ರಾಯಚೂರು: ಹಿಟ್ ಅಂಡ್ ರನ್ ಗೆ ಕುರಿಗಾಹಿ ಬಲಿಯಾದ ಘಟನೆ  ರಾಯಚೂರು ಬಳಿಯ ಪವರ್ ಗ್ರೀಡ್ ಸಮೀಪ ನಡೆದಿದೆ.

ಮೃತನನ್ನು ತೆಲಂಗಾಣದ ಕೆಟಿ ದೊಡ್ಡಿಯ ಶಿವು (35) ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ಅಪರಿಚಿತ ವಾಹನ ಕುರಿಗಾಹಿ ಶಿವು ಹಾಗೂ ಕುರಿಗಳ ಮೇಲೆ ಹರಿದಿದೆ. ಪರಿಣಾಮ ಕುರಿಗಾಹಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತದಲ್ಲಿ ಕೆಲವು ಕುರಿಗಳು ಸಾವನ್ನಪ್ಪಿದೆ ಎನ್ನಲಾಗಿದೆ . ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.