Google News-KN | Google News-EN | Telegram |
ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯವನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
ಮಾರ್ಚ್ 1ರಿಂದ 5ರವರೆಗೆ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಚಳಿಗಾಲದ ಕಾರಣ ಇಬ್ಬನಿ ಆವರಿಸಿದ್ದು, ಮೈದಾನ ತೇವಗೊಂಡಿರುವ ಕಾರಣ ಸ್ಥಳಾಂತರಿಸಲು ಬಿಸಿಸಿಐ ನಿರ್ಧರಿಸಿದೆ.
ಮೂರನೇ ಟೆಸ್ಟ್ ಪಂದ್ಯವನ್ನು ಬೆಂಗಳೂರು ಅಥವಾ ವಿಶಾಖಪಟ್ಟಣದಲ್ಲಿ ನಿಯೋಜಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಿದೆ.
ಬಿಸಿಸಿಐ ಕ್ಯೂರೇಟರ್ ಥಪೋಷ್ ಚಟರ್ಜಿ ನೇತೃತ್ವದ ಸಮಿತಿ ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿದ್ದು, ಪಿಚ್ ಮತ್ತು ಮೈದಾನದ ಬಗ್ಗೆ ಬಿಸಿಸಿಐಗೆ ವರದಿ ನೀಡಲಿದ್ದು, ವರದಿ ಕೈ ತಲುಪಿದ ಕೂಡಲೇ ಈ ಬಗ್ಗೆ ತೀರ್ಮಾನ ಹೊರಬೀಳಲಿದೆ.
ಟೆಸ್ಟ್ ಪಂದ್ಯ ನಡೆಯಬೇಕಾದರೆ ಬಿಸಿಸಿಐ ಕೆಲವು ಮಾರ್ಗದರ್ಶಗಳನ್ನು ಹಾಕಿದ್ದು, ಈ ನಿಯಮಗಳ ಅನ್ವಯ ಮೈದಾನ ಇದ್ದರೆ ಮಾತ್ರ ಪಂದ್ಯ ನಡೆಯಲಿದೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.