Google News-KN | Google News-EN | Telegram |
ಮಣಿಪುರದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರ ಬುಧವಾರ ಅಹಿತಕರ ಘಟನೆ ಮೂಲಕ ವಿಕೋಪಕ್ಕೆ ತಿರುಗಿದ್ದು, 8 ವರ್ಷದ ಮಗು, ತಾಯಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
ಇಂಫಾಲದ ಪಶ್ಚಿಮ ವಿಭಾಗದಲ್ಲಿ ಉದ್ರಿಕ್ತ ಗುಂಪೊಂದು ದಾಳಿ ಆಂಬುಲೆನ್ಸ್ ಗೆ ಬೆಂಕಿ ಹಾಕಿದ್ದಾರೆ. ಆಂಬುಲೆನ್ಸ್ ನಲ್ಲಿ ಬಾಲಕ ಹಾಗೂ ಪೋಷಕರು ಸೇರಿದಂತೆ ಮೂವರು ಇದ್ದರು. ಅಗ್ನಿಸ್ಪರ್ಶದಿಂದ ಮೂವರೂ ಸಜೀವದಹನಗೊಂಡಿದ್ದಾರೆ.
ದುಷ್ಕರ್ಮಿಯೊಬ್ಬ ಹಾರಿಸಿದ ಗುಂಡು 8 ವರ್ಷದ ಬಾಲಕ ತೊನ್ಸಿಂಗ್ ಹ್ಯಾಂಗ್ ಸಿಂಗ್ ಹಣೆಗೆ ಬಡಿದು ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಸಾಗಿಸಲು ಅಂಬುಲೆನ್ಸ್ ನಲ್ಲಿ ತಾಯಿ ಮೀನಾ ಹ್ಯಾಂಗ್ ಸಿಂಗ್ ಮತ್ತು ಲೈಡಿಯಾ ಲೌರೆಂಬಮ್ ಹೊರಟ್ಟಿದ್ದಾಗ ಈ ದುರ್ಘಟನೆ ಸಂಭವಿಸಿದೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.