93 ವರ್ಷ ಹಳೆಯ ಬ್ರಾಡ್ಮನ್ ದಾಖಲೆ ಮುರಿದ ಇಂಗ್ಲೆಂಡ್ ಬ್ಯಾಟ್ಸ್ ಮನ್ ಡುಕೆಟ್! | Azad Times

3 months ago 4
Google News-KN Google News-EN Telegram Facebook

Azad Times News Desk.

ಇಂಗ್ಲೆಂಡ್ ನ ಯುವ ಬ್ಯಾಟ್ಸ್ ಮನ್ ಬೆನ್ ಡುಕೆಟ್ ಐರ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ನಲ್ಲಿ ಶತಕ ಸಿಡಿಸಿ ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದ್ದ 93 ವರ್ಷ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಡುಕೆಟ್ ಲಾರ್ಡ್ಸ್ ನಲ್ಲಿ ಅತ್ಯಂತ ವೇಗದ 150 ರನ್ ಸಿಡಿಸುವ ಮೂಲಕ ಬ್ರಾಡ್ಮನ್ ದಾಖಲೆ ಮುರಿದರು. ಡುಕೆಟ್ 150 ಎಸೆತಗಳಲ್ಲಿ 150 ರನ್ ಪೂರ್ಣಗೊಳಿಸುವ ಮೂಲಕ ಬ್ರಾಡ್ಮನ್ ಅವರಿಗಂತ 16 ಕಡಿಮೆ ಎಸೆತಗಳಲ್ಲಿ ಈ ಸಾಧನೆ ಮಾಡಿದರು.  ಬ್ರಾಡ್ಮನ್ 1930ರಲ್ಲಿ 166 ಎಸೆತಗಳಲ್ಲಿ 150 ರನ್ ಬಾರಿಸಿದ್ದರು.

ಡುಕೆಟ್ ಅಂತಿಮವಾಗಿ 178 ಎಸೆತಗಳಲ್ಲಿ 24 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 182 ರನ್ ಬಾರಿಸಿದ್ದಾಗ ಔಟಾಗಿ 18 ರನ್ ಗಳಿಂದ ದ್ವಿಶತಕ ವಂಚಿತರಾದರು. ಆದರೆ ಇದೇ ಅವಧಿಯಲ್ಲಿ ಡುಕೆಟ್ ಮತ್ತೊಂದು ದಾಖಲೆ ಬರೆದು ಗಮನ ಸೆಳೆದರು.

28 ವರ್ಷದ ಡುಕೆಟ್ ಭೋಜನ ಅವಧಿಗೂ ಮುನ್ನವೇ 100 ರನ್ ಪೂರೈಸುವ ಮೂಲಕ ಲಾರ್ಡ್ಸ್ ಮೈದಾನದಲ್ಲಿ 1924ರ ನಂತರ ಈ ಸಾಧನೆ ಮಾಡಿದ ಮೊದಲಿಗ ಎನಿಸಿಕೊಂಡರು. ಅಲ್ಲದೇ ಇದು ಡುಕೆಟ್ ಗೆ 2ನೇ ಟೆಸ್ಟ್ ಹಾಗೂ ತವರಿನಲ್ಲಿ ಚೊಚ್ಚಲ ಶತಕವಾಗಿದೆ.

ಡುಕೆಟ್ ಮತ್ತು ದ್ವಿಶತಕ ಸಿಡಿಸಿದ ಒಲಿ ಪೊಪ್ ಜೊತೆ 2ನೇ ವಿಕೆಟ್ ಗೆ 259 ರನ್ ಗಳ ಬೃಹತ್ ಮೊತ್ತದ ಜೊತೆಯಾಟ ನಿಭಾಯಿಸಿದರು. ಪೊಪ್ 208 ಎಸೆತಗಳಲ್ಲಿ 22 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 205 ರನ್ ಸಿಡಿಸಿದರು. ಅಂತಿಮವಾಗಿ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ಗೆ 524 ರನ್ ಗಳಿಸಿದ್ದಾಗ ಡಿಕ್ಲೇರ್ ಘೋಷಿಸಿತು.

ಮೊದಲ ಇನಿಂಗ್ಸ್ ನಲ್ಲಿ 172 ರನ್ ಗಳಿಸಿದ್ದ ಐರ್ಲೆಂಡ್ ಎರಡನೇ ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್ ನಲ್ಲಿ 3 ವಿಕೆಟ್ ಗೆ 97 ರನ್ ಗಳಿಸಿದ್ದು, ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು 277 ರನ್ ಗಳಿಸಬೇಕಾದ ಸಂಕಷ್ಟಕ್ಕೆ ಸಿಲುಕಿದೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page