Google News-KN | Google News-EN | Telegram |
ಮಧ್ಯಮ ಕ್ರಮಾಂಕದಲ್ಲಿ ಟ್ರಾವಿಸ್ ಹೆಡ್ ಶತಕ ಹಾಗೂ ಸ್ಟೀವನ್ ಸ್ಮಿತ್ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ದಿನ ಹಿಡಿತ ಸಾಧಿಸಿ ಬೃಹತ್ ಮೊತ್ತದತ್ತ ಮುನ್ನಡೆದಿದೆ.
ಓವಲ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪುಟಿದೇಳುವ ಪಿಚ್ ನಲ್ಲಿ ಮೊದಲು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ ದಿನದಾಟದ ವೇಳೆಗೆ ಮೊದಲ ಇನಿಂಗ್ಸ್ ನಲ್ಲಿ 3 ವಿಕೆಟ್ ಕಳೆದುಕೊಂಡು 327 ಗಳಿಸಿದೆ.
ಆಸ್ಟ್ರೇಲಿಯಾ ತಂಡ ಮೊದಲ ಅವಧಿಯಲ್ಲಿ ಸತತ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ತಂಡದ ಮೊತ್ತ 76 ರನ್ ಆಗುವಷ್ಟರಲ್ಲಿ ಉಸ್ಮಾನ್ ಖ್ವಾಜಾ (0), ಮಾರ್ಕೂಸ್ ಲುಬುಸ್ ಚೇಂಜ್ (26) ಮತ್ತು ಡೇವಿಡ್ ವಾರ್ನರ್ (46) ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.
ಈ ಹಂತದಲ್ಲಿ ಜೊತೆಯಾದ ಸ್ಟೀವನ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ನಾಲ್ಕನೇ ವಿಕೆಟ್ ಗೆ 251 ರನ್ ಗಳ ಜೊತೆಯಾಟ ನಿಭಾಯಿಸಿದರು. ಟ್ರಾವಿಡ್ ಹೆಡ್ 106 ಎಸೆತಗಳಲ್ಲಿ ಶತಕ ಪೂರೈಸಿದರು. ದಿನದಾಟದ ಅಂತ್ಯಕ್ಕೆ ಹೆಡ್ 156 ಎಸೆತಗಳಲ್ಲಿ 22 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 146 ರನ್ ಬಾರಿಸಿ ಔಟಾಗದೇ ಉಳಿದರೆ, ಸ್ಟೀವನ್ ಸ್ಮಿತ್ 227 ಎಸೆತಗಳಲ್ಲಿ 14 ಬೌಂಡರಿ ಸೇರಿದ 95 ರನ್ ಬಾರಿಸಿ ಔಟಾಗದೇ ಉಳಿದರು.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.