ಏಷ್ಯನ್ ಬ್ಯಾಡ್ಮಿಂಟನ್ ಟೂರ್ನಿ:58 ವರ್ಷಗಳ ನಂತರ ಚಿನ್ನದ ಪದಕ ಗೆದ್ದು ಇತಿಹಾಸ ಬರೆದ ಸ್ವಸ್ತಿಕ್-ಚಿರಾಗ್ ಜೋಡಿ! | Azad Times

5 months ago 2
Google News-KN Google News-EN Telegram Facebook

Azad Times News Desk.

ಭಾರತ ತಂಡದ ಸ್ಟಾರ್ ಡಬಲ್ಸ್ ಜೋಡಿಯಾದ ಸ್ವಸ್ತಿಕ್ ರಾಜ್ ರಿಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದು 58 ವರ್ಷಗಳ ನಂತರ ಈ ಸಾಧನೆ ಮಾಡಿದ ಜೋಡಿ ಎಂಬ ಇತಿಹಾಸ ಬರೆದಿದ್ದಾರೆ.

ದುಬೈನಲ್ಲಿ ಭಾನುವಾರ ನಡೆದ ಪುರುಷರ ಡಬಲ್ಸ್ ಫೈನಲ್ ನಲ್ಲಿ ಸ್ವಸ್ತಿಕ್ ರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ 21-16, 17-21, 19-21 ಸೆಟ್ ಗಳಿಂದ ಮಲೇಷ್ಯಾದ ಓಂಗ್ ಯೆವ್ ಸಿನ್ ಮತ್ತು ಟೆಯೊ ಎ ಜೋಡಿಯನ್ನು ಸೋಲಿಸಿದರು.

ದಿನೇಶ್ ಖನ್ನಾ 1965ರಲ್ಲಿ ಈ ಟೂರ್ನಿಯಲ್ಲಿ ಚಿನ್ನ ಗೆದ್ದ ಏಕೈಕ ಭಾರತೀಯ ಎಂಬ ದಾಖಲೆ ಬರೆದಿದ್ದರು. ಇದೀಗ ಸ್ವಸ್ತಿಕ್ ಮತ್ತು ಚಿರಾಗ್ ಜೋಡಿ ಈ ದಾಖಲೆಯನ್ನು ಮುರಿದರು.

1971ರಲ್ಲಿ ದೀಪು ಘೋಷ್ ಮತ್ತು ರಮನ್ ಘೋಷ್ ಜೋಡಿ ಕಂಚಿನ ಪದಕ ಗೆದ್ದಿದ್ದು, ಇದುವರೆಗಿನ ಡಬಲ್ಸ್ ಆಟಗಾರರ ಗರಿಷ್ಠ ಸಾಧನೆಯಾಗಿತ್ತು.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page