ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ಹಿಂದೂ ಯುವಕ, ಮುಸ್ಲಿಮ್ ಯುವತಿಗೆ ಕಿರಿಕ್: ನೈತಿಕ ಪೊಲೀಸ್ ಗಿರಿ ವೀಡಿಯೊ ವೈರಲ್! | Azad Times

4 months ago 6
Google News-KN Google News-EN Telegram Facebook

Azad Times News Desk.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಶುರುವಾಗುತ್ತಿದ್ದಂತೆ ನೈತಿಕ ಪೊಲೀಸ್ ಗಿರಿ ಹಾವಾಳಿ ಮತ್ತೆ ಆರಂಭವಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆಯ ವೀಡಿಯೋ ಇದೀಗ ವೈರಲ್ ಆಗಿದೆ.

ಹಿಂದೂ ಯುವಕ ಹಾಗೂ ಮುಸ್ಲಿಮ್ ಯುವತಿ ತಮ್ಮ ಸಹಪಾಠಿಗಳೊಂದಿಗೆ ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದಾಗ ದಾಳಿ ಮಾಡಿದ ಸ್ಥಳೀಯ ಮುಸ್ಲಿಮ್ ಯುವಕರು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.

ಹಿಂದೂ ಯುವಕ ತನ್ನ ಸಹಪಾಠಿ ಜೊತೆ ಮುಸ್ಲಿಮ್ ಯುವತಿ ಜೊತೆ ಊಟ ಮಾಡುತ್ತಿದ್ದಾಗ ಹೋಟೆಲ್ ಗೆ ಬಂದ ಮುಸ್ಲಿಮ್ ಯುವಕರ ಗುಂಪು ಹಿಂದೂ ಯುವಕನನ್ನು ತರಾಟೆಗೆ ತೆಗೆದುಕೊಂಡಿದೆ.

ಮುಸ್ಲಿಮ್ ಯುವಕರು ಊಟಕ್ಕೆ ಬರಲು ಹಿಂದೂ ಯುವಕನನ್ನು ಆಯ್ಕೆ ಮಾಡಿಕೊಂಡಿದ್ದು ಯಾಕೆ ಎಂದು ಯುವತಿಯನ್ನು ಪ್ರಶ್ನಿಸಲು ಆರಂಭಿಸಿದರು. ತಮ್ಮ ಧರ್ಮದ ಯುವತಿ ಮತ್ತೊಂದು ಧರ್ಮದವರ ಜೊತೆ ಗುರುತಿಸಿಕೊಳ್ಳಬಾರದು ಎಂದು ತಾಕೀತು ಮಾಡಿದ್ದಾರೆ. ಈ ವೇಳೆ ಯುವಕರ ನಡುವೆ ಮಾತಿನ ಚಕಾಮಕಿ ನಡೆದಿದೆ.

ಘಟನೆ ಬೆನ್ನಲ್ಲೇ ಮುಸ್ಲಿಮ್ ಯುವತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page