಲ. ಮಾದಿಗ ಸಮುದಾಯವನ್ನು ದಕ್ಷಿಣ ಭಾರತದಲ್ಲಿ ಮಾದರ, ಮಾದಿಗ,ಆದಿಜಾoಭವ, ಜಾoಭವಂತರು, ಅರುಂಧದತಿಯಾರ್, ಮಾಂಗ್, ಚಕ್ಕಲಿಯರ್ ಮಾತoಗ, ಎಂದು ಕರೆದರೆ, ಪಶ್ಚಿಮ ಭಾರತದಲ್ಲಿ ರವಿದಾಸಿಯ, ರಾಮದಾಸಿಯ, ಚಮ್ಮಾರ ಯಂತಲೂ, ಉತ್ತರ ಮತ್ತು ಮದ್ಯ ಭಾರತದಲ್ಲಿ ಚಮ್ಮರ್, ರವಿದಾಸಿಯ ಎಂತಲೂ ಕರೆಯುತ್ತಾರೆ. ಉತ್ತರ ಭಾರತದಲ್ಲಿ ಮಾದರ ಸಮುದಾಯ ರಾಜಕೀಯವಾಗಿ     ಪ್ರಬಲವಾಗಿದ್ದರೆ ದಕ್ಷಿಣ ಭಾರತ ದಲ್ಲಿ ದುರ್ಬಲವಾಗಿದೆ, ಕಾರಣ ದಕ್ಷಿಣ ಭಾರತದಲ್ಲಿ ರಾಜಕೀಯ ರಬ್ಬರ್ ಸ್ಟ್ಯಾಂಪ್ ಆಗಿದ್ದ ಸಮುದಾಯಕ್ಕೆ  ಎಚ್ಚರವಾಗಿದ್ದು ಜೂನ್ 1994 ರಲ್ಲಿ .

ಅಖಂಡ ಆಂಧ್ರ ಪ್ರದೇಶ ರಾಜ್ಯದಲ್ಲಿ ಮಂದಕೃಷ್ಣ ಮಾದಿಗರವರು ಪ್ರಾರಂಭ ಮಾಡಿದ ಮಾದಿಗ ಮೀಸಲಾತಿ ಹೋರಾಟದಿಂದ ಹಾಗೂ ತಮಿಳನಾಡಿನಲ್ಲಿ ಅರುಂಧದತಿ ಯಾರ್ ಹೆಸರಲ್ಲಿ ಮಾಡಿದ ಹೋರಾಟದಿಂದ.  ಹೋರಾಟದ ಫಲವಾಗಿ ತಮಿಳ್ನಾಡಿನಲ್ಲಿ  ಈ ಸಮುದಾಯಕ್ಕೆ ಡಿಎಂಕೆ ಪಕ್ಷ ಒಳಮೀಸಲಾತಿ ನೀಡಿದರೆ, 
ಆoದ್ರದಲ್ಲಿ ಟಿ ಡಿ ಪಿ ಪಕ್ಷದ ಸರ್ಕಾರ ಸಹ ಒಳ ಮೀಸಲಾತಿ ನೀಡಿತ್ತು, 
ಈ. ವಿ. ಚನ್ನಯ್ಯರವರು ಇದನ್ನು ಪ್ರಶ್ನಿಸಲಾಗಿ "ಒಳ ಮೀಸಲಾತಿಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಕೊಡುವ ಅಧಿಕಾರ ರಾಜ್ಯಗಳಿಗೆ ಇಲ್ಲ ಸಂಸತ್ತಿಗೆ ಮಾತ್ರ ಇದೆ ಎಂದು ಎಂದು ತೀರ್ಪು ನೀಡಿತು."

