78ಯೋಜನೆಗಳ 5,298 ಕೋಟಿ ರೂ. ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಏಕಗವಾಕ್ಷಿ ಸಮಿತಿ ಅನುಮೋದನೆ | Azad Times

2 months ago 2
Google News-KN Google News-EN Telegram Facebook

Azad Times News Desk.

ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ಉದ್ಯೋಗಾವಾಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 78 ಯೋಜನೆಗಳ 5298.69 ಕೋಟಿ ರೂ. ಬಂಡವಾಳಹೂಡಿಕೆಗೆ ಅನುಮೋದನೆ ನೀಡಿದೆ.

ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ಆರ್ ನಿರಾಣಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ 138ನೇ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಒಟ್ಟು 78ಯೋಜನೆಗಳಿಂದ 5298.69 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, 13917 ಜನರಿಗೆ ಉದ್ಯೋಗಗಳು ಲಭಿಸಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್ ನಿರಾಣಿ ತಿಳಿಸಿದ್ದಾರೆ.

ಅನುಮೋದನೆ ನೀಡಿರುವ ಪ್ರಸ್ತಾವನೆಗಳಲ್ಲಿ 50 ಕೋಟಿ ರೂ. ಗೂ ಹೆಚ್ಚಿನ ಬಂಡವಾಳ ಹೂಡಿಕೆಯ 17 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿಯು ಅನುಮೋದನೆ ನೀಡಿದೆ. ಇದರಿಂದ 3552.66ಕೋಟಿ ರೂ. ಬಂಡವಾಳ ಹೂಡಿಕೆಯಾಗಿ 6933 ಜನರಿಗೆ ಉದ್ಯೋಗ ಲಭಿಸಲಿದೆ ಎಂದು ಹೇಳಿದ್ದಾರೆ.

15 ಕೋಟಿ ರೂ. ಯಿಂದ 50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 59 ಹೊಸ ಯೋಜನೆಗಳಿಗೆ ಸಮಿತಿ ಹಸಿರು ನಿಶಾನೆ ನೀಡಿದೆ. ಒಟ್ಟು 1542.88 ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ಅಂದಾಜು 6984 ಜನರಿಗೆ ಉದ್ಯೋಗ ಸೃಜನೆಯಾಗಲಿದೆ.

ಹೆಚ್ಚುವರಿ ಬಂಡವಾಳ ಹೂಡಿಕೆಯ ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯು ಅನುಮೋದಿಸಿದ್ದು, 203.15 ಕೋಟಿ ರೂ. ಹೂಡಿಕೆಯಾಗಲಿದೆ.

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಓ ಆರ್. ಗಿರೀಶ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ಗಂಗಾಧರಯ್ಯ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತಿರಿದ್ದರು.

ಅನುಮೋದನೆ ನೀಡಿರುವ ಪ್ರಸ್ತಾವನೆಗಳು

ವಿಐಎನ್‌ಪಿ(VINP) ಡಿಸ್ಟಿಲರೀಸ್ ಮತ್ತು ಶುಗರ್ಸ್ ಪ್ರೈ. ಲಿಮಿಟೆಡ್, (ಯುಎನ್‌ಐಟಿ(UNIT II)), ಸ್ಥಳ: ಉತ್ತರ ಕನ್ನಡ, ಹೂಡಿಕೆ – 499.25, ಕೋಟಿ ರೂ , ಉದ್ಯೋಗ – 470

ಮುತ್ತಯ್ಯ ಪಾನೀಯ ಮತ್ತು ಮಿಠಾಯಿ ಪ್ರೈವೇಟ್ ಲಿಮಿಟೆಡ್, ಸ್ಥಳ: ತಮಿಳುನಾಡು, ಹೂಡಿಕೆ – 475 ಕೋಟಿ ರೂ, ಉದ್ಯೋಗ – 298

ಸಿಲೋನ್ ಬೆವರೇಜ್ ಕ್ಯಾನ್ ಪ್ರೈವೇಟ್ ಲಿಮಿಟೆಡ್,ಸ್ಥಳ: ತಮಿಳುನಾಡು, ಹೂಡಿಕೆ – 439.18 ಕೋಟಿ ರೂ, ಉದ್ಯೋಗ – 500
ಅನ್ವಿಶ್ ವೆಂಚರ್ಸ್, ಸ್ಥಳ: ಬೆಂಗಳೂರು, ಹೋಡಿಕೆ – 488.20 ಕೋಟಿ ರೂ, ಉದ್ಯೋಗ –1050

