ಬೀದರ ಜಿಲ್ಲಾದ್ಯಂತ ಅಬಕಾರಿ ಇಲಾಖೆ ಪುಲ್ ಅಲರ್ಟ್ | Azad Times

2 months ago 2
Google News-KN Google News-EN Telegram Facebook

Azad Times News Desk.

ಬೀದರ : ಬೀದರ ಜಿಲ್ಲಾದ್ಯಂತ ಅಬಕಾರಿ ಇಲಾಖೆ ಪುಲ್ ಅಲರ್ಟ್ ಆಗದೆಯೆಂದು ಹೇಳಬಹುದು. ಚುನಾವಣೆ ಸಂದರ್ಭದಲ್ಲಿ ಜನರು ಕುಡಿದು ಗಲಾಟೆ ಆಗಬಾರದು ಎಂಬ ಕಾರಣಕ್ಕೆ ಬೀದರ ಜಿಲ್ಲಾದ್ಯಂತ ಅಬಕಾರಿ ಅಧಿಕಾರಿಗಳು 24 ಚೆಕ್ ಪೋಸ್ಟ್ ಮಾಡಿ ಕುಡುಕರ ಮೇಲೆ ಹದ್ದಿನ ಕಣ್ಣು ಇಟ್ಟಿದ್ದು ಪ್ರತಿಯೊಂದು ತಾಲ್ಲೂಕಿನಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ.

ಅಬಕಾರಿ ಇಲಾಖೆಯು ಭಾಲ್ಕಿ ಪಟ್ಟಣದಲ್ಲಿ ಮಿಂಚಿನ ದಾಳಿ ಮಾಡಿ 6.9 ಲಕ್ಷ ಸಾವಿರ ಮೌಲ್ಯದ ಮದ್ಯ ಮತ್ತು ವಾಹನ ಜಪ್ತಿ ಮಾಡಿದರು.

ಭಾಲ್ಕಿ ಮತ್ತು ಬೀದರ್ ತಾಲ್ಲೂಕುಗಳಲ್ಲಿ ಮುಂಬರುವ ವಿಧಾನ ಸಭಾ ಚುನಾವಣಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಬಕಾರಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಉಪ ಆಯುಕ್ತರಾದ ಇಸ್ಮಾಯಿಲ ಇನಾಂದಾರ ಇವರ ನಿರ್ದೇಶನದಲ್ಲಿ ಹಾಗೂ ಆನಂದ ಉಕ್ಕಲಿ, ಅಬಕಾರಿ ಉಪ ಅಧೀಕ್ಷಕರು, ಉಪ ವಿಭಾಗ, ಬೀದರ ರವರ ಮಾರ್ಗದರ್ಶನದಂತೆ,