ಇದರಿಂದ ಈ ಸಮುದಾಯದ ಆಸೆಗೆ ತೀವ್ರ ನಿರಾಸೆ ಆದರೂ ಹೋರಾಟ ಬಿಡಲಿಲ್ಲ,  ಇವರ ಹೋರಾಟಕ್ಕೆ ನೆರವಾಗಿದ್ದು 
2006ರಲ್ಲಿ ಪಂಜಾಬ್ ರಾಜ್ಯದಲ್ಲಿ ಬಲ್ಮೀಕಿ @ ವಾಲ್ಮೀಕಿ ಸಮುದಾಯ ಒಳ ಮೀಸಲಾತಿಗಾಗಿ ಹೋರಾಟ ಮಾಡಿದ್ದರಿಂದ ಆ ರಾಜ್ಯ ಒಳ ಮೀಸಲಾತಿ ನೀಡಿತ್ತು. ಅಲ್ಲಿನ ಮಾನ್ಯ ಹೈಕೋರ್ಟ್ ದಾವೀಂದ್ರ ಸಿಂಗ್ ಪ್ರಕರಣದಲ್ಲಿ ಆಂದ್ರ ರಾಜ್ಯದ  ಈ. ವಿ ಚಿನ್ನಯ್ಯ ಪ್ರಕರಣ ಉಲ್ಲೇಕಿಸಿ ಒಳ ಮೀಸಲಾತಿ ನೀಡಿದನ್ನು ಕಾನೂನು ಬಾಹಿರ ಎಂದು ತೀರ್ಪು ನೀಡಿತು, ಈ ತೀರ್ಪುನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿ, ಮಾನ್ಯ ಅರುಣ್ ಮಿಶ್ರ ನೇತೃತ್ವದ 5 ಸದಸ್ಯರ ಸಂವಿದಾನ ಪೀಠ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಅಗತ್ಯತೆ ಬಗ್ಗೆ ಓತ್ತಿ ಹೇಳಿ ಒಳ ಮೀಸಲಾತಿ ಪರ ತೀರ್ಪು ನೀಡಿ, ಅಗತ್ಯತೆ ಬಗ್ಗೆ ಒತ್ತಿ ಹೇಳಿತು ಮತ್ತು ವಿಸ್ಕೃತ ಪೀಠಕ್ಕೆ ಪರಿಶೀಲನೆ ಮಾಡಲು ತಿಳಿಸಿತು . ಈ ಮೂಲಕ ಒಳ ಮೀಸಲಾತಿಗೆ ಪುನರ್ ಜನ್ಮ ನೀಡಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಿತು.

ನಂತರ ಮಾನ್ಯ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯ ಮೂರ್ತಿರವರಾದ 7 ಸದಸ್ಯರ ವಿಸ್ಕೃತ ಪೀಠ ಬಹಳ ದೀರ್ಘವಾಗಿ ಮತ್ತು ಗಾಡವಾಗಿ ಅಧ್ಯಯನ ಮಾಡಿ , ವಾದ ವಿವಾದ ಕೇಳಿ ಒಳ ಮೀಸಲಾತಿ ಪರ ತೀರ್ಪು ನೀಡಿತು ಹಾಗೂ ಅದನ್ನು ಜಾರಿಗೊಳಿಸುವ ಬಗ್ಗೆ ರಾಜ್ಯಗಳಿಗೆ  ಹೊಣೆ ನೀಡಿತು.

ಈ ಮೂಲಕ ಇ. ವಿ.ಚಿನ್ನಯ್ಯ ತೀರ್ಪುನ್ನು ಹೊಡೆದುಹಾಕಿ, 
ದಾವಿoದ್ರ ಸಿಂಗ್ ಪ್ರಕರಣದಲ್ಲಿ ಒಳ ಮೀಸಲಾತಿ ಪರ ತೀರ್ಪು ನೀಡಿದ ಅರುಣ್ ಮಿಶ್ರ ನೇತೃತ್ವದ ಪೀಠದ ತೀರ್ಪುನ್ನು ಎತ್ತಿ ಹಿಡಿಯಿತು. ಈ ಮೂಲಕ ಒಳ ಮೀಸಲಾತಿ ಜಾರಿಗೆ ಇದ್ದ ಎಲ್ಲ ತೊಡಕುಗಳಿಗೆ  ವಿರಾಮ ಹಾಕಿತು.

ಆದರೆ ಇದನ್ನು ಜಾರಿಗೊಳಿಸಲು,ಕರ್ನಾಟಕದ ಸರ್ಕಾರ ಮುಕ್ತ ಮನಸ್ಸು ಮಾಡದೆ ಕಾಲ ಹರಣದ ಮೊರೆ ಹೋಗುತ್ತಿದೆ, ಇದರಿಂದ ಪ್ರಸ್ತುತ ಉದ್ಯೋಗ ನೇಮಕಾತಿಗಳಲ್ಲಿ  ಸಾವಿರಾರು ಉದ್ಯೋಗಗಳು ಈ ಸಮುದಾಯಕ್ಕೆ ವಂಚಿತ ಆಗುತ್ತಿದೆ.

