ಹೆದ್ದಾರಿಗಳಲ್ಲಿ ಹಾಕಿರುವ ಬಿಳಿ ಪಟ್ಟಿ, ಹಳದಿ ಪಟ್ಟಿ ವ್ತ್ಯತ್ಯಸ ಏನು ಗೊತ್ತಾ? | Azad Times

2 months ago 2
Google News-KN Google News-EN Telegram Facebook

Azad Times News Desk.

ಹೆದ್ದಾರಿಗಳ ಮೇಲೆ ಬಿಳಿ, ಹಳದಿ ಬಣ್ಣಗಳಲ್ಲಿ ಹಾಕುವ ಹಲವು ವಿಧದ ಪಟ್ಟೆಗಳನ್ನು ಎಲ್ಲರೂ ನೋಡಿರುತ್ತೇವೆ ಆದರೆ ಗಮನಿಸಿರುವುದಿಲ್ಲ. ಇಷ್ಟಕ್ಕೂ ಆ ಪಟ್ಟೆಗಳನ್ನು ಯಾಕೆ ಹಾಕುತ್ತಾರೆ?, ಅವುಗಳ ಉಪಯೋಗವೇನು ಎಂದು ಯಾವಾಗಲಾದರೂ ಯೋಚನೆ ಮಾಡಿದ್ದೀರಾ?

ರಸ್ತೆ ಮೇಲೆ ವಾಹನಗಳನ್ನು ಚಲಾಯಿಸುವ ವಾಹನ ಸವಾರರು ಅಷ್ಟೇ ಅಲ್ಲ, ನಡೆದುಕೊಂಡು ಹೋಗುವ ಪಾದಚಾರಿಗಳೂ ಕೂಡ ಸಂಚಾರಿ ನಿಯಮಗಳನ್ನು ತಿಳಿದುಕೊಂಡಿರಬೇಕು ಮತ್ತು ಕಡ್ಡಾಯವಾಗಿ ಪಾಲಿಸಬೇಕು, ಜೊತೆಗೆ  ಟ್ರಾಫಿಕ್ ಸಿಗ್ನಲ್ ಗಳನ್ನು ಪಾಲಿಸುತ್ತಾ ವಾಹನ ಚಲಾಯಿಸಬೇಕು. ಇದರಿಂದ ರಸ್ತೆ ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಬಹುದು.ಈಗ ಬನ್ನಿ ಹೆದ್ದಾರಿಯಲ್ಲಿ ಹಾಕಿರುವ ಬಿಳಿ, ಹಳದಿ ಪಟ್ಟೆಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ಬಿಳಿ ಗೆರೆಗಳ ಮಧ್ಯೆ ಬ್ರೇಕ್ ಇದ್ದರೆ :

ಈ ತರಹದ ಬಿಳಿ ಗೆರೆಗಳು ಸಾಮಾನ್ಯವಾಗಿ ಭಾರತದ ಹೈವೇಗಳಲ್ಲಿ ಕಾಣ ಸಿಗುತ್ತವೆ. ಇದರ ಅರ್ಥ ಇಲ್ಲಿ ನೀವು ಓವರ್ ಟೇಕ್ ಮಾಡಬಹುದು, ನೀವು ಹೋಗುತ್ತಿರುವ ಲೇನ್ ಬದಲಾಯಿಸಬಹುದು ಮತ್ತು ಯೂ ಟರ್ನ್ ತೆಗೆದುಕೊಳ್ಳಬಹುದು. ಆದರೆ ಎಚ್ಚರಿಕೆಯಿಂದ ಎಲ್ಲಾ ದಿಕ್ಕಿನೆಡೆ ನೋಡಿಕೊಂಡು ಲೇನ್ ಬದಲಾಯಿಸಬೇಕು ಮತ್ತು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಸ್ಥಿರವಾದ ಒಂದು ಬಿಳಿ ಬಣ್ಣದ ಪಟ್ಟೆ ಇದ್ದರೆ:

ಹೆದ್ದಾರಿ ಮೇಲೆ ಬಿಳಿ ಪಟ್ಟೆ ಸ್ಥಿರವಾಗಿ, ಉದ್ದಕ್ಕೆ ಒಂದೇ ಇದ್ದರೆ ವಾಹನಗಳು ತಮ್ಮ ಲೇನ್‍ನಲ್ಲೇ ಸಾಗಬೇಕು ಎಂದರ್ಥ, ಇತರೆ ಲೇನ್‌ಗಳ ಒಳಗೆ ಪ್ರವೇಶಿಸಬಾರದು. ಆದರೆ ಎದುರುಗಡೆ ಏನಾದರೂ ಅಡಚಣೆ ಎದುರಾದರೆ ಮಾತ್ರ ಇನ್ನೊಂದು ಲೇನ್ ಪ್ರವೇಶಿಸಬಹುದು.

