ಮೂರ್ತಿಗಳ ರೂಪದಲ್ಲಿ ದೇವರು ಪ್ರಕಟವಾಗುತ್ತಾನೆ – ಡಾ. ಚನ್ನಾಸಿದ್ಧರಾಮರು | Azad Times

3 months ago 3
Google News-KN Google News-EN Telegram Facebook

Azad Times News Desk.

- Advertisement -

ಮೂಡಲಗಿ: ಭಾರತವು ಧರ್ಮ ಮತ್ತು ದೇವಾಲಯಗಳ ತಾಣವಾಗಿದ್ದು, ಜಗತ್ತಿನಲ್ಲಿ ಅತಿ ಹೆಚ್ಚು ದೇವಸ್ಥಾನ ಹೊಂದಿದ ದೇಶವಾಗಿದೆ, ಎಲ್ಲ ಕಡೆಯಲ್ಲಿ ದೇವರಿದ್ದರೂ ದೇವಸ್ಥಾನದಲ್ಲಿರುವ ಮೂರ್ತಿಗಳ ಮೂಲಕ ದೇವರು ಪ್ರಕಟವಾಗುತ್ತಾನೆ, ದಾನ, ಧರ್ಮ, ಪರೋಪಕಾರ, ಪುಣ್ಯ ಕಾರ್ಯಗಳನ್ನು ಮಾಡುವ ಮೂಲಕ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಬೇಕು ಎಂದು ಶ್ರೀಶೈಲ ಪೀಠದ ಜಗದ್ದುರು ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಅವರು ಮಂಗಳವಾರದಂದು ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀದೇವಿ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಣ ಹಾಗೂ ನವಗ್ರಹ ಮೂರ್ತಿಗಳ ಪ್ರತಿಷ್ಠಾಪನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ದೇವರಲ್ಲಿ ಇಡುವ ಭಕ್ತಿ ಮೂಲಕ ನಮ್ಮ ಬದುಕಿನಲ್ಲಿ ಶಾಂತಿ , ನೆಮ್ಮದಿ, ಸಂತೃಪ್ತಿ ಪಡೆದುಕೊಳ್ಳಬೇಕು. ಮಸಗುಪ್ಪಿ ಭಕ್ತರು ಸೇರಿ ಕಟ್ಟಿರುವ ಭವ್ಯ  ದೇವಸ್ಥಾನವು ಮಾದರಿಯಾಗಿದೆ ಎಂದರು. 

ನಿಡಸೋಸಿಯ ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿ ಮಾತನಾಡಿ,  ದೇವಸ್ಥಾನಗಳನ್ನು ನಿರ್ಮಿಸುವದರಿಂದ ಮನುಷ್ಯನಿಗೆ ಶಾಂತಿ, ನೆಮ್ಮದಿ ಸಿಗುತ್ತದೆ. ದೇವಸ್ಥಾನಗಳಿಗೆ ಕಳಸ ನಿರ್ಮಿಸಿರುವುದರಿಂದ ದೇವಸ್ಥಾನದ ಶಕ್ತಿ ಹೆಚ್ಚುತದೆ,  ದೇವಸ್ಥಾನಕ್ಕೆ ಬೆಟ್ಟಿ ನೀಡಿದ ಭಕ್ತರಲ್ಲಿ ಬದಲಾವಣೆ ಕಾಣಬಹುದು ಎಂದ ಅವರು ಮಸಗುಪ್ಪಿ ಮಹಾಲಕ್ಷ್ಮೀದೇವಿ ದೇವಸ್ಥಾನ ಹಿಂದಿನ ಕಾಲ ಕೆತ್ತನೆ ಕಾರ್ಯ ನೆನಪಿಸುವಂತಿದೆ, ದೇವಸ್ಥಾನಕ್ಕೆ ಕಳಸಾರೋಹಣ ಸೇರಿದಂತೆ ನವಗ್ರಹಗಳು ಎಲ್ಲವನ್ನು ನಿರ್ಮಿಸಿರುವುದು ಶ್ಲಾಘನೀಯವಾದದ್ದು ಎಂದರು. 

- Advertisement -

ಹೊಸದುರ್ಗದ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಸುಖ, ಶಾಂತಿ, ನೆಮ್ಮದಿ ಬೇಕಾದರೆ  ಧರ್ಮ ಮಾರ್ಗದಲ್ಲಿ ನಡೆಯಬೇಕು, ಧರ್ಮವನ್ನು ಯಾರು ರಕ್ಷಿಸುತ್ತಾರೆ ಅಂಥವರನ್ನು ಧರ್ಮ ಕಾಪಾಡುತ್ತದೆ ಎಂದರು.  

ಗೋಕಾಕ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕ ಜಾರಕಿಹೊಳಿ ಮಾತನಾಡಿ, ಇಂದಿನ ಯುವ ಪೀಳಿಗೆ ದುಶ್ಚಟದಿಂದ ದೂರವಿದು,  ಧಾರ್ಮಿಕತೆಗೆ ಒಲವು ತೋರುವ ಮೂಲಕ ತಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳ ಬೇಕೆಂದರು. 

ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಸ್ವಾಮೀಜಿಗಳು ನೇತೃತ್ವ ವಹಿಸಿದ್ದರು, 

- Advertisement -

ವೇದಿಕೆಯಲ್ಲಿ ಬಾಗೋಜಿಕೊಪ್ಪದ ಡಾ. ಶಿವಲಿಂಗಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಬೈಲಹೊಂಗಲದ ಮಹಾಂತೇಶ ಶಾಸ್ತ್ರೀಗಳು, ಕಪರಟ್ಟಿಯ ಶ್ರೀ ಬಸವರಾಜ ಹಿರೇಮಠ ಶ್ರೀಗಳು, ಜೋಕಾನಟ್ಟಿ  ಶ್ರೀಗಳು ಇದ್ದರು. 

ಸಮಾರಂಭ ದೇವಸ್ಥಾನದ ಕಮೀಟಿಯ ಪದಾಧಿಕಾರಿಗಳು ಮತ್ತು ಮಸಗುಪ್ಪಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು

ದೇವಸ್ಥಾನ ನಿರ್ಮಾಣಕ್ಕೆ ಅವಿರತ ಶ್ರಮಿಸಿದ ಕಲ್ಲಪ್ಪ ಮಳಲಿ ದಂಪತಿಗಳನ್ನು ಹಾಗೂ ದಾನಿಗಳನ್ನು, ಕಟ್ಟಡ ನಿರ್ಮಾಪಕರನ್ನು ಪೂಜ್ಯರು ಸತ್ಕರಿಸಿ ಗೌರವಿಸಿದರು.   ಬಸವರಾಜ ಭುಜನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಮಚಂದ್ರ ಕಾಕಡೆ ನಿರೂಪಿಸಿದರು, ಭರಮಪ್ಪ ಗಂಗಣ್ಣವರ ಸ್ವಾಗತಿಸಿದರು. ಈಶ್ವರ ಗಾಡವಿ ವಂದಿಸಿದರು.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page