Google News-KN | Google News-EN | Telegram |
BJP ಹಿರಿಯ ನಾಯಕ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜಕೀಯ ನಿವೃತ್ತಿಯ ಸುಳಿವು ನೀಡಿದ್ದಾರೆ. ಇದರೊಂದಿಗೆ BJP ಹೈಕಮಾಂಡ್ ಜತೆಗಿನ ಅವರ ಮುನಿಸು ಬಹಿರಂಗಗೊಂಡಿದೆ.
RSS ಹಾಗೂ BJP ನಡುವೆ ಪ್ರಬಲ ಕೊಂಡಿಯಾಗಿರುವ ನಿತಿನ್ ಗಡ್ಕರಿ ಅವರ ಇತ್ತೀಚಿನ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ನಾಗಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಡ್ಕರಿ ಅವರು, ರಾಜಕೀಯದಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಜನ ಬಯಸಿ ನನಗೆ ಮತ ನೀಡಿದರೆ ಕೆಲಸ ಮಾಡುವೆ. ಇಲ್ಲವಾದರೆ ಮಣ್ಣಿನ ಸಂರಕ್ಷಣೆ, ಹವಾಮಾನ ಬದಲಾವಣೆ, ಪಾಳು ಭೂಮಿಯ ಪುನಶ್ಚೇತನದ ಹಾದಿಯಲ್ಲಿ ಕೆಲಸ ಮಾಡುವೆ ಎಂದು ಹೇಳಿದ್ದಾರೆ.
ಒಂದು ಮಿತಿಯಾಚೆಗೆ ಯಾರನ್ನೂ ಓಲೈಸಲು ನಾನು ಇಷ್ಟಪಡುವುದಿಲ್ಲ. ನನ್ನ ಜಾಗದಲ್ಲಿ ಬೇರಾದರೂ ಬಂದರೂ ನನಗೆ ತೊಂದರೆ ಇಲ್ಲ. ನನ್ನ ಕೆಲಸಕ್ಕೆ ಸಮಯ ಕೊಡಲು ನಾನು ಬಯಸಿದ್ದೇನೆ ಎಂದು ಅವರು ಪರ್ಯಾಯ ಇಂಧನಕ್ಕೆ ಸಂಬಂಧಿಸಿದಂತೆ ತಮ್ಮ ಹೊಸ ಉದ್ಯಮ ಯೋಜನೆಗಳನ್ನು ಉಲ್ಲೇಖಿಸಿದ್ದಾರೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.