19 ವರ್ಷದೊಳಗಿನವರ ಟಿ-20 ವಿಶ್ವಕಪ್: ಭಾರತ ವನಿತೆಯರಿಗೆ 7 ವಿಕೆಟ್ ಜಯ | Azad Times

4 months ago 140
Google News-KN Google News-EN Telegram Facebook

Azad Times News Desk.

ಭಾರತ ವನಿತೆಯರ ತಂಡ 19 ವರ್ಷದೊಳಗಿನವರ ಟಿ-20 ವಿಶ್ವಕಪ್ ನಲ್ಲಿ ಶ್ರೀಲಂಕಾ ವಿರುದ್ಧ 7 ವಿಕೆಟ್ ಜಯಭೇರಿ ಬಾರಿಸಿದೆ.

ದಕ್ಷಿಣ ಆಫ್ರಿಕಾದ ಪೋಚೆಸ್ಟ್ರೋಮ್ ನಲ್ಲಿ ಭಾನುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವನ್ನು 20 ಓವರ್ ಗಳಲ್ಲಿ 9 ವಿಕೆಟ್ ಗೆ 59 ರನ್ ಗಳಿಗೆ ನಿಯಂತ್ರಿಸಿದ ಭಾರತ ತಂಡ 7.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಭಾರತದ ಪರ ಸೌಮ್ಯಾ ತಿವಾರಿ 15 ಎಸೆತಗಳಲ್ಲಿ 5 ಬೌಂಡರಿ ಸೇರಿದ ಅಜೇಯ 28 ರನ್ ಬಾರಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಶೆಫಾಲಿ ವರ್ಮಾ (15) ಮತ್ತು ಶ್ವೇತಾ ಶೆರಾವತ್ (13) ಉಪಯುಕ್ತ ಕಾಣಿಕೆ ನೀಡಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಶ್ರೀಲಂಕಾ ತಂಡಕ್ಕೆ ಪಾರ್ಶವಿ ಚೋಪ್ರಾ 4 ವಿಕೆಟ್ ಪಡೆದು ಕಾಡಿದರು. ಲಂಕಾ ಪರ ನಾಯಕಿ ವಿಶ್ಮಯ್ ಗುಣರತ್ನೆ 25 ರನ್ ಬಾರಿಸಿ ನಡೆಸಿದ ಹೋರಾಟ ಫಲ ನೀಡಲಿಲ್ಲ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page