Google News-KN | Google News-EN | Telegram |
ಬಿಡಿಎ ವ್ಯಾಪ್ತಿಯ ಲೇಔಟ್ ಗಳಲ್ಲಿ 2020 ರ ಡಿಸೆಂಬರ್ 1 ರಿಂದ ಇಲ್ಲಿಯವರೆಗೆ 2 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಬಿಡಿಎ ಆಸ್ತಿಯನ್ನು ಭೂಕಬಳಿಕೆದಾರರಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ತಿಳಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ಬಿಡಿಎಯಿಂದ ವಿವಿದ ಬಡಾವಣೆಗಳಲ್ಲಿ ಒಟ್ಟು 3735 ನಿವೇಶನಗಳನ್ನು ಹರಾಜು ಮೂಲಕ ಸಾರ್ವಜನಿಕರಿಗೆ ಹಂಚಿಕೆ ಮಾಡಿದ್ದು ಇದರಿಂದ ಪ್ರಾಧಿಕಾರದ ಬೊಕ್ಕಸಕ್ಕೆ 3553 ಕೋಟಿ ರೂ. ಆದಾಯ ಬಂದಿದೆ ಎಂದರು.
ಪೆರಿಪೆರಲ್ ರಿಂಗ್ ರಸ್ತೆ ಆಗದ್ದು ಬೇಸರ
ಆದರೆ ನನ್ನ ಅವಧಿಯಲ್ಲಿ ಪೆರಿಫೆರಲ್ ರಿಂಗ್ರಸ್ತೆಯನ್ನು ಮಾಡಲಾಗಲಿಲ್ಲ ಎಂಬ ಬೇಸರ ನನ್ನಲ್ಲಿದೆ. ಈ ಹಿಂದೆ ನಿಗದಿಪಡಿಸಿದ ದರಕ್ಕೆ ಅನುಗುಣವಾಗಿ ನಿರ್ಮಾಣ ನಡೆಯಬೇಕೆಂಬ ಷರತ್ತು ಇದ್ದುದರಿಂದ ಆ ಕಾರ್ಯ ಸಾಧ್ಯವಾಗಲಿಲ್ಲ ಎಂದು ಇದೇ ವೇಳೆ ಹೇಳಿದರು.
ಅಂಜನಾಪುರ, ಮುಂದುವರಿದ ಅಂಜನಾಪುರ ಬಡಾವಣೆ, ಬನಶಂಕರಿ 6ನೇ ಹಂತ, ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಗಳು ಸೇರಿದಂತೆ ನಾನಾ ಬಡಾವಣೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕರಗ ಮಂಟಪದ ಜೀರ್ಣೋದ್ಧಾರಕ್ಕೆ 6.30 ಕೋಟಿ ರೂ. ಬಿಡುಗಡೆ ಮಾಡಲಾಗಿದ ಎಂದು ತಿಳಿಸಿದರು.
ಬಿಡಿಎ ಫ್ಲ್ಯಾಟ್ ಗಳಿಗೆ ಶೇ.10 ರಿಯಾಯಿತಿ
ಕಣಿಮಿಣಿಕೆಯಲ್ಲಿ ಮಾರಾಟವಾಗದೆ ಉಳಿದಿರುವ ಫ್ಲ್ಯಾಟ್ ಗಳಿಗೆ ಶೇ.10ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಜೂ.30ರವರೆಗೆ ಈ ರಿಯಾಯಿತಿ ಮುಂದುವರಿಯಲಿದೆ ಎಂದು ಬಿಡಿಎ ಅಧ್ಯಕ್ಷರು ತಿಳಿಸಿದರು.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.