Google News-KN | Google News-EN | Telegram |
ಮದ್ಯದ ಅಮಲಿನಲ್ಲಿ ಭವಿಷ್ಯ ಹೇಳುತ್ತಿದ್ದ ಸ್ನೇಹಿತನನ್ನು ಕಲ್ಲಿನಿಂದ ಹೊಡೆದು ಹತ್ಯೆಗೈದ ಘಟನೆ ಬೆಂಗಳೂರಿನ ಗೋವಿಂದರಾಜನಗರದಲ್ಲಿ ನಡೆದಿದೆ.
ನರೇಶ್ ಸಾವನ್ನಪ್ಪಿದ ವ್ಯಕ್ತಿ ಹಾಗೂ ಮಾರಿಮುತ್ತು ಬಂಧಿತ ವ್ಯಕ್ತಿ. ಮಾರಿಮುತ್ತು ಹೆಚ್ಚು ಯಾರೊಂದಿಗೂ ಬೆರೆಯದೇ ವಿಚಿತ್ರ ಮನಸ್ಥಿತಿ ವ್ಯಕ್ತಿ. 11 ವರ್ಷದ ಬಾಲಕನಾಗಿದ್ದಾಗಲೇ ವಿಜಯನಗರ ವ್ಯಾಪ್ತಿಯಲ್ಲಿ ಹತ್ಯೆ ಮಾಡಿ ಸೆರೆವಾಸ ಅನುಭವಿಸಿ ಹೊರಬಂದಿದ್ದ.
ಶನಿವಾರ ಮಧ್ಯಾಹ್ನ ಮಾರಿಮುತ್ತು ಜೊತೆ ನಾಗರಭಾವಿ ಮುಖ್ಯರಸ್ತೆಯಲ್ಲಿರುವ ಬಾರ್ನಲ್ಲಿ ಕುಡಿಯಲು ಬಂದಿದ್ದ ನರೇಶ್ ನಿನ್ನ ಭವಿಷ್ಯ ಹೇಳ್ತೀನಿ ಎಂದು ಆತನ ಬಳಿ ನಿನಗೆ ದುಶ್ಚಟಗಳಿವೆ, ಹುಡುಗಿಯರ ಸಹವಾಸ ಜಾಸ್ತಿ. ಕೆಲವೇ ವರ್ಷಗಳಲ್ಲಿ ನೀನು ಸಾಯುತ್ತೀಯ ಎಂದು ವ್ಯಂಗ್ಯವಾಡಿದ್ದಾನೆ.
ಇದರಿಂದಾಗಿ ಸಿಟ್ಟಿಗೆದ್ದ ಮಾರಿಮುತ್ತು ಬಾರ್ ಒಳಗಡೆ ಪರಸ್ಪರ ಕಿತ್ತಾಡಿಕೊಂಡಿದ್ದರು. ಜಗಳವಾಡುತ್ತಲೇ ಇಬ್ಬರೂ ಹೊರಬಂದಿದ್ದರು. ಈ ವೇಳೆ ರಸ್ತೆ ಪಕ್ಕದಲ್ಲಿದ್ದ ಟೈಲ್ಸ್ ಕಲ್ಲಿನಿಂದ ನರೇಶ್ ತಲೆಗೆ ಹೊಡೆದು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿ ಕುಸಿದುಬಿದ್ದು ನರೇಶ್ ಮೃತಪಟ್ಟಿದ್ದ.
ಘಟನೆಗೆ ಸಂಬಂಧಿ ಗೋವಿಂದರಾಜನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ನಂತರ ನರೇಶ್ ಪತ್ನಿಯ ದೂರಿನ ಮೇರೆಗೆ ಕೇಸ್ ದಾಖಲಿಸಿಕೊಂಡಿದ್ದರು. ಪ್ರಕರಣ ದಾಖಲಾಗಿ 24 ಗಂಟೆ ಕಳೆಯುವಷ್ಟರಲ್ಲಿ ಗೋವಿಂದರಾಜನಗರ ಪೊಲೀಸರು ಆರೋಪಿ ಮಾರಿಮುತ್ತುನನ್ನು ಬಂದಿಸಿದ್ದಾರೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.