Google News-KN | Google News-EN | Telegram |
ಮೂಡಲಗಿ – ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿರುವದರಿಂದ ದಿ. ೨೯ ರಿಂದ ನೀತಿ ಸಂಹಿತೆ ಜಾರಿಯಲ್ಲಿ ಬಂದಿದ್ದು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು, ಕಾರ್ಯಕರ್ತರು, ಮತದಾರರು ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಅರಭಾವಿ ಕ್ಷೇತ್ರದ ಚುನಾವಣಾ ಅಧಿಕಾರಿ ಶ್ರೀಮತಿ ಪ್ರಭಾವತಿ ಎಫ್. ಹೇಳಿದರು.
ಇಲ್ಲಿನ ತಹಶಿಲ್ದಾರರ ಕಚೇರಿಯಲ್ಲಿ ಕರೆಯಲಾದ ಸಭೆಯಲ್ಲಿ ಮಾತನಾಡಿದ ಅವರು, ಈ ದಿನದಿಂದ ರಾಜಕೀಯ ಪಕ್ಷಗಳು ಸಭೆ ಸಮಾರಂಭ ನಡೆಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಇಲ್ಲವಾದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ಅನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಸರಕಾರಿ ಕಾಮಗಾರಿಯ ಶಂಕುಸ್ಥಾಪನೆ, ಉದ್ಘಾಟನೆ, ಯಾವುದೇ ಕಾರ್ಯಕ್ರಮಗಳನ್ನು ಮಾಡಬಾರದು ಮತ್ತು ಸಭೆ ಸಮಾರಂಭಗಳಲ್ಲಿ ಬಾಡೂಟವನ್ನು ಸಾರ್ವಜನಿಕರಿಗೆ ಅಥವಾ ಮತದಾರರಿಗೆ ಆಮಿಷ ಒಡ್ಡುವುದಾಗಲಿ ಹಾಗೂ ಪ್ರಚಾರ ಪ್ರಕಟಣೆಯನ್ನು ಹೊರಡಿಸಬಾರದು.
ಚುನಾವಣಾ ಸಭೆ, ರ್ಯಾಲಿ ಗಳಿಗೆ ಏಕ ಗವಾಕ್ಷಿ ಕೇಂದ್ರದಲ್ಲಿ ಮುಂಚಿತವಾಗಿ ಅರ್ಜಿಯನ್ನು ಸಲ್ಲಿಸಿ ಪೂರ್ವಾನುಮತಿ ಪಡೆದುಕೊಳ್ಳುವುದು.ಈಗಾಗಲೇ ಪ್ರಾರಂಭವಾಗಿರುವ ಕಾಮಗಾರಿಗಳನ್ನು ಮುಂದುವರೆಸುವುದು.
ಪ್ರಕೃತಿ ವಿಕೋಪ ಬರಗಾಲದಂಥ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪುನರ್ ವಸತಿ ಹಾಗೂ ಇತರೆ ಸೌಲಭ್ಯಗಳನ್ನು ಮುಂದುವರೆಸ ಬಹುದು. ಸಾರ್ವಜನಿಕ ಮೈದಾನ ಅಥವಾ ಸ್ಥಳಗಳು ಎಲ್ಲ ಪಕ್ಷಗಳಿಗೂ ಅಭ್ಯರ್ಥಿಗಳಿಗೂ ಪಕ್ಷಾತೀತವಾಗಿ ಸಭೆ ಸಭಾಗಳಿಗೆ/ಲಭ್ಯವಾಗಬೇಕು.
