Google News-KN | Google News-EN | Telegram |

ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಭಾರತದ ಆಡುವ ಬಳಗದ ಬಗ್ಗೆ 3 ಪ್ರಮುಖ ನಿರ್ಧಾರಗಳನ್ನು ಮಾಡುವ ಒತ್ತಡದಲ್ಲಿದ್ದಾರೆ.
ಲಂಡನ್ ನಲ್ಲಿ ಜೂನ್ 7ರಿಂದ ಆರಂಭಗೊಳ್ಳಲಿರುವ ಫೈನಲ್ ನಲ್ಲಿ ಪ್ರಬಲ ಆಸ್ಟ್ರೇಲಿಯಾವನ್ನು ಎದುರಿಸಲಿರುವ ಭಾರತ ತಂಡ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಇಬ್ಬರೂ ಬೇಕೆ ಅಥವಾ ಒಬ್ಬ ಸ್ಪಿನ್ನರ್ ಸಾಕೆ? ಮೂರನೇ ವೇಗಿಗಳಲ್ಲಿ ಉಮೇಶ್ ಯಾದವ್ ಅವರ ಶಾರ್ದೂಲ್ ಠಾಕೂರ್ ಆಡಬೇಕೆ ಮತ್ತು ವಿಕೆಟ್ ಹಿಂದೆ ಭರತ್ ಅಥವಾ ಇಶಾನ್ ನಿಲ್ಲಬೇಕೆ ಎಂಬುದು ನಿರ್ಧಾರವಾಗಬೇಕಿದೆ.
ಕಳೆದ ಬಾರಿ ಇಂಗ್ಲೆಂಡ್‌ನಲ್ಲಿ ನಡೆದ ಎಲ್ಲಾ ಐದು ಟೆಸ್ಟ್‌ಗಳಲ್ಲಿ ಟೀಂ ಇಂಡಿಯಾ ಅಶ್ವಿನ್‌ಗಿಂತ ಜಡೇಜಾಗೆ ಆದ್ಯತೆ ನೀಡಿತ್ತು. ಅಶ್ವಿನ್ ಬೆಂಚ್ ಕಾಯಿಸಿದರು.
ಈ ಬಾರಿ, ಯಾವುದೇ ಬೆಲೆ ತೆತ್ತಾದರೂ ಅಶ್ವಿನ್ ಅವರನ್ನು ಆಡಿಸಲು ಮಾಜಿ ದಿಗ್ಗಜರು ಕರೆ ನೀಡಿದ್ದಾರೆ.ಓವಲ್‌ನಲ್ಲಿನ ಪಿಚ್ ನಾಲ್ಕನೇ ಮತ್ತು ಐದನೇ ದಿನದಲ್ಲಿ ಸ್ಪಿನ್ನರ್‌ಗಳಿಗೆ ಮೇಲುಗೈ ನೀಡುವ ನಿರೀಕ್ಷೆಯಿರುವುದ ಈ ಹುಯಿಲಿಗೆ ಕಾರಣ ಶಾರ್ದೂಲ್ ಠಾಕೂರ್ ಅಥವಾ ಉಮೇಶ್ ಯಾದವ್?-ಈ ಇಬ್ಬರಲ್ಲಿ ರೋಹಿತ್ ಶರ್ಮಾಗೆ ಶಾರ್ದೂಲ್ ಠಾಕೂರ್ ಸ್ಪಷ್ಟ ಆಯ್ಕೆ.
ಆದರೆ, ಉಮೇಶ್ ಯಾದವ್ ಸ್ವಿಂಗ್ ಜೊತೆಗೆ ವೇಗವನ್ನು ತರುತ್ತಾರೆ.ಅದರಲ್ಲಿಯೂ ಬುಮ್ರಾ ಅನುಪಸ್ಥಿತಿಯಲ್ಲಿ ಯಾದವ್ ಅವರ ಹೆಚ್ಚುವರಿ ಪುಟಿತ ಕೆಲಸಕ್ಕೆ ಬರಬಹುದು. ವಿಕೆಟ್ ಹಿಂದೆ ಯಾರು ಎಂಬ ಪ್ರಶ್ನೆ.ರಿಷಬ್ ಪಂತ್ ಅನುಪಸ್ಥಿತಿಯಲ್ಲಿ, ಎಲ್ಲರ ಕಣ್ಣು ಭರತ್ ಮೇಲೆಯೇ ಇದೆ.
ಆದರೆ, ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಅವಕಾಶ ಸಿಕ್ಕಾಗ ಎಡವಿದರು.ಆರು ಇನ್ನಿಂಗ್ಸ್‌ಗಳಲ್ಲಿ ಅವರು ೪೪ರ ಗರಿಷ್ಠ ಮೊತ್ತ ದಾಖಲಿಸಿ ಅಲ್ಪ ರನ್ ಗಳಿಸಿದರು. ಆದರೂ ಕೀಪಿಂಗ್‌ನಲ್ಲಿ ಅವರ ನಿಷ್ಣಾತಿ ಆಯ್ಕೆಯನ್ನು ಅವರ ಪರ ವಾಲಿಸಬಹುದು ಎಂಬ ನಿರೀಕ್ಷೆ ಇದೆ.
ಸ್ಪಿನ್ನರ್ ಗಳ ತಿರುವು ಮತ್ತು ಪುಟಿತವನ್ನು ವಿಕೆಟ್ ಹಿಂದೆ ಗ್ರಹಿಸುವುದು ಬಲು ಅವಶ್ಯವಿದ್ದು, ಇಲ್ಲಿ ಭರತ್‌ಗೆ ಹೆಚ್ಚಿನ ಪ್ರಾವೀಣ್ಯತೆ ಇರುವುದನ್ನು ತಂಡ ಗಮನಿಸಬೇಕಿದೆ.
ಒಟ್ಟಿನಲ್ಲಿ ಇನ್ನೆರಡು ದಿನಗಳಲ್ಲಿ ಈ ಪ್ರಶ್ನೆಗಳಿಗೆಲ್ಲ ಪರಿಹಾರ ಸಿಗಲಿದ್ದು, ಟೆಸ್ಟ್ ಚಾಂಪಿಯನ್ ಯಾರೆಂಬುದು ಇನ್ನೊಂದು ವಾರದಲ್ಲಿ ನಿರ್ಧಾರವಾಗಲಿದೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.