ಎರಡು ಹಳದಿ ಬಣ್ಣದ ಪಟ್ಟೆಗಳು ಇದ್ದರೆ:

ಹೆದ್ದಾರಿ ಮೇಲೆ ಸ್ಥಿರವಾದ ಎರಡು ಹಳದಿ ಬಣ್ಣದ ಗೆರೆಗಳು ಇದ್ದರೆ ಓವರ್‌ಟೇಕ್ ಮಾಡುವುದು ಕಡ್ಡಾಯವಾಗಿ ನಿಷೇಧಿಸಿದೆ ಎಂದರ್ಥ.ಈ ಪಟ್ಟೆಗಳು ಸಾಮಾನ್ಯವಾಗಿ ಒಂದೇ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಎರಡು ಲೇನ್ ಗಳ ರಸ್ತೆಯಲ್ಲಿರುತ್ತದೆ. ಇನ್ನೊಂದು ಬದಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಸಂಚರಿಸುವುದರಿಂದ ಯಾವುದೇ ಕಾರಣಕ್ಕೂ ಇಲ್ಲಿ ನೀವು ಲೇನ್ ಬದಲಾಯಿಸುವಂತಿಲ್ಲ.

ಸ್ಥಿರ ಮತ್ತು ಬ್ರೇಕ್ ಆದ ಪಟ್ಟೆಗಳು ಜೊತೆಗೆ ಇದ್ದರೆ:

ನೀವು ಸ್ಥಿರವಾಗಿರುವ ಹಳದಿ ಪಟ್ಟೆ ಬದಿಯಲ್ಲಿದ್ದರೆ ನೀವು ಓವರ್ ಟೇಕ್ ಮಾಡುವಂತಿಲ್ಲ, ಮತ್ತು ನೀವೇನಾದರೂ ಬ್ರೇಕ್ ಆಗಿರುವ ಹಳದಿ ಪಟ್ಟೆ ಬದಿಯಲ್ಲಿ ಸಂಚರಿಸುತ್ತಿದ್ದರೆ ನೀವು ಓವರ್ ಟೇಕ್ ಮಾಡಬಹುದು ಎಂದರ್ಥ. ಆದರೆ ಇತರ ವಾಹನಗಳ ಸಂಚಾರವನ್ನು ಗಮನಿಸುತ್ತಿರಬೇಕು.

ಸ್ಥಿರವಾದ ಹಳದಿ ಬಣ್ಣದ ಪಟ್ಟೆ ಇದ್ದರೆ

ಹೆದ್ದಾರಿ ಮಧ್ಯದಲ್ಲಿ ಸ್ಥಿರವಾದ, ಉದ್ದಕ್ಕೆ ಹಳದಿ ಪಟ್ಟೆ ಇದ್ದರೆ ವಾಹನಗಳು ಓವರ್‌ಟೇಕ್ ಮಾಡಬಹುದು ಎಂದರ್ಥ. ಆದರೆ ಹಳದಿ ಬಣ್ಣದ ಗೆರೆಯನ್ನು ಮಾತ್ರ ದಾಟಬಾರದು. ಆದರೆ ಈ ಪಟ್ಟೆಯ ಅರ್ಥ ಎಲ್ಲಾ ಸ್ಥಳಗಳಲ್ಲಿ ಒಂದೇ ತರಹ ಇರಲ್ಲ. ಉದಾಹರಣೆಗೆ ಕೆಲವು ಕಡೆ ಈ ರೀತಿ ಗೆರೆ ಇದ್ದರೆ ಓವರ್‌ಟೇಕ್ ಮಾಡಬಾರದು ಎಂದರ್ಥ ಇದೆ. ಆಯಾ ಪ್ರದೇಶದ, ರಾಜ್ಯದ ರೂಲ್ಸ್ ತಿಳಿದುಕೊಳ್ಳುವುದು ಒಳಿತು.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page