Google News-KN | Google News-EN | Telegram |
ರಾಜ್ಯ ವಿಧಾನಸಭೆ ಚುನಾಣೆಗೆ ದಿನಾಂಕ ಘೋಷಣೆಯಾಗಿದ್ದು, ರಾಜ್ಯದಲ್ಲಿ ಚುನಾವಣ ತಯಾರಿ ಚಟುವಟಿಕೆ ಬಿರುಸು ಪಡೆದಿವೆ. ಕಾಂಗ್ರೆಸ್ 2ನೇ ಪಟ್ಟಿ ಏಪ್ರಿಲ್ 5ರ ನಂತರ ಪ್ರಕಟವಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಈಗಾಗಲೇ ಟಿಕೆಟ್ ಮೊದಲ ಪಟ್ಟಿ ರಿಲೀಸ್ ಮಾಡಿದ್ದು, ಎರಡನೇ ಪಟ್ಟಿಗಾಗಿ ತಯಾರಿ ಮಾಡಿಕೊಂಡಿದೆ.. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಕುದುರೆಗಾಗಿ ಹುಡುಕಾಟ ನಡೆಸಲಾಗಿದೆ.
AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಪಟ್ಟಿಯ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಏಪ್ರಿಲ್ 5ರಂದು ಕೋಲಾರದಲ್ಲಿ ರಾಹುಲ್ ಗಾಂಧಿ ಸಮಾವೇಶದ ನಂತರ ದೆಹಲಿಯಲ್ಲಿ ಸಮಿತಿ ಸಭೆಯ ನಂತರ ಪಟ್ಟಿ ಪ್ರಕಟಿಸಲಿದೆ.
ಏಪ್ರಿಲ್ 6 ಅಥವಾ 7ರಂದು 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆಯಿದ್ದು, KPCC ಶಿಫಾರಸು ಪಟ್ಟಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುತ್ತಾ ಕಾದುನೋಡಬೇಕಿದೆ..
ಈಗಾಗಲೇ 50 ಅಭ್ಯರ್ಥಿಗಳ ಲಿಸ್ಟ್ ರೆಡಿಯಾಗಿದ್ದು, ರ್ನಾಲ್ಕು ಹಂತಗಳಲ್ಲಿ ಪಟ್ಟಿ ರಿಲೀಸ್ ಮಾಡುವ ಚಿಂತನೆ ನಡೆಸಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
3ನೇ ಹಂತದಲ್ಲಿ BJP, JDS ನಿಂದ ಬರುವವರಿಗೆ ಮಣೆ ಹಾಕಲಾಗುತ್ತದೆ. ನಾಮಪತ್ರ ಪರಿಶೀಲನೆಯವರೆಗೆ ಕಾದು ನೋಡುವ ತಂತ್ರಕ್ಕೆ ಕಾಂಗ್ರೆಸ್ ಮುಂದಾಗುವ ಸಾಧ್ಯತೆಯನ್ನು ತಳ್ಳಿ ಹಾಕುವ ಸಾಧ್ಯತೆಯಿಲ್ಲ.
ಜೆಡಿಎಸ್‌ಗೆ ರಾಜೀನಾಮೆ ನೀಡಿದ್ದ ಗುಬ್ಬಿ ಶ್ರೀನಿವಾಸ್‌ಗೆ ಟಿಕೆಟ್ ಫಿಕ್ಸ್ ಆಗಿದ್ದು, ಶಾಸಕ ಶಿವಲಿಂಗೇಗೌಡ, N.Y.ಗೋಪಾಲಕೃಷ್ಣ ಕೂಡ ಕಾಂಗ್ರೆಸ್ ಪಡೆ ಸೇರುವ ಸಾಧ್ಯತೆಯಿದೆ.
ಜೊತೆಗೆ JDS, BJP ರೆಬೆಲ್ ನಾಯಕರು ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿರಾ ಎಂಬ ಆತಂಕ ಕಾಂಗ್ರೆಸ್, JDSನ ನಾಯಕರಿಗೆ ಮೂಡಿದೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.