ಮಾನ್ಯ ಕರ್ನಾಟಕ ಸರ್ಕಾರವು ಒಕ್ಕಲಿಗ, ಲಿಂಗಾಯತ ಸಮುದಾಯದ ವಿರೋಧವಿದ್ದರೂ ಜಾತಿ ಗಣತಿ ಶಿಫಾರಸ್ಸು ಅಂಗೀಕರಿಸುವ ಅವಸರ ಒಳ ಮೀಸಲಾತಿ ಜಾರಿಗೊಳಿಸುವುದಕ್ಕೆ ಏಕೆ ಮನಸ್ಸು ಮಾಡುವುದಿಲ್ಲ ಎಂಬ ಪ್ರಶ್ನೆ ಮೂಡುತ್ತೆ ಅದಕ್ಕೆ  ಜಾಣ ಮೌನಿಗಳಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಜಿ.ಪರಮೇಶ್ವರ್ ರವರು   ಉತ್ತರ ಕೊಡಬೇಕು ಕಾರಣ ಒಬ್ಬರು ಹೈಕಮಾಂಡ್ ಇನ್ನೊಬ್ಬರು ಕಳೆದ ಹಿಂದೆ ಚುನಾವಣೆಯ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದರು.

ಚುನಾವಣೆಯ ಪ್ರಣಾಳಿಕೆಯಂತೆ ಮೊದಲ ಕ್ಯಾಬಿನೆಟ್ನಲ್ಲಿ ಒಳ ಮೀಸಲಾತಿ ಪರ ತೀರ್ಮಾನ ತೆಗೆದು ಕೊಳ್ಳಬೇಕಾಗಿತ್ತು, ಆದರೆ ಇದುವರೆಗೂ 10ಕ್ಕಿಂತ ಹೆಚ್ಚಿನ ಕ್ಯಾಬಿನೆಟ್ ಮೀಟಿಂಗ್ ಗಳಾದರೂ ಒಳ ಮೀಸಲಾತಿ ಜಾರಿಗೊಳಿಸುವ ಬಗ್ಗೆ ಒಮ್ಮೆಯೂ ಚರ್ಚಿಸಿಲ್ಲ ಎಂದರೆ ಸರ್ಕಾರದ ಒಳ ಮನಸ್ಸು ಏನು ಎಂಬುದು ಸಾಮಾನ್ಯ ವ್ಯಕ್ತಿಗೂ ಅರ್ಥವಾಗುತ್ತದೆ.

ಈ ಮೊದಲು ರಾಷ್ಟ್ರದಲ್ಲಿ ಕಾಂಗ್ರೆಸ್ ಬಹುಮತಗಳಿಸಿ ಅಧಿಕಾರ ನಡೆಸಿ ಕೊಂಡು ಬರುತಿತ್ತು ಆದರೆ ಬಾಬು ಜಗಜೀವನ್ ರಾಮ್ 1977ರಲ್ಲಿ ಕಾಂಗ್ರೆಸ್ನಿಂದ ಹೊರ ಬಂದ ಮೇಲೆ ಈ ಸಮುದಾಯದ ಬೆಂಬಲ ಕಡಿಮೆ ಆಗುತ್ತಾ ಬಂದಿದ್ದರಿಂದ ಉತ್ತರ ಭಾರತದಲ್ಲಿ ಜನತಾ ಪಕ್ಷ ಬೆಳೆಯಲು ಉತ್ತಮ ಅವಕಾಶ ಒದಗಿತು. ಅದರ ಜೊತೆ ಹೋಗಿದ್ದ ಜಗಜೀವನ್ ರಾಮ್ ರವರು ಭಾರತದ ಉಪ ಪ್ರಧಾನಿ ಯಾಗಿ ಸೇವೆ ಸಲ್ಲಿಸಿದರು. ನಿದಾನವಾಗಿ ಕಾಂಗ್ರೆಸ್ ಮತ ಬ್ಯಾಂಕ್ ಕಾಂಗ್ರೆಸ್ನಿಂದ ದೂರ ಆಗುತ್ತಾ ಬಂತ್ತು. ಅವರ ಇಳಿ ವಯಸ್ಸಿನ ಕಾರಣದಿಂದ ರಾಜಕೀಯವಾಗಿ ದೂರವಾಗುವ ಸಂದರ್ಭದಲ್ಲಿ, 1984ರಲ್ಲಿ ಇದೇ ಸಮುದಾಯದ ಕಾಂಶಿರಾಮ್ ರವರು ಬಿಎಸ್ಪಿ ಪಕ್ಷ ಕಟ್ಟಿ  ಸಮುದಾಯದ ಬೆಂಬಲ ಪಡೆದು ರಾಷ್ಟೀಯ ಪಕ್ಷ ಆಗಿದೆ.  

