ಯೂಟ್ಯೂಬ್ ಚಾನಲ್ ನ ಸೈಯದನನ್ನು ಗಡಿಪಾರು ಮಾಡಬೇಕು – ಬಿ ಬಿ ಹಂದಿಗುಂದ ಆಗ್ರಹ | Azad Times

3 months ago 9
Google News-KN Google News-EN Telegram Facebook

Azad Times News Desk.

ಮೂಡಲಗಿ: ಉಪ್ಪಾರ ಸಮಾಜದ ಧರ್ಮ ಗುರುಗಳು ಹಾಗೂ ಗಂಗೆಯನ್ನು ಧರೆಗಿಳಿಸಿದ ಮಹರ್ಷಿ ಭಗೀರಥರಿಗೆ  ಅಪಮಾನ ಮಾಡಿ ಇಡಿ ಉಪ್ಪಾರರಿಗೆ ನೋವುಂಟು ಮಾಡಿ ಸಮಾಜ-ಸಮಾಜದಲ್ಲಿ ಸಾಮರಸ್ಯ ಕದಡುವ ಕೆಲಸವನ್ನು ಮಾಡಿರುವ ಘಟಪ್ರಭಾದ ಖಾಸಗಿ ನಂ.1 ಯುಟ್ಯೂಬ್ ಸುದ್ದಿ ವಾಹಿನಿಯ ಮುಖ್ಯಸ್ಥ ಸಯ್ಯದ ಅವರನ್ನು ಕೂಡಲೇ ಸರಕಾರ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ ಗಡಿಪಾರು ಮಾಡಬೇಕೆಂದು ಮೂಡಲಗಿ ಉಪ್ಪಾರ ಸಮಾಜದ ಮುಖಂಡ ಭೀಮಪ್ಪ ಬಿ.ಹಂದಿಗುಂದ ಅವರು ಆಗ್ರಹಿಸಿದರು.

ಗುರುವಾರದಂದು ಪಟ್ಟಣದ ಕಲ್ಮೇಶ್ವರ  ವೃತ್ತದಲ್ಲಿ, ಪ್ರತಿಭಟನೆ ನಡೆಸುತ್ತಾ, ಮೂಡಲಗಿ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಮಾತನಾಡಿದ ಅವರು, ಘಟಪ್ರಭಾದ ನಂ1 ಯೂಟ್ಯೂಬ್ ಚಾನಲ್ ಮಾಲೀಕ ಸೈಯದ್ ಅವರು ಅತಿರಥ, ಮಹಾರಥ, ಭಗೀರಥ  ಬಂದರೂ ಇಡೀ ಬೆಳಗಾವಿ ಜಿಲ್ಲೆಯಲ್ಲೇ ಜಾರಕಿಹೊಳಿ ಕುಟುಂಬವನ್ನು ಸೋಲಿಸಲು ಸಾಧ್ಯವಿಲ್ಲ, ಇದೇ ನಿಮಗೆ ಮುಂದೆ ಮುಳುವಾಗುತ್ತದೆ ಎಂದು ಉಪ್ಪಾರ ಸಮಾಜಕ್ಕೆ ಧಮಕಿ  ಹಾಕಿರುವುದು ಖಂಡನೀಯವಾಗಿದೆ ಎಂದರು.

ತುಕ್ಕಾನಟ್ಟಿಯ ಭರಮಣ್ಣಾ ಉಪ್ಪಾರ ಮಾತನಾಡಿ, ಕ್ಷೇತ್ರದಲ್ಲಿ ಉಪ್ಪಾರ ಸಮಾಜ ಎಲ್ಲ ಸಮುದಾಯದೊಂದಿಗೆ ಒಳ್ಳೆಯ ಬಾಂಧ್ಯವದೊಂದಿರುವ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸಯ್ಯದ ಅವರ ಮೇಲೆ ಈಗಾಗಲೇ ಗೋಕಾಕ ಮತ್ತು ಘಟಪ್ರಭಾದ ಪ್ರಕರಣ ದಾಖಲಿಸಿದ್ದು, ಕಾರಣ ಪೋಲೀಸರು ಆತನ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ನಾಗನೂರದ ಪರಸಪ್ಪ ಬಬಲಿ ಮತ್ತು ಗುಜನಟ್ಟಿಯ ಸಾಬಪ್ಪ ಬಂಡ್ರೋಳಿ ಮಾತನಾಡಿ, ನಮ್ಮ ಸಮಾಜದ ಮಹಾನ್ ಪುರುಷರ ಬಗ್ಗೆ ಅಪಮಾನ ಮಾಡಿದ್ದು ಖಂಡನೀಯ ಸಯ್ಯದವರಿಗೆ ಶಿಕ್ಷೆಗೆ ಒಳಪಡಿಸಿ ಖಾಸಗಿ ಸುದ್ದಿ ವಾಹಿನಿಯನ್ನು ಬಂದ್ ಮಾಡಬೇಕೆಂದರು. 

