ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಗೆ ಹೃದಯಾಘಾತ: ಆರೋಗ್ಯದ ಮಾಹಿತಿ ನೀಡಿದ ನಟಿ | Azad Times

7 months ago 7
Google News-KN Google News-EN Telegram Facebook

Azad Times News Desk.

ವಿಶ್ವ ಸುಂದರಿ ಸುಶ್ಮಿತಾ ಸೇನ್‌ ತಮಗೆ ಹೃದಯಾಘಾತವಾಗಿದ್ದು, ಇದೀಗ ಚೇತರಿಸಿಕೊಂಡಿದ್ದೇನೆ ಎಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ನನಗೆ ಹೃದಯಾಘಾತವಾಗಿತ್ತು ಎಂದು ಇನ್ ಸ್ಟಾಗ್ರಾಂನಲ್ಲಿ ತಂದೆ ಜೊತೆಗಿರುವ ಫೋಟೋ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ.

ಆಂಜಿಯೋಪ್ಲ್ಯಾಸ್ಟಿ ಮಾಡಿಸಿಕೊಂಡು ವಿಶ್ರಾಂತಿ ಪಡೆದುಕೊಂಡಿರುವ ನಟಿ ಚೇತರಿಸಿಕೊಂಡಿದ್ದು, ಹೃದ್ರೋಗ ತಜ್ಞರು ‘ಪ್ರೀತಿ ತುಂಬಿರುವ ವಿಶಾಲವಾದ ಹೃದಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ನಿಮ್ಮ ಹೃದಯವನ್ನು ಸಂತೋಷದಿಂದ ಮತ್ತು ಧೈರ್ಯದಿಂದ ಇಟ್ಟುಕೊಳ್ಳಿ. ಸರಿಯಾದ ಸಮಯಕ್ಕೆ ನಿಮ್ಮ ಜೊತೆ ಧೈರ್ಯದಿಂದ ನಿಲ್ಲುತ್ತದೆ ಶೋನಾ ಎಂದು ಈ ಮಾತುಗಳನ್ನು ನನ್ನ ತಂದೆ ಸುಬಿರ್‌ ಸೇನ್ ಹೇಳುತ್ತಿದ್ದರು.

ಕೆಲವು ದಿನಗಳ ಹಿಂದೆ ನನಗೆ ಹೃದಯಘಾತವಾಗಿತ್ತು ಆಗ ನನಗೆ ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ಮಾಡಿ ಸ್ಟಂಟ್ ಹಾಕಿದ್ದಾರೆ. ಅದು ಮುಖ್ಯವಾದ ವಿಚಾರ ಏನೆಂದರೆ ನನ್ನ ಹೃದ್ರೋಗ ತಜ್ಞರು ನನ್ನ ಹೃದಯ ವಿಶಾಲವಾದದ್ದು ಹಾಗೂ ತುಂಬಾ ಪ್ರೀತಿ ತುಂಬಿದೆ ಎಂದು ಪುನಃ ದೃಢೀಕರಿಸಿದರು. ನನ್ನ ಪರ ನಿಂತು ನನ್ನ ಆರೋಗ್ಯ ವಿಚಾರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಸರಿಯಾದ ಸಮಯದಕ್ಕೆ ಚಿಕಿತ್ಸೆ ಪಡೆದುಕೊಂಡಿರುವೆ.

ಈ ಪೋಸ್ಟ್‌ ಮೂಲಕ ನನ್ನ ಅಭಿಮಾನಿಗಳು ಮತ್ತು ಆಪ್ತರಿಗೆ ವಿಚಾರ ತಿಳಿಸುತ್ತಿರುವೆ, ಆರೋಗ್ಯವಾಗಿರುವ ಕಾರಣ ಗುಡ್ ನ್ಯೂಸ್‌. ಈಗ ನಾನು ಸಂಪೂರ್ಣವಾಗಿ ರೆಡಿಯಾಗಿದ್ದು ಮತ್ತೊಮ್ಮೆ ಜೀವನ ಶುರು ಮಾಡಲು ಸಿದ್ಧ’ ಎಂದು ಸುಶ್ಮಿತಾ ಬರೆದುಕೊಂಡಿದ್ದಾರೆ.

ಅನೇಕರಿಗೆ ನೀವು ಸಹಾಯ ಮಾಡಿದ್ದೀರಿ ಜೊತೆ ಅನಾಥ ಮಕ್ಕಳಿಗೆ ಬೆಳಕಾಗಿ ನಿಂತಿದ್ದೀರಿ ಹೀಗಾಗಿ ಆ ದೇವರು ನಿಮ್ಮನ್ನು ಬದುಕಿಸಿದ್ದಾನೆ. ನಿಮ್ಮಿಂದ ಆದಷ್ಟು ಜನರಿಗೆ ಸಹಾಯ ಮಾಡಿ ಪ್ರೀತಿ ಹಂಚಿ ಹಾಗೂ ಇನ್ನು ಹೆಚ್ಚು ಸಮಾಜ ಸೇವೆಯಲ್ಲಿ ಭಾಗಿಯಾಗಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

2022ರ ನವೆಂಬರ್‌ನಲ್ಲಿ ಸುಶ್ಮಿತಾ ಸೇನ್ 47ರ ವಸಂತಕ್ಕೆ ಕಾಲಿಟ್ಟರು. ಸೌಂದರ್ಯ ಮತ್ತು ಸಾಮಾಜಿಕ ಕಾರ್ಯದಿಂದ ಹೆದರುವಾಸಿಯಾಗಿದ್ದಾರೆ. ಆದರೆ ಈ ಹಿಂದೊಮ್ಮೆ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು.

2014ರಲ್ಲಿ ಸುಶ್ಮಿಕಾ ಅಡಿಸನ್‌ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದರಂತೆ ಸುಮಾರು ನಾಲ್ಕು ವರ್ಷಗಳ ಕಾಲ ಹೋರಾಡಿದ್ದಾರೆ. ಅಡಿಸನ್‌ ಕಾಯಿಲೆ ಅಂದ್ರೆ ದೇಹದಲ್ಲಿ ಕೆಲವು ಹಾರ್ಮೋನುಗಳು ಉತ್ಪಾದಿಸುವುದನ್ನು ನಿಲ್ಲಿಸಿದಾಗ ಸಂಭವಿಸುವ ಅಸಾಮಾನ್ಯ ಅಸ್ವಸ್ಥತೆಯಾಗಿದೆ.ಈ ಸ್ಥಿತಿಯಲ್ಲಿ, ಮೂತ್ರಪಿಂಡಗಳ ಮೇಲಿರುವ ಮೂತ್ರಜನಕಾಂಗದ ಗ್ರಂಥಿಗಳು ತುಂಬಾ ಕಡಿಮೆ ಕಾರ್ಟಿಸೋಲ್ ಮತ್ತು ಅಲ್ಡೋಸ್ಟೆರಾನ್ ಅನ್ನು ಉತ್ಪಾದಿಸುತ್ತವೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page