Google News-KN | Google News-EN | Telegram |
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಕುಸಿದಿದ್ದರೂ ದೇಶೀಯ ಮಾರುಕಟ್ಟೆಯಲ್ಲಿ ಬೆಲೆಗಳು ಕಡಿಮೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಡುಗೆ ಎಣ್ಣೆ ಬೆಲೆಯಲ್ಲಿ ಕಡಿತ ಮಾಡುವಂತೆ ಸೂಚಿಸಿದೆ.
ದರ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಕೇಂದ್ರವು ಶುಭ ಸುದ್ದಿ ನೀಡಿದೆ. ಅಡುಗೆ ಎಣ್ಣೆ ದರವು ಶೀಘ್ರವೇ ಇಳಿಕೆಯಾಗಲಿದೆ. ಖಾದ್ಯ ತೈಲಗಳ ಚಿಲ್ಲರೆ ಬೆಲೆ ಇಳಿಕೆ ಕುರಿತು ಕೇಂದ್ರ ಸರ್ಕಾರ ಸಭೆಯಲ್ಲಿ ಚರ್ಚಿಸಿದೆ.
ಸಾಲ್ವೆಂಟ್ ಎಕ್ಸ್‌ಟ್ರಾಕ್ಷನ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಭಾರತೀಯ ತರಕಾರಿ ತೈಲ ಉತ್ಪಾದಕರ ಸಂಘದ ಉದ್ಯಮದ ಪ್ರತಿನಿಧಿಗಳ ಸಭೆಯಲ್ಲಿ ಬೆಲೆ ಇಳಿಕೆ ನಿರ್ದೇಶನ ನೀಡಿದೆ.
ಜಾಗತಿಕ ಮಾರುಕಟ್ಟೆಗನುಗುಣವಾಗಿ ಅಡುಗೆ ಎಣ್ಣೆಯ ಎಂಆರ್ ಪಿ ದರವನ್ನು ಪ್ರತಿ ಲೀಟರ್‌ಗೆ 8 ರಿಂದ 12 ರೂ. ಕಡಿಮೆಗೊಳಿಸುವಂತೆ ಕೇಂದ್ರ ಆಹಾರ ಸಚಿವಾಲಯವು ಶುಕ್ರವಾರ ಉದ್ಯಮಗಳಿಗೆ ಸೂಚಿಸಿದೆ.
ಕಳೆದ ಹಲವು ತಿಂಗಳಿನಿಂದ ವಿವಿಧ ಖಾದ್ಯ ತೈಲಗಳ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದಿದ್ದರೂ ಸಹಿತ ದೇಶೀಯ ಮಾರುಕಟ್ಟೆಯಲ್ಲಿನ ಬೆಲೆಗಳು ಕಡಿಮೆಯಾಗುತ್ತಿಲ್ಲ. ಹೀಗಾಗಿ ಅಡುಗೆ ಎಣ್ಣೆ ಬೆಲೆಯನ್ನು ಕಡಿತ ಮಾಡುವಂತೆ ಸೂಚಿಸಿಲಾಗಿದೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.