ಮೂಡಲಗಿ ತಾಲೂಕಾ ಉಪ್ಪಾರ ಸಂಘದ ಅಧ್ಯಕ್ಷರಾದ ರಾಮಪ್ಪಾ ಹಂದಿಗುಂದ ಹಾಗೂ ಬಡಿಗವಾಡದ ನ್ಯಾಯವಾದಿ ಮಲ್ಲಿಕಾರ್ಜುನ ಚೌಕಾಶಿ ಮಾತನಾಡಿ, ಯೂಟ್ಯೂಬ್ ಚಾನಲ್ ಮಾಲೀಕ ಸೈಯದ್ ಯಾರನ್ನು ಓಲೈಸಿಕೊಳ್ಳುವ ಸಲುವಾಗಿ ಮಾತನಾಡಿದ್ದಾರೆ ಎಂಬುದು ತಿಳಿಸಬೇಕು ಹಾಗೂ   ಕೂಡಲೇ ಪೊಲೀಸ್ ಅಧಿಕಾರಿಗಳು ಸಯ್ಯದ  ವಿರುದ್ಧ ಸೂಕ್ತವಾದ ಸೆಕ್ಷನ್ ಅಡಿಯಲ್ಲಿ ಬಂಧಿಸಬೇಕು, ಇಲ್ಲವಾದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಮುಖಂಡ ಅರವಿಂದ್ ದಳವಾಯಿ, ಮಾತನಾಡಿ ಬಸವಣ್ಣನವರು ಹೇಳಿದಂತೆ ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು, ಮಾಧ್ಯಮದವರು ಸುದ್ದಿ ಬಿತ್ತರಿಸುವಾಗ ಎಚ್ಚರಿಕೆಯಿಂದ ಬಿತ್ತರಿಸಬೇಕು. ಕೇವಲ ಯಾರನ್ನೋ ಮೆಚ್ಚಿಸಲಿಕ್ಕೆ ಮಾಡದೇ ವಸ್ತು ನಿಷ್ಠ ವರದಿಯನ್ನು ಬಿತ್ತರಿಸಬೇಕೆಂದರು. 

ಅವರಾದಿಯ ಶ್ರೀಶೈಲ ಪೂಜೇರಿ, ಅರಭಾವಿಯ ಶಂಕರ ಬಿಲಕುಂದಿ, ಗುಜನಟ್ಟಿಯ ಗುರು ಗಂಗಣ್ಣವರ ಮಾತನಾಡಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು. 

ಪ್ರತಿಭಟನೆಯಲ್ಲಿ ಮಾಜಿ ಜಿ.ಪಂ ಸದಸ್ಯ ವಿಠ್ಠಲ್ ಸವದತ್ತಿ, ಮೂಡಲಗಿ ಉಪ್ಪಾರ ಸಮಾಜದ ಅಧ್ಯಕ್ಷ ಶಿವಬಸು ಹಂದಿಗುಂದ, ಗೋಕಾಕ ತಾಲೂಕಾ ಉಪ್ಪಾರ ಸಂಘದ ಅಧ್ಯಕ್ಷ ಶಿವಪುತ್ರ ಜಕಬಾಳ, ಹೊನ್ನಜ ಕೋಳಿ, ಚಂದ್ರು ಬೆಳಗಲಿ, ಗುರು ಗಂಗಣ್ಣವರ, ಸಂಗಮೇಶ ಕೌಜಲಗಿ, ಬರಮಣ್ಣ ಕಪ್ಪಲಗುದ್ದಿ, ಶಿವಪ್ಪ ಅಟಮಟ್ಟಿ, ಶಂಭುಲಿಂಗ ಮುಕ್ಕಣ್ಣವರ, ಹನಮಂತ ಕಂಕಣವಾಡಿ, ಶಿವಬಸು ಕಂಕಣವಾಡಿ, ಪರಸಪ್ಪ ತಿಗಡಿ, ಸುರೇಶ ಅಂತರಗಟ್ಟಿ, ವಿಠ್ಠಲ ಗುಡೆನ್ನವರ, ರಮೇಶ ಉಪ್ಪಾರ್ ಸೇರಿದಂತೆ ಮೂಡಲಗಿ-ಗೋಕಾಕ ತಾಲೂಕಿನ ವಿವಿಧ ಗ್ರಾಮಗಳ ಸಮಾಜದ ಮುಖಂರು ಮತ್ತಿತರರು ಭಾಗವಹಿಸಿದರು. 

ಇದಕ್ಕೂ ಮುಂಚೆ ಪಟ್ಟಣದ ನಾಗಲಿಂಗೇಶ್ವರ ಸೊಸಾಯಿಟಿಯ ಹತ್ತಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟಿಸಿ ಕೆಲ ಕಾಲ ರಸ್ತೆ ಬಂದಮಾಡಿ ಸಯ್ಯದ ಅವರ ಪ್ರತಿಕೃತಿ ದಹಿಸಿದರು. ಪ್ರತಿಭಟನಾಕಾರಿಂದ ಮೂಡಲಗಿ ಗ್ರೇಡ್-2 ತಹಶೀಲ್ದಾರ ಶಿವಾನಂದ ಬಬಲಿ ಅವರಿಗೆ ಮನವಿಸಲ್ಲಿಸಿ ಮೂಡಲಗಿ ಠಾಣೆಯಲ್ಲಿ ಸಯ್ಯದ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ದೂರು ದಾಖಲಿಸಲಾಯಿತು.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page