Google News-KN | Google News-EN | Telegram |
ಮನೆಗೆಲಸದ ಹೊರೆ ತಗ್ಗಿಸಿಕೊಳ್ಳಲು ಕೆಲಸಗಾರರನ್ನು ನೇಮಿಸಿಕೊಳ್ತಾರೆ… ಹೀಗೆ ಮನೆಗೆಲಸಕ್ಕೆ ಸೇರಿಸಿಕೊಳ್ಳುವಾಗ ಹುಷಾರಾಗಿರಬೇಕಾಗುತ್ತದೆ.
ಹಲವು ಮನೆಗಳ್ಳತನ ಪ್ರಕರಣದಲ್ಲಿ ಮನೆಗೆಲಸದವರ ಕೈವಾಡವೇ ಹೆಚ್ಚಾಗಿರುತ್ತದೆ.. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮನೆ ಕೆಲಸಕ್ಕೆ ಸೇರಿಸಿಕೊಳ್ಳೋ ಮುನ್ನ ಹುಷಾರಾಗಿರಬೇಕು.
ಬೆಂಗಳೂರಿನಲ್ಲಿ ಮನೆಗಳ್ಳತನ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಮನೆ ಕೆಲಸದವರ ಬಗ್ಗೆ ಹೊಸ ಗೈಡ್ಲೈನ್ಸ್ ಬಿಡುಗಡೆಯಾಗಿದೆ.. ಮನೆ ಮನೆಗೆ ತೆರಳಿ ಪೊಲೀಸರು ಕೆಲಸಗಾರರ ಮಾಹಿತಿ ಕಲೆ ಹಾಕುತ್ತಿದ್ದು, ಕೆಲಸಗಾರರ ಫಿಂಗರ್ ಪ್ರಿಂಟ್ ಸಂಗ್ರಹ ಮಾಡಿಕೊಳ್ತಿದ್ದಾರೆ.
ಕೆಲಸಗಾರರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮುಂಚೆ ಸಂಪೂರ್ಣ ಮಾಹಿತಿ ಕಲೆ ಹಾಕುವಂತೆ ಮನೆ ಮಾಲೀಕರಿಗೆ ತಿಳಿಸುತ್ತಿದ್ದಾರೆ.. ಇನ್ನು ಹೊಸ ಗೈಡ್ಲೈನ್ಸ್ನಲ್ಲಿರುವ ಅಂಶಗಳೆಂದರೆ, ಕೆಲಸಕ್ಕೆ ಸೇರಿಸಿಕೊಳ್ಳುವವರ ಮಾಹಿತಿ ಖಾಕಿಗೆ ನೀಡಬೇಕು, ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಬೇಕು, ಪೊಲೀಸರಿಂದ ಆ ವ್ಯಕ್ತಿಯ ಮಾಹಿತಿ ಸಂಗ್ರಹ ಮಾಡಿಕೊಳ್ಳಬೇಕು.
ಮನೆ ಕೆಲಸಕ್ಕೆ ಬರುವವರ ಪೂರ್ವಾಪರ ವಿಚಾರಣೆ ಮಾಡಬೇಕು.. ಅವರ ಮೇಲೆ ಅಪರಾಧ ಪ್ರಕರಣಗಳು ಇವೆಯಾ ಎಂದು ಪರಿಶೀಲನೆ ನಡೆಸಿದ ಬಳಿಕ ಕೆಲಸಕ್ಕೆ ನೇಮಿಸಿಕೊಳ್ಳಬೇಕಾಗಿರುತ್ತದೆ.. ಈ ಎಲ್ಲಾ ನಿಯಮಗಳನ್ನು ಪಾಲಿಸಿದರೆ, ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.