ಏಂಆರ್‌ಎನ್‌(MRN) ಚಾಮುಂಡಿ ಕ್ಯಾನೆಪವರ್ ಮತ್ತು ಬಯೋಫೈನರೀಸ್ ಪ್ರೈವೇಟ್ ಲಿಮಿಟೆಡ್ , ಸ್ಥಳ: ಬಾಗಲಕೋಟೆ, ಹೂಡಿಕೆ –248.02 ಕೋಟಿ ರೂ , ಉದ್ಯೋಗ- 461

ವೀನಸ್ ಟೆಕ್ನಾಲಜೀಸ್, ಸ್ಥಳ: ಬೆಂಗಳೂರು – ಹೋಡಿಕೆ– 249.70 ಕೋಟಿ ರೂ, ಉದ್ಯೋಗ – 700

ಶಿರಗುಪ್ಪಿ ಶುಗರ್ ವರ್ಕ್ಸ್ ಲಿಮಿಟೆಡ್ KAGWAD, ಸ್ಥಳ: ಬೆ ಳಗಾವಿ, ಹೂಡಿಕೆ –180 ಕೋಟಿ ರೂ, ಉದ್ಯೋಗ – 670

ಲ್ಯಾಂಡ್ಸ್ಕಿ ಆಟೋಮೇಷನ್ ಮತ್ತು ಪ್ರಕ್ರಿಯೆ ಪರಿಹಾರಗಳು ಪ್ರೈವೇಟ್ ಲಿಮಿಟೆಡ್, ಸ್ಥಳ: ತೆಲಂಗಾಣ ಹೂಡಿಕೆ – 127.2 ಕೋಟಿ ರೂ, ಉದ್ಯೋಗ –365
ಶ್ರೀ ಕೇಶವ್ ಸಿಮೆಂಟ್ಸ್ ಮತ್ತು ಇನ್ಫ್ರಾ ಲಿಮಿಟೆಡ್ ಬೆಳಗಾವಿ, ಸ್ಥಳ: ಬೆಂಗಳೂರು, ಹೂಡಿಕೆ- 124 ಕೋಟಿ ರೂ, ಉದ್ಯೋಗ – 168

ಎಎಸ್‌ಕೆ(ASK) ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್, ಸ್ಥಳ : ಕೋಲಾರ, ಹೂಡಿಕೆ –117.7 ಕೋಟಿ ರೂ, ಉದ್ಯೋಗ – 700

ಪಂಚಾಮೃತ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಸ್ಥಳ: ಧಾರವಾಡ, ಹೂಡಿಕೆ – 98 ಕೋಟಿ ರೂ, ಉದ್ಯೋಗ – 86
ಅಗಸ್ತ್ಯ ಆಗ್ರೋ ಲಿಮಿಟೆಡ್, ಸ್ಥಳ: ಸಿಕಂದರಾಬಾದ್, ಹೂಡಿಕೆ – 95 ಕೋಟಿ ರೂ, ಉದ್ಯೋಗ – 204

ಯೋನೆಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ , ಸ್ಥಳ: ಬೆಂಗಳೂರು ಅರ್ಬನ್, ಹೂಡಿಕೆ – 92 ಕೋಟಿ ರೂ. ಉದ್ಯೋಗ – 475

ಯಾನಾ ಸೋಲಾರ್ ಪ್ರೈವೇಟ್ ಲಿಮಿಟೆಡ್, ಸ್ಥಳ: ಬೆಂಗಳೂರು, ಹೂಡಿಕೆ – 90.14 ಕೋಟಿ ರೂ, ಉದ್ಯೋಗ– 200

ಶಾಲಿಮಾರ್ ಇನ್ಸೆನ್ಸ್ ಪ್ರೈವೇಟ್ ಲಿಮಿಟೆಡ್,ಸ್ಥಳ: ಬೆಂಗಳೂರು, ಹೂಡಿಕೆ – 81.27 ಕೋಟಿ ರೂ, ಉದ್ಯೋಗ – 91

ಇಶಾ ಫುಡ್ಸ್‌ ಬೆಂಗಳೂರು , ಸ್ಥಳ: ಬೆಂಗಳೂರು ,ಹೂಡಿಕೆ – 80 ಕೋಟಿ ರೂ, ಉದ್ಯೋಗ – 295

ಮಿಡಾಜ್ (MiDaz) ಹೋಮ್ ಕ್ರಾಫ್ಟ್ , ಸ್ಥಳ: ಬೆಂಗಳೂರು ಅರ್ಬನ್, ಹೂಡಿಕೆ – 68 ಕೋಟಿ ರೂ, ಉದ್ಯೋಗ -200

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page