Google News-KN | Google News-EN | Telegram |
ನಾಯಕ ಮಯಾಂಕ್ ಅಗರ್ ವಾಲ್ ಸಿಡಿಸಿದ ದ್ವಿಶತಕದ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕೇರಳ ವಿರುದ್ಧ ಮುನ್ನಡೆ ಸಾಧಿಸಿದೆ.
ತುಂಬೆಯಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಗುರುವಾರ ದಿನದಾಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಗೆ 410 ರನ್ ಗಳಿಸಿದೆ. ಕೇರಳ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 342 ರನ್ ಗೆ ಆಲೌಟ್ ಮಾಡಿರುವ ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 68 ರನ್ ಗಳ ಮುನ್ನಡೆ ಪಡೆದಿದೆ.
ಭಾರತ ತಂಡದ ಬಾಗಿಲು ಬಡಿಯುತ್ತಿರುವ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ ವಾಲ್ ದ್ವಿಶತಕ ಬಾರಿಸಿ ಗಮನ ಸೆಳೆದರು. 360 ಎಸೆತಗಳನ್ನು ಎದುರಿಸಿದ ಮಯಾಂಕ್ 17 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 208 ರನ್ ಬಾರಿಸಿ ಔಟಾದರು.
ಮಯಾಂಕ್ ಮತ್ತು ದೇವದತ್ ಪಡಿಕಲ್ (29) 2ನೇ ವಿಕೆಟ್ ಗೆ 89 ರನ್ ಜೊತೆಯಾಟ ನಿಭಾಯಿಸಿದರೆ, ಮಯಾಂಕ್ ಮತ್ತು ನಿಕಿನ್ ಜೋಸ್ (54) ಮೂರನೇ ವಿಕೆಟ್ ಗೆ 153 ರನ್ ಜೊತೆಯಾಟದ ಮೂಲಕ ತಂಡವನ್ನು ಮುನ್ನಡೆಸಿದರು.
ಕೆಳ ಕ್ರಮಾಂಕದಲ್ಲಿ ಶ್ರೇಯಸ್ ಗೋಪಾಲ್ (48) ಮತ್ತು ಬಿಆರ್ ಭರತ್ ಅಜೇಯ 47 ರನ್ ಬಾರಿಸಿ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು. ಕೇರಳ ಪರ ವೈಶಾಕ್ ಚಂದ್ರನ್ ಮತ್ತು ಜಲಜ್ ಸಕ್ಸೆನಾ ತಲಾ 2 ವಿಕೆಟ್ ಪಡೆದರು.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.