Google News-KN | Google News-EN | Telegram |
8 ಬಾರಿಯ ಒಲಿಂಪಿಕ್ ಚಿನ್ನದ ಪದಕ ವಿಜೇತ ವಿಶ್ವದಾಖಲೆಯ ಓಟಗಾರ ಜಮೈಕಾದ ಉಸೇನ್ ಬೋಲ್ಟ್ 12 ದಶಲಕ್ಷ ಡಾಲರ್ (100 ಕೋಟಿ ರೂ.) ಕಳೆದುಕೊಂಡು ಅಕ್ಷರಶಃ ಬೀದಿಗೆ ಬಂದಿದ್ದಾರೆ.
ಉಸೇನ್ ಬೋಲ್ಟ್ ಜೀವಮಾನವೀಡಿ ಸಂಪಾದಿಸಿದ ಹಾಗೂ ನಿವೃತ್ತಿ ಜೀವನಕ್ಕಾಗಿ ಬ್ಯಾಂಕ್ ಖಾತೆಯಲ್ಲಿ ಇರಿಸಲಾಗಿದ್ದ ಹಣ ಇದೀಗ ನಾಪತ್ತೆಯಾಗಿದ್ದು, ಈಗ ಬ್ಯಾಂಕ್ ಖಾತೆಯಲ್ಲಿ ಕೇವಲ 12 ಸಾವಿರ ಡಾಲರ್ ಮಾತ್ರ ಉಳಿದಿದೆ.
ಕಿಂಗ್ ಸ್ಟನ್ ಮೂಲದ ಷೇರು ಮತ್ತು ಭದ್ರತಾ ಕಂಪನಿ ಜೊತೆ ಉಸೇನ್ ಬೋಲ್ಟ್ ತನ್ನ ಬ್ಯಾಂಕ್ ಖಾತೆಯ ವಿವರವನ್ನು ಹಂಚಿಕೊಂಡಿದ್ದರು. ಇದೀಗ ಈ ಕಂಪನಿ ಅಷ್ಟು ಹಣ ಬಳಸಿಕೊಂಡು ನಷ್ಟ ಉಂಟು ಮಾಡಿದೆ.
ಉಸೇನ್ ಬೋಲ್ಟ್ ಪರ ವಕೀಲ ಇದೀಗ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಇದು ನಿಜಕ್ಕೂ ಆಘಾತಕಾರಿ ವಿಷಯ. ಕ್ರೀಡೆಯಿಂದ ನಿವೃತ್ತಿ ಪಡೆದಿರುವ ಬೋಲ್ಟ್ ಜೀವನ ಸಾಗಿಸಲು ಬ್ಯಾಂಕ್ ನಲ್ಲಿ ಇರಿಸಲಾಗಿದ್ದ ಹಣ ಕಳೆದುಕೊಂಡಿದ್ದಾರೆ. ಇದು ಹಣಕಾಸಿನ ಬೃಹತ್ ಅಕ್ರಮ ಎಂದು ಬೋಲ್ಟ್ ಪರ ವಕೀಲ ತಿಳಿಸಿದ್ದಾರೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.