ಮೀಸಲಾತಿಯ ಕೂಗು ಉತ್ತುಂಗದಲ್ಲಿದ್ದ 2004-2014 ರ ಅವಧಿಯಲ್ಲಿ ಅಧಿಕಾರ ಮಾಡಿದ ಕಾಂಗ್ರೆಸ್ ನೇತೃತ್ವದ ಯುಪಿಎ ಒಳ ಮೀಸಲಾತಿ ಬಗ್ಗೆ ಗಟ್ಟಿ ನಿರ್ಧಾರ ಮಾಡಲೇ ಇಲ್ಲ ಇದರಿಂದ ಅಧಿಕಾರ ಕಳೆದು ಕೊಳ್ಳಬೇಕಾಯಿತು.

ಇದರ ಬಗ್ಗೆ ಅರಿವಿದ್ದ ಇಂದಿನ ಕೇಂದ್ರ ಸರ್ಕಾರ ಒಳ ಮೀಸಲಾತಿಯ ವಿಸ್ಕೃತ ಪೀಠದ ಮುಂದೆ,  ಒಳ ಮೀಸಲಾತಿ ಪರ ವಾದ ಮಂಡಿಸಿ ಒಳ ಮೀಸಲಾತಿ ಪರ ತೀರ್ಪು ಬರುವಲ್ಲಿ ಪ್ರಮುಖ ಪಾತ್ರ ವಹಿಸಿ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಿತು. ಈ ಮೂಲಕ ಮಾನ್ಯ ಪ್ರಧಾನಮಂತ್ರಿಗಳು ತೆಲಂಗಾಣ ರಾಜ್ಯದಲ್ಲಿ ನಡೆದ ಮಾದಿಗ ವಿಶ್ವ ರೂಪo ಸಮಾವೇಶದಲ್ಲಿ ಕೊಟ್ಟ ವಾಗ್ದಾನಕ್ಕೆ ಬದ್ಧರಾಗಿ ಸಾಮಾಜಿಕ ನ್ಯಾಯ ಎತ್ತಿಯಿಡಿದರು.

ದಕ್ಷಿಣ ಭಾರತದ ಕರ್ನಾಟಕದಲ್ಲಿ 1947ರಿಂದ ಕಾಂಗ್ರೆಸ್ ಜೊತೆಗಿದ್ದ ಈ ಸಮುದಾಯ 1994ರ ನಂತರ ಮಾದಿಗ ದಂಡೋರ ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿ ಹೋರಾಟದಿಂದ ರಾಜಕೀಯ ಜಾಗೃತಿ ಪಡೆದು 1999 ರ ಚುನಾವಣೆಯಲ್ಲಿ ಜೆಡಿಎಸ್ ನ ಕಡೆ ಮತ ವಾಲಿದ್ದರಿಂದ ದೇವೇಗೌಡರು ಮುಖ್ಯಮಂತ್ರಿ ಗಳಾಗಿ ನಂತರ ಪ್ರಧಾನಿ ಮಂತ್ರಿ ಯಾದರು. ಆದರೆ ಒಳ ಮೀಸಲಾತಿ ಜಾರಿ ಆಗದೆ ಇದ್ದುದರಿಂದ 1999 ರಲ್ಲಿ ಮತ್ತೆ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದರಿಂದ ಎಸ್.ಎಮ್ ಕೃಷ್ಣರವರು ಮುಖ್ಯ ಮಂತ್ರಿಗಳಾಗಿ ಸದಾಶಿವ ಆಯೋಗ ರಚಿಸಿದರೂ ಒಳ ಮೀಸಲಾತಿ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ವೆಂದು, ಈ ಸಮುದಾಯದ ಮತ ವಿಭಜನೆಯಾಗಿ 2008ರಲ್ಲಿ ಸಮ್ಮಿಶ್ರ ಸರಕಾರ ಬರಲು ಕಾರಣವಯಿತು ಆದರೆ ಸಮ್ಮಿಶ್ರ ಸರ್ಕಾರದ ಮುಖ್ಯ ಮಂತ್ರಿ ಆಗಿದ್ದ ಸದಾನಂದ ಗೌಡರು ಸದಾಶಿವ ಆಯೋಗದ ವರದಿ ಜಾರಿ ಗೊಳಿಸದೇ ಇದ್ದುದರಿಂದ,  ಈ ಸಮುದಾಯ 2013 ರಲ್ಲಿ ಮತ್ತೆ ಕಾಂಗ್ರೆಸ್ಗೆ ಮತ ನೀಡಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಒಳ ಮೀಸಲಾತಿ ಬಗ್ಗೆ ಮೌನಿಯಾಗಿ ಕಾಲ ಹರಣ ಮಾಡಿದ್ದರಿಂದ ಈ ಸಮುದಾಯ 2016 ರಲ್ಲಿ ಹುಬ್ಬಳ್ಳಿ ಯಲ್ಲಿ ಮಾದಿಗರ ಬೃಹತ್ ಸಮಾವೇಶಮಾಡಿತು ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ್ ಶೆಟ್ಟರ್ ಒಳ ಮೀಸಲಾತಿ ಗೆ ಬೆಂಬಲ ಸೂಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಎಂದರೂ ಕರ್ನಾಟಕ ಸರ್ಕಾರ ಮಾಡಲಿಲ್ಲ ಆ ಸಮಾವೇಶಕ್ಕೆ ಬರುತಿದ್ದ 7 ಜನರು ದುರ್ಮರಣ ಅಪ್ಪಿದರೂ ಮನಸ್ಸು ಕರಗಲಿಲ್ಲ ಬದಲಾಗಿ ಮಾಜಿ ಸಚಿವ ಆಂಜಿನೇಯಲು ಮೇಲೆನೇ ಕೆಲವರು ತೋಳು ಏರಿಸಿ ಜಗಳ ಮಾಡಿದರು ಇದನ್ನು ನೋಡಿಕೊಂಡು ಪರಮೇಶ್ವರ ಮತ್ತು ಸಂಗಡಿಗರು ಮೌನಿಗಳಾದರು. 

