H​​3N​​2 ಸೋಂಕಿಗೆ ರಾಜ್ಯದಲ್ಲಿ ಮೊದಲ ಬಲಿ | Azad Times

3 weeks ago 4
Google News-KN Google News-EN Telegram Facebook

Azad Times News Desk.

ಕೊರೋನಾ ಬಳಿಕ ರಾಜ್ಯದಲ್ಲಿ ಈ ವರ್ಷ ಇತ್ತೀಚೆಗೆ H3N2 ವೈರಲ್​ ಸೋಂಕು ಕಾಲಿಟ್ಟಿದೆ. ಇದು ಆತಂಕ ಮೂಡಿಸಿದ್ದು ಶೀತ, ಜ್ವರ ಬೇಸಿಗೆಯಲ್ಲಿ ಸಾಕಷ್ಟು ಜನರನ್ನು ಕಾಡುತ್ತಿದೆ.

H3N2 ಸೋಂಕಿಗೆ ಕರ್ನಾಟಕದಲ್ಲಿ ಮೊದಲ ಸಾವು ಸಂಭವಿಸಿದೆ. H​​3N​​2 ವೈರಸ್​ನಿಂದ ಬಳಲುತ್ತಿದ್ದ ಹಾಸನ ಮೂಲದ ವೃದ್ಧ ಮೃತಪಟ್ಟಿದ್ದಾರೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಆಯುಕ್ತರೇ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

ಜ್ವರ, ಚಳಿ, ಗಂಟಲು ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ H3N2 ವೈರಸ್ ಹೆಚ್ಚಾಗುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಈವರೆಗೆ 6 ಮಂದಿಗೆ H​​3N​​2 ಸೋಂಕು ದೃಢಪಟ್ಟಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಈ ವೃದ್ದ ಮಾರ್ಚ್‌ 1ರಂದು ಮೃತಪಟ್ಟಿದ್ದು H3N2 ಇರೋದು ದೃಢವಾಗಿದೆ. ಸದ್ಯ ಸಾವಿನ ಬಗ್ಗೆ ಆಡಿಟ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದ್ದು,60 ವರ್ಷ ಮೇಲ್ಪಟ್ಟವರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.

ಹರಿಯಾಣದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿರುವುದರಿಂದ ಎಚ್ 3 ಎನ್ 2 ಸೋಂಕಿಗೆ ದೇಶದಲ್ಲಿ ಒಟ್ಟಾರೆ ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page