ವಿಶ್ವ ಆಹಾರ ಸುರಕ್ಷತಾ ದಿನ 2023 | Azad Times

3 months ago 4
Google News-KN Google News-EN Telegram Facebook

Azad Times News Desk.

- Advertisement -

2019 ರಲ್ಲಿ, ಈ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಆಹಾರ ಮತ್ತು ಕೃಷಿ ಸಂಸ್ಥೆಯ ಸಹಯೋಗದೊಂದಿಗೆ ಮೊದಲ ಬಾರಿಗೆ ಆಚರಿಸಲಾಯಿತು. ಈ ದಿನ ಆಚರಣೆ ಮೂಲಕ ಉತ್ತಮ ಆಹಾರ ಪದ್ಧತಿಯ ಬಗ್ಗೆ ಜನರಿಗೆ ಅರಿವು ಮೂಡಿಸಲು ನಿರ್ಧರಿಸಲಾಯಿತು. ಪ್ರತಿ ವರ್ಷ ಈ ದಿನಕ್ಕೆ ವಿಭಿನ್ನ ಥೀಮ್ ಅನ್ನು ಹೊಂದಿಸಲಾಗುತ್ತದೆ. ವಿಶ್ವ ಆಹಾರ ಸುರಕ್ಷತಾ ದಿನದ ಹಿನ್ನೆಲೆಯಲ್ಲಿ ಈ ದಿನಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ನಿಮಗಾಗಿ ಇಲ್ಲಿದೆ.

ವಿಶ್ವ ಆಹಾರ ಮತ್ತು ಸುರಕ್ಷತಾ ದಿನದ ಇತಿಹಾಸ :

ಜುಲೈ 2017 ರಲ್ಲಿ, ಆಹಾರ ಮತ್ತು ಕೃಷಿ ಸಂಸ್ಥೆ (FAO) ಸಮ್ಮೇಳನದ 40 ನೇ ಅಧಿವೇಶನದಲ್ಲಿ, ವಿಶ್ವ ಆಹಾರ ಮತ್ತು ಸುರಕ್ಷತಾ ದಿನವನ್ನು ಆಚರಿಸುವ ಬಗ್ಗೆ ಪ್ರಸ್ತಾಪಿಸಲಾಯಿತು. WHO ಇದಕ್ಕೆ ತನ್ನ ಬೆಂಬಲ ಸೂಚಿಸಿತು. ನಂತರ ಈ ಪ್ರಸ್ತಾಪವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇರಿಸಲಾಯಿತು. 20 ಡಿಸೆಂಬರ್ 2018 ರಂದು, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಈ ಪ್ರಸ್ತಾಪಕ್ಕೆ ಮುದ್ರೆಯೊತ್ತಿತು.

ಈ ಮೂಲಕ  ಜೂನ್ 7 ರಂದು ವಿಶ್ವ ಆಹಾರ ಮತ್ತು ಸುರಕ್ಷತೆ ದಿನ ಆಚರಿಸುವ ಬಗ್ಗೆ  ಘೋಷಣೆ ಮಾಡಲಾಯಿತು. WHO ಮತ್ತು ಆಹಾರ ಮತ್ತು ಕೃಷಿ ಸಂಸ್ಥೆಯ ಸಹಯೋಗದೊಂದಿಗೆ 7 ಜೂನ್ 2019 ರಂದು ಮೊದಲ ಬಾರಿಗೆ ಈ ದಿನವನ್ನು ಆಚರಿಸಲಾಯಿತು. ಅಂದಿನಿಂದ, ಪ್ರತಿ ವರ್ಷ ಈ ದಿನಾಂಕದಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಆಹಾರ ಸುರಕ್ಷತಾ ದಿನಾಚರಣೆಯ ಉದ್ದೇಶ: 

- Advertisement -

WHO ಪ್ರಕಾರ, ಕಲುಷಿತ ಆಹಾರದಿಂದ ಪ್ರತಿ ವರ್ಷ ಲಕ್ಷಾಂತರ ಜನರು ಸಾಯುತ್ತಾರೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ದೊಡ್ಡ ಅಪಾಯ ಉಂಟಾಗುತ್ತಿದ್ದು, ಅವರ ರೋಗನಿರೋಧಕ ಶಕ್ತಿ ತುಂಬಾ ದುರ್ಬಲವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಜನರಿಗೆ ಆಹಾರದ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ. ಈ ಉದ್ದೇಶದಿಂದ, ಪ್ರತಿ ವರ್ಷ WHO ಮತ್ತು ಆಹಾರ ಮತ್ತು ಕೃಷಿ ಸಂಸ್ಥೆ ಒಟ್ಟಾಗಿ ಈ ದಿನವನ್ನು ಆಚರಿಸುತ್ತವೆ.

2023 ರ ಥೀಮ್ ಏನು?:

ಪ್ರತಿ ವರ್ಷ ಈ ದಿನವನ್ನು ಆಚರಿಸಲು ಒಂದು ಥೀಮ್ ಅನ್ನು ಹೊಂದಿಸಲಾಗುತ್ತದೆ. ವಿಶ್ವ ಆಹಾರ ಮತ್ತು ಸುರಕ್ಷತಾ ದಿನ 2023 ರ  ಥೀಮ್ Food standards save lives ಎನ್ನುವುದು. ಈ ಥೀಮ್ ಮೂಲಕ ಆಹಾರಕ್ಕಾಗಿ ಹೊಂದಿಸಲಾದ ಮಾನದಂಡಗಳ ಪ್ರಾಮುಖ್ಯತೆಯನ್ನು ಜನರು ಅರ್ಥಮಾಡಿಕೊಳ್ಳಬೇಕು. ‘ಸುರಕ್ಷಿತ ಆಹಾರ, ಉತ್ತಮ ಆರೋಗ್ಯ’ ಎನ್ನುವುದು  2022 ರ ಥೀಮ್ ಆಗಿತ್ತು. ಈ ವಿಷಯದ ಮೂಲಕ, ಉತ್ತಮ ಆರೋಗ್ಯಕ್ಕಾಗಿ ಶುದ್ಧ ಮತ್ತು ಪೌಷ್ಟಿಕ ಆಹಾರದ ಮಹತ್ವವನ್ನು ಜನರಿಗೆ ವಿವರಿಸಿ ಹೇಳಲಾಗಿತ್ತು.


ಹೇಮಂತ ಚಿನ್ನು

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page