Google News-KN | Google News-EN | Telegram |
ಸೋವಿಯತ್ ಒಕ್ಕೂಟದ ಕಾಲದಲ್ಲಿ ಉಕ್ರೇನ್ ನಲ್ಲಿ ನಿರ್ಮಿಸಲಾಗಿದ್ದ ಬೃಹತ್ ಜಲಾಶಯವನ್ನು ರಷ್ಯಾ ಸೇನೆ ಸ್ಫೋಟಿಸಿದೆ. ಇದರಿಂದ ರಷ್ಯಾ ಮತ್ತು ಉಕ್ರೇನ್ ನ ಯುದ್ಧ ಪೀಡಿತ ಪ್ರದೇಶಗಳಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ.
1956ರಲ್ಲಿ ಡಿನ್ ಪ್ರೊ ನದಿಗೆ ಅಡ್ಡಲಾಗಿ ಉತ್ತಾಹ್ ಎಂಬಲ್ಲಿ ನಿರ್ಮಿಸಲಾಗಿದ್ದ ಡ್ಯಾಂ 3.2 ಕಿ.ಮೀ. ಉದ್ದವಿದ್ದು, 30 ಮೀಟರ್ ಎತ್ತರವಿದೆ. ಇದು ಅಮೆರಿಕದ ಗ್ರೇಟ್ ಸಾಲ್ಟ್ ಕೆರೆಗೆ ಸಮವಾಗಿದೆ. ಈ ಜಲಾಶಯದಿಂದ ಕಕಾವೊಕಾ ಹೈಡ್ರೊ ಪವರ್ ಪ್ಲಾಂಟ್ ಕಾರ್ಯ ನಿರ್ವಹಿಸುತ್ತದೆ.
2014ರಿಂದ ರಷ್ಯಾದ ಕ್ರಿಮಿಯಾ ಮತ್ತು ಪೆನಿಸುಲಾ ನಗರಗಳಿಗೂ ಈ ಡ್ಯಾಂನಿಂದ ನೀರು ಪೂರೈಸಲಾಗುತ್ತಿತ್ತು. ಅಲ್ಲದೇ ರಷ್ಯಾದ ನಿಯಂತ್ರಣದಲ್ಲಿದ್ದ ಜಪೊರಿಜಜಾ ನ್ಯೂಕ್ಲಿಯರ್ ಪ್ಲಾಂಟ್ ಗೂ ನೀರು ಪೂರೈಕೆ ಆಗುತ್ತಿತ್ತು.
ಉಕ್ರೇನ್ ಮೇಲೆ ಕಳೆದ ಒಂದು ವರ್ಷದಿಂದ ಯುದ್ಧ ನಡೆಸುತ್ತಿರುವ ರಷ್ಯಾ ಇದೀಗ ಡ್ಯಾಂ ಒಡೆದು ಹಾಕುವ ಮೂಲಕ ಭಾರೀ ಹಾನಿ ಮಾಡಿದೆ. ಇದರಿಂದ ಕುಡಿಯುವ ನೀರಿಗೆ ಸಮಸ್ಯೆ ಆಗುವ ಜೊತೆಗೆ ಅಣು ಸ್ಥಾವರಿಗೆ ನೀರು ಪೂರೈಕೆಗೂ ಅಡ್ಡಿಯಾಗಲಿದೆ ಎನ್ನಲಾಗಿದೆ.
The Nova Kakhovka dam on Dnipro in Kyiv is no more.
This is now confirmed on Ukrainian news. Ukraine states that the dam was blown up by Russians. Russians deny the dam is blown.
If true, people will die and it is a war crime 1/
pic.twitter.com/xOm3sRbJjF
— Tymofiy Mylovanov (@Mylovanov) June 6, 2023
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.