39 ಎಸೆತದಲ್ಲಿ 88 ರನ್ ಚಚ್ಚಿದ ರಾಬಿನ್ ಉತ್ತಪ್ಪ: ಇಂಡಿಯ ಮಹರಾಜಸ್ ಗೆ 10 ವಿಕೆಟ್ ಜಯ | Azad Times

2 months ago 3
Google News-KN Google News-EN Telegram Facebook

Azad Times News Desk.

ಕರ್ನಾಟಕದ ಸ್ಟಾರ್ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ಮತ್ತು ಗೌತಮ್ ಗಂಭೀರ್ ಅವರ ಅಜೇಯ ಅರ್ಧಶತಕಗಳ ನೆರವಿನಿಂದ ಇಂಡಿಯ ಮಹರಾಜಸ್ ತಂಡ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಮಾಸ್ಟರ್ಸ್ ಟೊ-20 ಟೂರ್ನಿಯಲ್ಲಿ 10 ವಿಕೆಟ್ ಗಳ ಭಾರೀ ಅಂತರದಿಂದ ಏಷ್ಯನ್ ಲಯನ್ಸ್ ತಂಡವನ್ನು ಸೋಲಿಸಿದೆ.

ದೋಹಾದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಏಷ್ಯನ್ ಲಯನ್ಸ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಗೆ 157 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಇಂಡಿಯಾ ಲಯನ್ಸ್ ತಂಡ 12.3 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಜಯಭೇರಿ ಬಾರಿಸಿತು.

ರಾಬಿನ್ ಉತ್ತಪ್ಪ 39 ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 88 ರನ್ ಚಚ್ಚಿದರೆ, ಗೌತಮ್ ಗಂಭೀರ್ 36 ಎಸೆತಗಳಲ್ಲಿ 12 ಬೌಂಡರಿ ಸೇರಿದ 61 ರನ್ ಚಚ್ಚಿದರು.

ಇದಕ್ಕೂ ಮುನ್ನ ಏಷ್ಯನ್ ಲಯನ್ಸ್ ಪರ ಶ್ರೀಲಂಕಾದ ಉಪುಲ್ ತರಂಗ 48 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 69 ರನ್ ಗಳಿಸಿದರೆ, ತಿಲಕರತ್ನೆ ದಿಲ್ಶನ್ 36 ರನ್ ಬಾರಿಸಿದರು.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page