  • ಭಾಲ್ಕಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಖಚಿತ ಮಾಹಿತಿ ಮೇರೆಗೆ 01 ದ್ವಿ-ಚಕ್ರ ವಾಹನದಲ್ಲಿ 43.200 ಲೀ. ಮದ್ಯವನ್ನು ಜಪ್ತಿ ಮಾಡಿ ಸದರಿ ವಾಹನ ಚಾಲಕ ದಿಲೀಪ ಬುಯೆ ಎಂಬಾತನನ್ನು ಬಂಧಿಸಿ ನಿಂಗನಗೌಡ ಪಾಟೀಲ್‍, ಅಬಕಾರಿ ನಿರೀಕ್ಷಕರು ಇವರು ಪ್ರಕರಣವನ್ನು ದಾಖಲಿಸಿ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು ಸದರಿ ದಾಳಿಯಲ್ಲಿ ಕಾಶಿನಾಥ, ಅ.ಉ.ನಿ ಹಾಗೂ ಅಬಕಾರಿ ಪೇದೆಯಾದ  ವಿಠಲ್‍ ಇವರುಗಳು ಭಾಗವಹಿಸಿದ್ದರು.
  • ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಮುಖ್ಯ ರಸ್ತೆಯಲ್ಲಿ ಖಚಿತ ಮಾಹಿತಿ ಮೇರೆಗೆ 01 Baleno ಕಾರಿನಲ್ಲಿ ಮಾರಾಟಕ್ಕಾಗಿ ಸಾಗಾಟ ಮಾಡುತ್ತಿದ್ದ  3.600 ಲೀ. ಮದ್ಯ ಮತ್ತು 29.900 ಲೀ ಬೀಯರ ಅನ್ನು ಜಪ್ತಿ ಮಾಡಿ ಸದರಿ ವಾಹನ ಚಾಲಕನಾದ ಪ್ರಕಾಶ ತಂದೆ ವಿಲಾಸ ಲಂಜವಾಣಿ ಎಂಬಾತನನ್ನು ಬಂಧಿಸಿ ನಿಂಗನಗೌಡ ಪಾಟೀಲ್‍, ಅಬಕಾರಿ ನಿರೀಕ್ಷಕರು ಇವರು ಪ್ರಕರಣವನ್ನು ದಾಖಲಿಸಿ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. ಸದರಿ ದಾಳಿಯಲ್ಲಿ ಅಬಕಾರಿ ಪೇದೆಯಾದ ವೈಜನಾಥ ಪಾಟೀಲ ಮತ್ತು  ವಿಠ್ಠಲ ಇವರುಗಳು ಭಾಗವಹಿಸಿದ್ದರು.
  • ಬೀದರ್‍ ತಾಲ್ಲೂಕಿನ ಭೈರನಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮಾರಾಟದ ಉದ್ದೇಶಕ್ಕಾಗಿ ಕಿರಾಣಿ ಅಂಗಡಿಯಲ್ಲಿ ಸಂಗ್ರಹಿಸಿಟ್ಟಿದ್ದ 180 ಎಂಎಲ್ ಮದ್ಯದ ಒಟ್ಟು 34 ಟೆಟ್ರಾಪ್ಯಾಕ್ ಗಳನ್ನು ಜಪ್ತಿ ಮಾಡಿ ಸದರಿ ಕಿರಾಣಿ ಅಂಗಡಿಯ ಮಾಲೀಕನಾದ ಶರಣಪ್ಪಾ ತಂದೆ ಭೀಮಶಾ ಎಂಬುವವನ ಮೇಲೆ ಸತ್ಯಾನಾರಾಯಣ ತ್ರಿವೇದಿ, ಅಬಕಾರಿ ನಿರೀಕ್ಷಕರು ಇವರು ಪ್ರಕರಣವನ್ನು ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಸದರಿ ದಾಳಿಯಲ್ಲಿ ಶ್ರೀಮತಿ ಶೋಭಾ, ಅ.ಉ.ನಿ ಹಾಗೂ ಅಬಕಾರಿ ಪೇದೆಗಳಾದ ರಾಜ್‍ ರೆಡ್ಡಿ, ಶಾಂತಕುಮಾರ ಇವರುಗಳು ಭಾಗವಹಿಸಿದ್ದರು.
  • ಬೀದರ್‍ ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಸಿಂದೋಲ ಕ್ರಾಸ್ ಹತ್ತಿರದಲ್ಲಿ ಒಂದು ದ್ವಿ-ಚಕ್ರ ವಾಹನದ ಮೇಲೆ ಒಟ್ಟು 60.480 ಲೀ ಮದ್ಯ ಮತ್ತು 15.600 ಲೀ ಬೀಯರ್ ಸಾಗಾಣಿಕೆ ಮಾಡುತ್ತಿರುವುದು ಜಫ್ತುಪಡಿಸಿ, ನರೇಶ ತಂದೆ ಸಂಗಪ್ಪ ಕೈರಂಕೊಂಡ ಎಂಬ ವಾಹನ ಚಾಲಕನ್ನು ಬಂಧಿಸಿ ದಿಲೀಪ ಸಿಂಗ್ ಠಾಕೂರ, ಅಬಕಾರಿ ಉಪ ನಿರೀಕ್ಷಕರು, ಉಪ ವಿಭಾಗ, ಬೀದರ ಇವರು ಪ್ರಕರಣವನ್ನು ದಾಖಲಿಸಿ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. ಸದರಿ ದಾಳಿಯಲ್ಲಿ ರವೀಂದ್ರ ಪಾಟೀಲ್, ಅಬಕಾರಿ ನಿರೀಕ್ಷಕರು ಮತ್ತು ಅಬಕಾರಿ ಪೇದೆಯಾದ  ಅನಿಲಕುಮಾರ  ಮತ್ತು  ವಿಷ್ಣುವರ್ಧನ ವಾಹನ ಚಾಲಕ ಇವರುಗಳು ಭಾಗವಹಿಸಿದ್ದರು.

ಜಪ್ತಿ ಪಡಿಸಿರುವ 04 ಪ್ರಕರಣಗಳಲ್ಲಿನ ಮುದ್ದೆಮಾಲಿನ ಅಂದಾಜು ಒಟ್ಟು ಮೌಲ್ಯ ರೂ. 6,86,300/- ಗಳಾಗಿರುತ್ತವೆ ಎಂದು  ಅಬಕಾರಿ ಉಪ ಆಯುಕ್ತರಾದ ಮಹ್ಮದ ಇಸ್ಮಾಯಿಲ ಇನಾಂದಾರ ಇವರು ಪತ್ರಿಕಾ ಪ್ರಕಟಣೆ ನೀಡಿರುತ್ತಾರೆ.


ವರದಿ: ನಂದಕುಮಾರ ಕರಂಜೆ, ಬೀದರ

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page