ಸಭೆ ಸಮಾರಂಭ ಮೆರವಣಿಗೆ ನಡೆಯುವ ಮುನ್ನ ಮೆರವಣಿಗೆ/ಸಭೆ ಸಮಾರಂಭ ಗಳಲ್ಲಿ ಧ್ವನಿವರ್ಧಕ ಉಪಯೋಗಿಸಲು ಅನುಮತಿ ಪಡೆಯ ತಕ್ಕದ್ದು.ಸದರಿ ವಿಷಯದ ಕುರಿತು ಟ್ರಾಫಿಕ್ ಸಮಸ್ಯೆ ಉಂಟಾಗಬಾರದು.ಎಲ್ಲ ಪಕ್ಷದ ಕಾರ್ಯಕರ್ತರು ಸಭೆ ಸಮಾರಂಭಗಳಲ್ಲಿ ಪಕ್ಷದ/ಅಭ್ಯರ್ಥಿ ಯ ಚಿಹ್ನೆ ಅಥವಾ ಭಾವಚಿತ್ರ ಇರಬಾರದು.
ಪ್ರಚಾರ ಸಮಯದಲ್ಲಿ ವಾಹನಗಳ ಸಂಚಾರದ ಮೇಲೆ ಇರುವ ನಿರ್ಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಧಾರ್ಮಿಕ ದೇವಾಲಯ, ಮಸೀದಿ ಹಾಗೂ ಚರ್ಚ್ ಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಬಾರದು. ಹಣದ ಆಮಿಷ ಮತ್ತು ಕೋಮು ಭಾವನೆಗಳಿಗೆ ಧಕ್ಕೆಯಾಗಬಾರದು. ಪರಸ್ಪರ ದ್ವೇಷ ಉಂಟಾಗಬಾರದು.
ಸ್ಥಳೀಯ ಕಾನೂನಿಗೆ ಒಳಪಟ್ಟ ಯಾವುದೇ ವ್ಯಕ್ತಿಯ ಜಮೀನು,ಕಟ್ಟಡ, ಗೋಡೆ, ವಾಹನಗಳನ್ನು ಚುನಾವಣೆ ಪ್ರಚಾರಕ್ಕಾಗಿ ನಿರ್ದಿಷ್ಟ ಅನುಮತಿ ಇಲ್ಲದೆ ಉಪಯೋಗಿಸಬಾರದು. ಮತ್ತೊಂದು ಪಕ್ಷ ಅಭ್ಯರ್ಥಿ ಆಯೋಜಿಸುವ ಸಭೆ/ಮೆರವಣಿಗೆಗೆ ಅಡಚಣೆ ಮಾಡಬಾರದು.
ವಾಹನಗಳ ಮೇಲೆ ಅಳವಡಿಸಲಾಗಿರುವ ಧ್ವನಿವರ್ಧಕಗಳನ್ನು ಬೆಳ್ಳಗ್ಗೆ 6 ಗಂಟೆ ಮೊದಲು ಹಾಗೂ ರಾತ್ರಿ 10 ಗಂಟೆಯ ನಂತರ ಸಂಬಂಧಿಸಿದ ಅಧಿಕಾರಿಗಳ ಪೂರ್ವ ಲಿಖಿತ ಅನುಮತಿ ಇಲ್ಲದೆ ಬಳಸಬಾರದು. ಚುನಾವಣೆ ಸಮಯದಲ್ಲಿ ಮದ್ಯವನ್ನು ವಿತರಿಸಬಾರದು ಹೀಗೆ ಕಟ್ಟು ನಿಟ್ಟಿನ ಪಾರದರ್ಶಕವಾಗಿ ಚುನಾವಣೆ ನಡೆಯಬೇಕು ಎಂದರು.
ಅರಭಾವಿ ವಿದಾನಸಭಾ ಮತಕ್ಷೇತ್ರದ ಚುನಾವಣೆಗಾಗಿ ಸಕ್ಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.ಚುನಾವಣೆಗಾಗಿ ಸೆಕ್ಟರ ಆಫೀಸರ್, ಎಫ.ಎಸ್.ಟಿ, ಎಸ್.ಎಸ್.ಟಿ, ವಿ.ಎಸ್.ಟಿ, ವಿವಿ.ಟಿ, ಎಮ್.ಸಿಸಿ ತಂಡಗಳನ್ನು ರಚನೆ ಮಾಡಲಾಗಿದೆ.ಗಡಿ ಜಿಲ್ಲೆ ಬಾಗಲಕೋಟೆ, ಹಳ್ಳೂರದಲ್ಲಿ ಹಾಗೂ ಯಾದವಾಡದಲ್ಲು ಚೆಕ್ ಪೋಸ್ಟಗಳನ್ನು ಆರಂಭಿಸಿದ್ದೇವೆ.
