ಮದ್ಯ ಸೇವಿಸಿ ಬಾಟ್ಲಿಯಿಂದ ತಂದೆಯ ತಲೆಗೆ ಹೊಡೆದು ಸಾಯಿಸಿದ ಮಗ | Azad Times

8 months ago 7
Google News-KN Google News-EN Telegram Facebook

Azad Times News Desk.

ಲಂಡನ್ ನಗರದ ಉತ್ತರಭಾಗಕ್ಕಿರುವ ಸೌತ್ ಗೇಟ್ ಪ್ರದೇಶದ ಭಾರತೀಯ ಮೂಲದ ವ್ಯಕ್ತಿಯೊಬ್ಬ ಮದ್ಯದ ಬಾಟಲಿಯಿಂದ ತಂದೆಯ ತಲೆಗೆ ಹೊಡೆದು ಕೊಂದಿರುವ ಪ್ರಕರಣ ಒಂದೂವರೆ ವರ್ಷದ ಹಿಂದೆ ನಡೆದಿದ್ದು, ಈಗ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿದೆ.

ದೀಕನ್ ಸಿಂಗ್ ವಿಗ್ ಅರ್ಧ ಬಾಟಲಿಯಷ್ಟು ವಿಸ್ಕಿಯನ್ನು ಕುಡಿದ ನಂತರ ತಂದೆ ಅರ್ಜನ್ ಸಿಂಗ್ ವಿಗ್ ಅವರ ತಲೆಗೆ ಹೊಡೆದು ಸಾಯಿಸಿದ್ದಾನೆ. ಪೊಲೀಸರು ನೋಡುವಾಗ ಅರ್ಜನ್ ಸಿಂಗ್ ದೇಹ ರಕ್ತದ ಮಡುವಿನಲ್ಲಿತ್ತು ಮತ್ತು ಮಗ ಬೆತ್ತಲೆಯಾಗಿ ಮುಂದೆ ಕುಳಿತಿದ್ದ. 100 ಶಾಂಪೇನ್ ಬಾಟಲಿಗಳು ಬಿದ್ದಿದ್ದವು.ಒಂದು ಬಾಟಲಿಗೆ ರಕ್ತ ಮೆತ್ತಿಕೊಂಡಿತ್ತು.

54 ವರ್ಷದ ದೀಕನ್ ಸಿಂಗ್, ನಮ್ಮಪ್ಪ ಸತ್ತಿದ್ದಾನೆ, ಅವನನ್ನು ನಾನೇ ಕೊಂದೆ, ವಿಸ್ಕಿಯ ಬಾಟಲಿಯಿಂದ ಅವನ ತಲೆಗೆ ಜೋರಾಗಿ ಹೊಡೆದೆ ಹೃದಯಾಘಾತಕ್ಕೊಳಗಾಗಿ ಸಾಯುವವನಿದ್ದ, ನಾನೇ ಕೊಂದುಬಿಟ್ಟೆ. ನನಗೆ ಫ್ರೆಂಚ್ ವಿಸ್ಕಿಯೆಂದರೆ ಆಗದು, ಐ ಹೇಟ್ ಇಟ್ ಅಂತ ಪೊಲೀಸರ ಮುಂದೆ ಹೇಳಿದ್ದಾನೆ.

ದೀಕನ್ ತನ್ನ ತಂದೆ, ತಾಯಿ ದಮನ್ಜಿತ್ ವಿಗ್ ರೊಂದಿಗೆ 40 ವರ್ಷಗಳಿಂದ ಇಲ್ಲಿ ವಾಸವಿದ್ದು, ಅದೇ ಮನೆಯಲ್ಲಿ ಅವನ ಸಹೋದರಿ ರಿಪ್ಪನ್ ವಿಗ್ ಸಂಗಾತಿಯೊಂದಿಗೆ ವಾಸವಾಗಿದ್ದಾಳೆ. ವಿಗ್ ಕುಟುಂಬ ಮೊದಲು ಉಗಾಂಡದಲ್ಲಿ ವಾಸವಾಗಿತ್ತು. ದೀಕನ್ 5 ವರ್ಷದವನಾಗಿದ್ದಾಗ ಉಗಾಂಡಾದ ಸರ್ವಾಧಿಕಾರಿ ಏಷ್ಯನ್ ಸಮುದಾಯಗಳ ಜನರನ್ನು ದೇಶದಿಂದ ಹೊರದಬ್ಬಲಾರಂಭಿಸಿದ್ದರಿಂದ ಅವರು ಯುಕೆಗೆ ಬಂದು ನೆಲೆಸಿದ್ದರು. ಅರ್ಜನ್ ಸಿಂಗ್ ವೃತ್ತಿಯಲ್ಲಿ ಒಬ್ಬ ಅಕೌಂಟಂಟ್ ಆಗಿದ್ದರು ಮತ್ತು ಪತ್ನಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಆತನ ತಂಗಿ ವಕೀಲೆಯಾಗಿದ್ದಾರೆ. ದೀಕನ್‌ ಫ್ಯಾಮಿಲಿ ಬಿಸಿನೆಸ್ ನಲ್ಲಿ ತಂದೆ ಜೊತೆ ಕೈ ಜೋಡಿಸಿದ್ದ. ಲಾಕ್ ಡೌನ್ ಸಂದರ್ಭದಲ್ಲಿ ಮದ್ಯದ ದಾಸನಾದ ಎಂದು ತಿಳಿದು ಬಂದಿದೆ.

ಕೊಲೆಯಾದ ದಿನ ತಾಯಿ ಮಗಳನ್ನು ಕರೆದು ದೀಕನ್ ಕಂಠಮಟ್ಟ ಕುಡಿದಿದ್ದಾನೆ, ಅವನು ನಿಯಂತ್ರಣಲ್ಲಿಲ್ಲ ಅಂತ ಹೇಳಿದಾಗ, ಮಗಳು 999 ಗೆ ಕಾಲ್ ಮಾಡಿದ್ದಾರೆ ಎಂದು ಪ್ರಾಸಿಕ್ಯೂಟರ್ ಕೋರ್ಟ್ ಗೆ ತಿಳಿಸಿದ್ದಾರೆ. ಪೊಲೀಸರು ಶಕ್ತಿ ಪ್ರಯೋಗಿಸಿ ಆತನಿದ್ದ ರೂಂ ಬಾಗಿಲು ತೆರೆದಾದ ದೀಕನ್ ಬೆತ್ತಲೆ ಸ್ಥಿತಿಯಲ್ಲಿದ್ದ ಮತ್ತು ಕೈ ಮತ್ತು ಪಾದಗಳು ರಕ್ತಸಿಕ್ತವಾಗಿದ್ದವು. ಪ್ರಕರಣದ ವಿಚಾರಣೆ ಮುಂದುವರಿದಿದೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page