ಇದರಿಂದ ಮತ್ತೆ 2018 ರ  ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಈ ಸಮುದಾಯ ದೂರವಾಗಿದ್ದರಿಂದ ಮತ್ತೆ ಸಮ್ಮಿಶ್ರ ಸರ್ಕಾರ ಬಂತು. ನಂತರ 2023 ರ ಮಾರ್ಚ್ 28ರoದು ಬಿಜೆಪಿ ಸರ್ಕಾರವು ಒಳ ಮೀಸಲಾತಿ ಪರ  ತೀರ್ಮಾನ ಮಾಡಿ ಕೇಂದ್ರಕ್ಕೆ  ತಿದ್ದುಪಡಿ ಮಾಡಲು ಶಿಫಾರಸ್ಸು ಮಾಡಿ, ತಾನು ಒಳ ಮೀಸಲಾತಿ ಪರ ಎಂಬ ಬದ್ಧತೆ ತೋರಿಸಿತು.

2024 ರ ಚುನಾವಣೆಯಲ್ಲಿ ಸೋಲುವ ಭಯದಿಂದ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿ ಕುರಿತು ವಾಗ್ದಾನ ಮಾಡಿತ್ತು, ಆದರೆ ಅದು ಇನ್ನೊ ಜಾರಿಗೊಳಿಸದೇ ಇರುವುದು ಅನ್ಯಾಯವೇ ಸರಿ.

ತಮಿಳ್ನಾಡಿನಲ್ಲಿ ಅರುಂದ ತಿಯಾರ್ಗೆ ಒಳ ಮೀಸಲಾತಿ ನೀಡಿದ್ದ ಡಿಎಂಕೆ ಪಕ್ಷ ಬಲಿಷ್ಠವಾಗಿದ್ದರೆ,  ಒಳ ಮೀಸಲಾತಿ ಪರ ಇದ್ದ  ಟಿಡಿಪಿ ಮತ್ತು  ಬಿಜೆಪಿ ಪಕ್ಷಗಳು ಕಳೆದ ಚುನಾವಣೆಯಲ್ಲಿ ಆಂದ್ರದಲ್ಲಿ  ಅಧಿಕಾರಕ್ಕೆ ಬಂದಿವೆ. ತೆಲಂಗಾಣದಲ್ಲಿ ಬಿ ಜೆ ಪಿ ಪಕ್ಷದ ಮತ ಗಣನೀಯವಾಗಿ ಏರಿಕೆ ಆಗಿದೆ, ಕೇರಳದಲ್ಲಿ ಅರುಂಧದತಿಯಾರ್ಗೆ ಬೆಂಬಲ ನೀಡಿದ ಎಡಪಂತ್ತಿeಯ ಕಮ್ಯುನಿಸ್ಟ್ ಪಕ್ಷ ಅಧಿಕಾರದಲ್ಲಿದೆ ಎಂಬುವುದನ್ನು ಮರೆಯಬಾರದು.