ಈಗಾಗಲೇ ವಾರದ ಏಳು ದಿನ 24 ಗಂಟೆ ಕಾರ್ಯ ನಿರ್ವಹಣೆ ಮಾಡಲಾಗುತ್ತಿರುವುದು. ಸಾರ್ವಜನಿಕರಿಗೆ ಏನಾದರೂ ಸಮಸ್ಯೆ ಇದ್ದರೆ 080-23900863 ದೂರವಾಣಿ ಗೆ ಕರೆ ಮಾಡಿ ಸಮಸ್ಯೆ ತಿಳಿಸಬಹುದು.
08-ಅರಭಾವಿ ಮತಕ್ಷೇತ್ರದಲ್ಲಿ 281ಮತಗಟ್ಟೆಗಳಿದ್ದು ಇವುಗಳಲ್ಲಿ ಒಟ್ಟು 239673 ಮತದಾರರು ಇದ್ದಾರೆ.120380 ಪುರುಷ ಹಾಗೂ 119286 ಮಹಿಳಾ ಮತದಾರರು.
ಇವುಗಳಿಗೆ 54 ಸೂಕ್ಷ್ಮ ಮತಗಟ್ಟೆಗಳಿವೆ ಹಾಗೂ 156 ವಲ್ನರೇಟರ್ (ಭೀತಿ ತಡೆ) ಮತಗಟ್ಟೆಗಳಿವೆ. 80 ವರ್ಷ ವಯಸ್ಸಾದ ಮತದಾರರಿಗೆ ಮನೆಯಲ್ಲಿ ಮತದಾನ ಮಾಡುವ ಅವಕಾಶ ಇದೆ ಎಂದು ಚುನಾವಣಾ ಅಧಿಕಾರಿಗಳಾದ ಪ್ರಭಾವತಿ ಎಫ್ ತಿಳಿಸಿದರು.
ತಹಶಿಲ್ದಾರರು ಪ್ರಶಾಂತ ಚನಗೊಂಡ, ತಾಲೂಕಾ ಮಾದರಿ ನೀತಿ ಸಂಹಿತೆ ಅಧಿಕಾರಿ ಎಫ್.ಜಿ.ಚಿನ್ನನ್ನವರ, ಸಿಪಿಐ ಶ್ರೀಶೈಲ ಬ್ಯಾಕೂಡ ಉಪಸ್ಥಿತರಿದ್ದರು ಹಾಗೂ ತಾಲ್ಲೂಕಿನ/ ಅರಭಾವಿ ಕ್ಷೇತ್ರದ ಪಕ್ಷದ ಅಧ್ಯಕ್ಷರು/ಕಾರ್ಯಕರ್ತರುಗಳಾದ ಈರಣ್ಣ ಕೊಣ್ಣೂರ ಹಾಗೂ ಶಿವಾನಂದ ಸಣ್ಣಕ್ಕಿ ಜೆಡಿಎಸ್-ಮಹಾದೇವ ಶೆಕ್ಕಿ ಬಿಜೆಪಿ-ರವಿ ಮೂಡಲಗಿ ಕಾಂಗ್ರೆಸ್-ಇಜಾಜ್ ಅಹ್ಮದ ಕೊಟ್ಟಲಗಿ ಎಎಪಿ-ಇರ್ಫಾನ್ ಐಡಿಪಿ ಹಾಜರಿದ್ದರು.
ನಂತರ ಚುನಾವಣೆ ಅಧಿಕಾರಿಗಳು ಮತದಾನ ಜಾಗೃತಿಗಾಗಿ ಬೈಕ್ ರ್ಯಾಲಿಗೆ ಚಾಲನೆ ಕೊಟ್ಟರು.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.