ಜುಲೈನಲ್ಲಿ ಚಂದ್ರಯಾನ-3ಕ್ಕೆ ಚಾಲನೆ: ಇಸ್ರೊ ಅಧ್ಯಕ್ಷ ಸೋಮನಾಥ್ ಘೋಷಣೆ | Azad Times

3 months ago 5
Google News-KN Google News-EN Telegram Facebook

Azad Times News Desk.

ಚಂದ್ರಯಾನ-3 ಯೋಜನೆಗೆ ಜುಲೈನಲ್ಲಿ ಚಾಲನೆ ನೀಡಲಾಗುವುದು ಎಂದು ಭಾರತೀಯ ಬಾಹ್ಯಕಾಶ ಕೇಂದ್ರ ಮುಖ್ಯಸ್ಥ ಕೆ.ಸೋಮನಾಥ್ ಘೋಷಿಸಿದ್ದಾರೆ.

ಶುಕ್ರವಾರ ನಡೆದ ಬಾಹ್ಯಕಾಶ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಂದ್ರನಿಗೆ ಉಪಗ್ರಹ ಕಳುಹಿಸುವ ದೇಶದ ಮಹಾತ್ವಕಾಂಕ್ಷಿ ಯೋಜನೆ ಚಂದ್ರಯಾನ-3 ಜುಲೈನಲ್ಲಿ ಆರಂಭಗೊಳ್ಳಲಿದ್ದು, ನಿರ್ದಿಷ್ಟ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದರು.

ನಮ್ಮ ಚಂದ್ರಯಾನ ಯೋಜನೆ ವಿಫಲವಾಗಿರಬಹುದು. ಆದರೆ ಬಾಹ್ಯಕಾಶದಲ್ಲಿನ ಡಾಟಾಗಳನ್ನು ಕಳುಹಿಸುತ್ತಿದೆ. ನಾವು ಲೋಪ-ದೋಷಗಳ ಕುರಿತು ತನಿಖೆ ಮಾಡಿದ್ದೇವೆ. ತಪ್ಪು ಇದ್ದಿದ್ದು ಸಾಫ್ಟ್ ವೇರ್ ನಲ್ಲಿ. ಹಾಗಾಗಿ ಮುಂದಿನ ಬಾರಿ ಈ ಲೋಪ ಕಂಡು ಬರದಂತೆ ಎಚ್ಚರ ವಹಿಸಲಿದ್ದೇವೆ ಎಂದು ಅವರು ಹೇಳಿದರು.

ಇದೇ ವೇಳೆ ಸೋಲಾರ್ ಕೊರೊನಾಲ್ ಮುಂತಾದ ಅಧ್ಯಯನಗಳಿಗೆ ಆದಿತ್ಯಾ ಎಲ್-1 ಯೋಜನೆಯನ್ನು ಆಗಸ್ಟ್ ನಲ್ಲಿ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page