Google News-KN | Google News-EN | Telegram |
ರಾಜಧಾನಿ ಬೆಂಗಳೂರು ಸೇರಿ ರಾಜ್ಯದ 17 ಜಿಲ್ಲೆಗಳು ತೀವ್ರವಾದ ನೀರಿನ ತೊಂದರೆ ಅನುಭವಿಸಲಿವೆ ಎಂದು ಪರಿಸರ ನಿರ್ವಹಣೆ ಹಾಗೂ ನೀತಿ ಸಂಶೋಧನೆ ಸಂಸ್ಥೆ ಎಚ್ಚರಿಕೆ ನೀಡಿದೆ.
ಸಂಶೋಧರು ಜಿಲ್ಲಾ ಮಟ್ಟದ ಸರ್ಕಾರಿ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದು, 20 ಅಂಶಗಳನ್ನು ಆಧಾರವಾಗಿಟ್ಟುಕೊಂಡು ಈ ವರದಿ ತಯಾರಿ ಮಾಡಿದ್ದಾರೆ.
ಅಂತರ್ಜಲ ಲಭ್ಯತೆ, ಕಾಡು ಪ್ರದೇಶ, ಜನಸಾಂದ್ರತೆ, ದಿನ ಬಳಕೆಗೆ ನೀರಿನ ಬೇಡಿಕೆ, ಕೃಷಿ, ಜಾನುವಾರು ಹಾಗೂ ಕಾರ್ಖಾನೆ ಮುಂತಾದ ಅಂಶಗಳು ಹಾಗೂ ಸರಾಸರಿ ವಾರ್ಷಿಕ ಮಳೆ ಮತ್ತು ಹಲವು ದಶಕಗಳ ಉಷ್ಣಾಂಶಗಳನ್ನೆಲ್ಲ ಗಣನೆಗೆ ತೆಗೆದುಕೊಳ್ಳಲಾಗಿದೆ.
ಭಾರೀ ಜಲಕ್ಷಾಮ ಎದುರಿಸಲಿರುವ ಜಿಲ್ಲೆಗಳ ಪೈಕಿ ಬೆಂಗಳೂರು ಗ್ರಾಮಾಂತರ ಮೊದಲ ಸ್ಥಾನದಲ್ಲಿ ಇದ್ದು, ರಾಯಚೂರು. ಚಿಕ್ಕಬಳ್ಳಾಪುರ, ಕಲಬುರಗಿ, ಗದಗ, ಕೊಪ್ಪಳ, ಬಳ್ಳಾರಿ, ವಿಜಯಪುರ, ಬೀದರ್ ಹಾಗೂ ಬೆಳಗಾವಿ ಇದೆ. ಬೆಂಗಳೂರು 12ನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕೋಲಾರ, ಬಾಗಲಕೋಟೆ, ದಾವಣಗೆರೆ, ಯಾದಗಿರಿ, ಚಿತ್ರದುರ್ಗ ಹಾಗೂ ತುಮಕೂರು ಇವೆ. ಇವುಗಳು ಭಾರೀ ಪ್ರಮಾಣದ ಜಲಕ್ಷಾಮ ಎದುರಿಸಲಿದೆ.
ನೀರಿನ ಕೊರತೆ ಕಡಿಮೆ ಅನುಭವಿಸುವ ಜಿಲ್ಲೆಗಳ ಪೈಕಿ ಉಡುಪಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಿವೆ.
ಉಳಿದ ಜಿಲ್ಲೆಗಳು ಭಾಗಶಃ ತೊಂದರೆ ಅನುಭವಿಸಲಿದೆ ಎನ್ನುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಹವಾಮಾನ ಬದಲಾವಣೆ ಇವೆಲ್ಲವನ್ನೂ ಬದಲಾಯಿಸಲಿದೆ ಎಂದು ವರದಿ ಹೇಳಿದೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.