ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗು ಮಹಡಿಯಿಂದ ಬಿದ್ದು ಸಾವು | Azad Times

2 months ago 3
Google News-KN Google News-EN Telegram Facebook

Azad Times News Desk.

ಮಕ್ಕಳು ಮಹಡಿಯ ಬಾಲ್ಕನಿಯಿಂದ ಸಾವನಪ್ಪುತ್ತಿರುವ ಪ್ರಕರಣ ಹೆಚ್ಚಾಗಿ ವರದಿಯಾಗ್ತಿದೆ.

ಕಳೆದ 4 ದಿನಗಳ ಹಿಂದೆ ಕೆಂಗೇರಿಯಲ್ಲಿ ಮಗು ಬಾಲ್ಕನಿಯಿಂದ ಬಿದ್ದು ಸಾವನಪ್ಪಿದ ಪ್ರಕರಣ ಮಾಸುವ ಮುನ್ನವೇ ಚಾಮರಾಜಪೇಟೆಯಲ್ಲಿ ಅಂಥಹದ್ದೇ ಘಟನೆ ನಡೆದಿದೆ.

ಚಾಮರಾಜಪೇಟೆಯ ಆಜಾದ್ ನಗರದ 6ನೇ ಕ್ರಾಸ್​​ನಲ್ಲಿ ಒಂದೂವರೆ ವರ್ಷದ ದೀಕ್ಷಾ ಮಹಡಿ‌ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾಳೆ.

ವಿನಯ್ ದಂಪತಿಯ ಪುತ್ರಿ ದೀಕ್ಷಾ ಸಾವನಪ್ಪಿದ್ದು, ಪೋಷಕರಲ್ಲಿ ದುಖಃ ಮಡುಗಟ್ಟಿದೆ.. ಸ್ನೇಹಿತರ ಮನೆಗೆ ದಂಪತಿಗಳು ಮಗಳನ್ನು ಕರೆದುಕೊಂಡು ಬಂದಿದ್ರು..ದೀಕ್ಷಾಳ ತಾಯಿ 9.30ರ ಸುಮಾರಿಗೆ ಮಗುವಿಗೆ ಊಟ ಮಾಡಿಸಲು ಮುಂದಾಗಿದ್ದಾರೆ.

ಆ ವೇಳೆ ಆಟವಾಡುತ್ತ ಮಗು ಗ್ರಿಲ್ಸ್ ಹತ್ತಿದೆ. ಬಳಿಕ ನೋಡ ನೋಡುತ್ತಿದ್ದಂತೆ ಮಗು ಕೆಳಗೆ ಬಿದ್ದಿದೆ.. ಪೋಷಕರು ಕೂಡಲೇ ಮಗಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ,

ಆದರೆ ಮಾರ್ಗ ಮಧ್ಯೆ ಮಗು ಕೊನೆಯುಸಿರೆಳೆದಿದೆ.. ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page