Google News-KN | Google News-EN | Telegram |
ಚೀನಾದ ಹ್ಯಾಕರ್‌ಗಳು ಭಾರತದಲ್ಲಿ ಅಳವಡಿಸಿರುವ ತನ್ನ ಕ್ಲೋಸ್ ಸರ್ಕ್ಯೂಟ್ ಟೆಲಿವಿಷನ್‌ಗಳಿಂದಲೇ ಭಾರತದ ಕುರಿತು ಮಾಹಿತಿ ಪಡೆಯುವ ಅಪಾಯವಿದ್ದು, ಸರ್ಕಾರಿ ಕಚೇರಿಗಳಲ್ಲಿ ಚೀನಾದ CCTV ಕ್ಯಾಮೆರಾಗಳ ಅಳವಡಿಕೆ ನಿಷೇಧಿಸಿ ನಿರ್ದೇಶನ ನೀಡುವಂತೆ ಅರುಣಾಚಲ ಪ್ರದೇಶದ ಕಾಂಗ್ರೆಸ್ ಶಾಸಕರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಇಲ್ಲಿನ ಪಾಸಿಘಾಟ್ ಪಶ್ಚಿಮದ ಶಾಸಕ ಮತ್ತು ಮಾಜಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ನಿನೊಂಗ್ ಎರಿಂಗ್, ‘ಭಾರತದಲ್ಲಿ ಬಳಸುತ್ತಿರುವ ಚೀನಾ ನಿರ್ಮಿತ CCTVಗಳನ್ನು ಬೀಜಿಂಗ್ ತನ್ನ ಕಣ್ಣು ಮತ್ತು ಕಿವಿಗಳಾಗಿ ಬಳಸಬಹುದು’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇಂಟರ್ನೆಟ್ ಪ್ರೋಟೋಕಾಲ್ ಕ್ಯಾಮೆರಾಗಳು ಮತ್ತು ಇಂಟರ್ನೆಟ್-ಚಾಲಿತ ಡಿಜಿಟಲ್ ವೀಡಿಯೊ ರೆಕಾರ್ಡಿಂಗ್ ಸಾಧನಗಳನ್ನು ಚೀನಾ ಮಾಹಿತಿ ಸಂಗ್ರಹದ ಸಾಧನವಾಗಿ ಬಳಸುತ್ತಿದೆ. ಮನೆಗಳಲ್ಲಿ ಅದನ್ನು ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ಅಭಿಯಾನವನ್ನು ಎರಿಂಗ್ ಆಯೋಜಿಸಿದ್ದಾರೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.