Google News-KN | Google News-EN | Telegram |
ನೆಟ್ ಕ್ಲಬ್ ಮೇಲೆ ದಾಳಿ ಮಾಡಿದ ಪೊಲೀಸರು 288ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದು, ಕ್ಲಬ್ ಮಾಲೀಕರು, ಮ್ಯಾನೇಜರ್ ಹಾಗೂ ಸಿಬಬ್ಂದಿ ವಿರುದ್ಧ ಎಫ್ ಐಆರ್ ದಾಖಲಿಸಿದ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಉದ್ಯೋಗ್ ವಿಹಾರ್ 3ನೇ ಹಂತದ ಪ್ರದೇಶದಲ್ಲಿನ ನೈಟ್ಕ್ಲಬ್ ಮೇಲೆ ಶನಿವಾರ ಮುಂಜಾನೆ ದಾಳಿ ನಡೆಸಿದ ಪೊಲೀಸರು 14 ಡ್ರಗ್ಸ್ ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ನಲ್ಲಿ ಡ್ರಗ್ಸ್ (Drugs) ಸೇವಿಸಿದ ಆರೋಪದ ಮೇಲೆ ಒಟ್ಟು 288 ಜನರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ವಶಕ್ಕೆ ಪಡೆದ 288 ಮಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ ಯಾವುದೇ ಕಳ್ಳಸಾಗಣೆ ಪತ್ತೆಯಾಗಿಲ್ಲ. ಕ್ಲಬ್ ಅನ್ನು ಖಾಲಿ ಮಾಡಿಸಿದ ನಂತರ ಅಪರಾಧ ದೃಶ್ಯ ತಂಡವು ತೀವ್ರ ಶೋಧವನ್ನು ನಡೆಸಿತು ಎಂದು ಉದ್ಯೋಗ್ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಮನೋಜ್ ಕುಮಾರ್ ಹೇಳಿದ್ದಾರೆ.
14 ಡ್ರಗ್ಸ್ ಪ್ಯಾಕೆಟ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ನಾವು ರಕ್ತದ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸುತ್ತೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.