ರಾಮನಿಗೆ ತೊಂದರೆಯಾಗಿದ್ದಾಗ ಇದೇ ಸಮುದಾಯದ ಅದಿಜಾoಭವ ಸೈನ್ಯ ರಾವಣ ವಿರುದ್ದ ಹೋರಾಡಿ ಸೀತೆಯನ್ನು ಕರೆದುಕೊಂಡು ಬಂದು ರಾಮನಿಗೆ ಪಟ್ಟಾಭಿಷೇಕ ಮಾಡಿತ್ತು, ಶ್ರೀಕೃಷ್ಣನಿಗೆ ತನ್ನ ಮಗಳಾದ ಜಾoಭವಂತಿಯನ್ನು ಕೊಟ್ಟು ಕೃಷ್ಣನ ಯುದ್ಧಗಳಲ್ಲಿ ಜಯಕ್ಕೆ ಕಾರಣರಾಗಿದ್ದರು ಎಂಬುದು ಇತಿಹಾಸ ಆಗಿದೆ. ಅರುಂಧತಿ, ಆದಿಜಾoಭವ, ಮಾತoಗ, ಮಾತoಗಿ, ಪರ್ವತ ರಾಜ, ಸಂತ ರವಿದಾಸ್, ಮಾದರ ಚೆನ್ನಯ್ಯನ ಕುಲದವರು, ಹಿಂದೆ ಸಾಮಾಜಿಕ ನ್ಯಾಯಕ್ಕಾಗಿ ಮುಂಚೋಣಿಯಲ್ಲಿ ನಿಲ್ಲುತಿದ್ದವರು, ಇಂದು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವುದು ಶೋಚಣೀಯವಾಗಿದೆ.ಒಳ ಮೀಸಲಾತಿ ಯನ್ನು ಪಡೆದುಕೊಳ್ಳಲು ಸಂಬಂದಿಕರಾದ ಶ್ರೀ ಕೃಷ್ಣನ ಯಾದವ ಸಮುದಾಯ ,  ಜಾoಭವತಿಯ ಮಗನಿಗೆ ತನ್ನ ಮಗಳನ್ನು ನೀಡಿದ ಅಗ್ನಿ ವಂಶ ತಿಗಳ ಸಮುದಾಯ ಬೆಂಬಲ ಪಡೆಯುವುದು ಸೂಕ್ತವಾಗಿದೆ. ರಾಮನ ಪಕ್ಷ ಬಿ ಜೆ ಪಿ, ಅದಿಜಾoಭವರಿಗೆ ಎಲ್ಲ ರೀತಿಯ ಬೆಂಬಲ ನೀಡುತ್ತಿರುವುದು, ಜಾoಭವರು ತಿಳಿಯ ಬೇಕಾಗಿದೆ, ಕಳೆದ ಬಿಜೆ ಪಿಸರ್ಕಾರದಲ್ಲಿ ಎಲ್ಲಾ ಎಸ್ಸಿ ಮತ್ತು ಎಸ್ಟಿಗಳಿಗೆ ಮೀಸಲಾತಿ ಹೆಚ್ಚಿಸಿ ಒಳ ಮೀಸಲಾತಿ ನೀಡಲು ಕೇಂದ್ರಕ್ಕೆ ತಿದ್ದುಪಡಿಗಾಗಿ ಶಿಫಾರಸ್ಸು ಮಾಡಿ ಜಾರಿಗೊಳಿಸಲು ಪ್ರಯತ್ನ ಮಾಡಿತ್ತು, ಆದರೆ ಬದಲಾದ ಪರಿಸ್ಥಿತಿಯಲ್ಲಿ  ಮಾನ್ಯ ಸುಪ್ರೀಂ ಕೋರ್ಟ್ನನ ಮಾನ್ಯ ಮುಖ್ಯ ನ್ಯಾಯಮೂರ್ತಿಗಳಾದ ಡಿ. ವೈ. ಚಂದ್ರಚೂಡ್ ನೇತೃತ್ವದ 7 ಸದಸ್ಯರ ವಿಸ್ಕೃತ ಪೀಠದ ತೀರ್ಪುನಂತೆ " ಸಂಸತ್ತಿನ ತಿದ್ದುಪಡಿ ಇಂದು ಅವಶ್ಯಕತೆ ಇಲ್ಲ", " ರಾಜ್ಯಗಳು ಎಸ್ಸಿ, ಎಸ್ಟಿ ಸಮುದಾಯಗಳಲ್ಲಿ  ಹಿಂದುಳಿದ ಪಂಗಡಗಳ ದತ್ತಾoಶ ಸಂಗ್ರಹಸಿ ಒಳ ಮೀಸಲಾತಿ ನೀಡುವುದು ಸoವಿಧಾನ ಬದ್ದವಾಗಿದೆ ಎಂದು ತೀರ್ಮಾನಿಸಿದ್ದರೂ" ರಾಜ್ಯ ಸರ್ಕಾರ, ಸದಾಶಿವ ಆಯೋಗದ ದತ್ತಾoಶದ ಪ್ರಕಾರ ಹಾಗೂ ಪೂರಕವಾಗಿ ನಾಗಮೋಹನ ದಾಸ್ ಆಯೋಗ ಮತ್ತು ಕಾಂತರಾಜ್ ಆಯೋಗ/ ಹೆಗ್ಡೆ ಯ ಹಿಂದುಳಿದ ಆಯೋಗದ ದತ್ತಾoಶ ಪರಿಶೀಲಿಸಿ ಒಳ ಮೀಸಲಾತಿ ನೀಡದೆ ಎಲ್ಲರ ಪ್ರದಕ್ಷಿಣೆ ಹಾಕುವಂತೆ ಮಾಡುವುದು ಸಮಂಜಸವಲ್ಲ.

