Google News-KN | Google News-EN | Telegram |
ಮೂರು ವರ್ಷದ ಮಗಳನ್ನು ಪ್ರಿಯಕರ ಜೊತೆಗೂಡಿ ಕೊಂದ ತಾಯಿ ಮೃತದೇಹವನ್ನು ಚಲಿಸುತ್ತಿದ್ದ ರೈಲಿನಿಂದ ಎಸೆದ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಶ್ರೀಗಂಗಾನಗರ ಜಿಲ್ಲೆಯಲ್ಲಿ ಈ ಘಟ ನಡೆದಿದ್ದು, ತಾಯಿ ಸುನಿತಾ ಮತ್ತು ಪ್ರಿಯಕರ ಸನ್ನಿ ಅಲಿಯಾಸ್ ಮಾಲ್ತಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮೂರು ವರ್ಷದ ಮಗಳು ಕಿರಣ್ ನನ್ನು ಕುತ್ತಿಗೆ ಹಿಸುಕಿ ಸಾಯಿಸಿದ ತಾಯಿ ನಂತರ ಪ್ರಿಯಕರನ ಜೊತೆಗೂಡಿ ಬೆಡ್ ಶೀಟ್ ನಲ್ಲಿ ಮೃತದೇಹವನ್ನು ಸುತ್ತಿ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದರು.
ಸೋಮವಾರ ಬೆಳಿಗ್ಗೆ 6.10ರ ಸುಮಾರಿಗೆ ರೈಲು ಹತ್ತಿದ ಇವರಿಬ್ಬರು ಫಥೌರಿ ರೈಲ್ವೆ ನಿಲ್ದಾಣ ಬರುವ ಮುನ್ನ ಬರುವ ಚಾನೆಲ್ ವೊಂದರ ಬ್ರಿಡ್ಜ್ ಬಳಿ ಮೃತದೇಹವನ್ನು ಎಸೆದಿದ್ದಾರೆ.
ಚಾನೆಲ್ ನಲ್ಲಿ ಮೃತದೇಹ ಎಸೆದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಅವರು ಬಯಸಿದ್ದರು. ಆದರೆ ಮೃತದೇಹ ರೈಲ್ವೆ ಪಟ್ಟಿ ಮೇಲೆ ಬಿದ್ದಿದೆ. ಮಂಗಳವಾರ ಬೆಳಿಗ್ಗೆ ಅಧಿಕಾರಿಗಳು ಮೃತದೇಹವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಸುನೀತಾಗೆ 5 ಮಕ್ಕಳಿದ್ದು, ಮೂರು ಮಕ್ಕಳಿಗೆ ಮದುವೆ ಆಗಿತ್ತು. ಉಳಿದ ಇಬ್ಬರು ಮಕ್ಕಳ ಜೊತೆ ಸನ್ನಿ ಜೊತೆ ಶಾಸ್ತ್ರೀನಗರದಲ್ಲಿ ವಾಸವಾಗಿದ್ದಳು.
ಪೊಲೀಸರು ಮಗುವಿನ ಮಾಹಿತಿ ಪಡೆದ ನಂತರ ತಾಯಿಯನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.