ಮುಂದೆ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ನನ ಅಳಿವು ಉಳಿವು ಒಳ ಮೀಸಲಾತಿಯಲ್ಲಿ ಅಡಿಗಿದೆ ಎಂಬವುದದನ್ನು ಮರೆಯಬಾರದು. 

ನೆನಪಿರಲಿ "ಪೂನಾ ಒಪ್ಪಂದದಲ್ಲಿ ಜನ್ಮ ತಾಳಿದ ಮೀಸಲಾತಿ"ಯ ಉದ್ದೇಶ ರಾಜಕೀಯ ಸಂಸ್ಥೆಗಳಲ್ಲಿ ಯಾರಿಗೆ ಅವಕಾಶವಿಲ್ಲವೋ ಅವರಿಗೆ ನೀಡುವುದಾಗಿತ್ತು, ಅಂದರೆ "ಅವಕಾಶವಂಚಿತರಿಗೆ ಅವಕಾಶ ಕಲ್ಪಿಸುವುದು ಆಗಿತ್ತೇ ಹೊರತು, ಅವಕಾಶ ಪಡೆದವರೇ ಅವಕಾಶ ಪಡೆಯಲಿ ಎಂಬುದು ಆಗಿರಲಿಲ್ಲ".
 
ಸoವಿದಾನದ 341 ನೇ ವಿಧಿ " ಅತ್ಯಂತ ಹಿಂದುಳಿದ ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಅಧಿಕಾರ ಮಾನ್ಯ ರಾಷ್ಟ್ರಪತಿಗಳಿಗೆ ನೀಡಿದೆಯೇ ಹೊರತು"  ರಾಜ್ಯಗಳು ಪರಿಶಿಷ್ಟ ಜಾತಿಯಲ್ಲಿರುವ ಹಿಂದುಳಿದ ಸಮುದಾಯಕ್ಕೆ ಒಳ ಮೀಸಲಾತಿ ನೀಡದೆ ಶೋಷಿಸಬೇಕುವೆಂತಲೂ ಎಲ್ಲಿಯೂ ಹೇಳಿಲ್ಲ.

ಸoವಿಧಾನದ 16ನೇ ವಿಧಿ " ಯಾರಿಗೆ ಉದ್ಯೋಗದಲ್ಲಿ ಸೂಕ್ತ ಪ್ರಾತಿನಿಧ್ಯ ಇಲ್ಲವೋ ಅವರಿಗೆ ಮೀಸಲಾತಿ ನೀಡಬೇಕೆಂದು ಹೇಳಿದೆಯೋ ಹೊರತು" ಹೆಚ್ಚಿನ ಪ್ರಾತಿನಿದ್ಯಇಲ್ಲದ ಸಮುದಾಯಕ್ಕೆ ಪ್ರಾತಿನಿದ್ಯ ಕೊಡಬಾರದು ಎಂದು ಹೇಳಿಲ್ಲ.

ಸಂವಿಧಾನದ 15 ನೇ ವಿಧಿ ಪ್ರಕಾರ,

" ರಾಜ್ಯವು ಯಾರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿ ದ್ದಾರೆಯೋ ಅವರಿಗೆ ವಿಶೇಷ ಸವಲತ್ತು ಮಾಡಬೇಕೆಂದು ಹೇಳಿದೆಯೋ ಹೊರತು" ಒಳ ಮೀಸಲಾತಿ ನೀಡಿ ಹಿಂದುಳಿದ ಸಮುದಾಯವನ್ನು ಮೇಲಕ್ಕೆತ್ತದೇ ಹಾಗೆ ತುಳಿಯಲಿ ಎಂದು ಹೇಳಿಲ್ಲ.

ಸoವಿಧಾನದ ಪೀಠಿಕೆ 

" ಎಲ್ಲರಿಗೂ " ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ನೀಡಿ" ಎಂತ ಹೇಳಿದೆಯೋ ಹೊರತು "ಅವಕಾಶ ವಂಚಿತರಿಗೆ ಒಳ ಮೀಸಲಾತಿಯನ್ನು ನೀಡದೆ ಶೋಷಿಸಿ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅನ್ಯಾಯ ಮಾಡಿ ಅಂತ ಎಲ್ಲೂ ಹೇಳಿಲ್ಲ"

ಆರ್ಟಿಕಲ್ 14 ನೇ ವಿಧಿ 

" ಎಲ್ಲಿರಿಗೂ ಸಮಾನತೆ ಕೊಡಬೇಕೆಂದು" ಹೇಳುತ್ತಾದೆಯೋ ಹೊರತು ಒಳ ಮೀಸಲಾತಿ ನೀಡದೆ ಅಸಮಾನತೆ ಮಾಡಿ ಎಂದು ಹೇಳಿಲ್ಲ.

ಅವಕಾಶವಂಚಿತರಿಗೆ ಅವಕಾಶ ಕಲ್ಪಿಸುವುದು ಬಿಟ್ಟು ಕಾಲಹರಣ ಮಾಡಿ ಶೋಷಿಸುವುದು ಸುಪ್ರೀಂಕೋರ್ಟ್ ತೀರ್ಪುಗೆ ಮತ್ತು ಸಂವಿಧಾನಕ್ಕೆ ಮಾಡಿದ ಅವಮಾನ  ಆಗುತ್ತದೆಯೋ ಹೊರತು ಬೇರೆ ಏನೂ ಇಲ್ಲ.

"ಕುಟುಂಬದಲ್ಲಿ ಯಾರೋ ಒಬ್ಬ ಕೊಟ್ಟಿರುವ ಸವಲತ್ತಿನಲ್ಲಿ ಮುಕ್ಕಾಲು ಭಾಗ  ತಿಂದು ಎಮ್ಮೆ, ಹಂದಿತರ ಬಲಿತು ಇತರ ಸದಸ್ಯರಿಗೆ ಕಾಲು ಭಾಗ ನೀಡಿ  ಗುಬ್ಬಚ್ಚಿತರ ಮಾಡಿ ಬಲಿಕೊಡುವುದು ನ್ಯಾಯ ಸಮ್ಮತವಲ್ಲವೋ", ಹಾಗೆಯೇ ಒಳ ಮೀಸಲಾತಿ ಪ್ರಕಾರ ಎಲ್ಲರೂ ಹಂಚಿಕೊಂಡು ತಿನ್ನುವುದು ಸಾಮಾಜಿಕ ನ್ಯಾಯಕ್ಕೆ, ಸಮಾನತೆಗೆ, ಮೀಸಲಾತಿಯ ಉದ್ದೇಶಕ್ಕೆ, ಸoವಿಧಾನಕ್ಕೆ ವಿರುದ್ಧವಾಗುವುದಿಲ್ಲ.

ಬುದ್ಧ, ಅಂಬೇಡ್ಕರ್, ಸಂವಿದಾನ ಸಿದ್ದಾಂತ ಒಪ್ಪುವ ಖರ್ಗೆ, ಪರಮೇಶ್ವರ್, ಮಹದೇವಪ್ಪ ರವರು ಹಾಗೂ ಸಾಮಾಜಿಕ ನ್ಯಾಯ, ಸಮಾಜವಾದ ನಂಬಿರುವ ಮಾನ್ಯ ಮುಖ್ಯ ಮಂತ್ರಿಗಳು ಒಳ ಮೀಸಲಾತಿಪರ ನಿಂತು ಸಾಮಾಜಿಕ ನ್ಯಾಯಕ್ಕೆ ಜೈ ಅಂತಾರೋ ಇಲ್ಲವೋ ಎಂಬುವುದಕ್ಕೆ ಕಾಲವೇ ಉತ್ತರ ಕೊಡುತ್ತದೆ.ಒಳ ಮೀಸಲಾತಿ ಜಾರಿಗೊಳಿಸದೇ ಇದ್ದರೆ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪಕ್ಷವನ್ನು ಹುಡುಕುವ ಪರಿಸ್ಥಿತಿ ಬರುತ್ತದೆ.
 

ಪೂಜಪ್ಪ ಜೆ.
ಹೈಕೋರ್ಟ್ ಕೇಂದ್ರ ಸರ್ಕಾರಿ ವಕೀಲರು.ಬೆಂಗಳೂರು