ಸಲಿಂಗ ವಿವಾಹ ಕಾನೂನು ಮಾನ್ಯತೆಗೆ ಕೇಂದ್ರ ವಿರೋಧ! | Azad Times

2 weeks ago 2
Google News-KN Google News-EN Telegram Facebook

Azad Times News Desk.

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದನ್ನು ವಿರೋಧಿಸಿ ಕೇಂದ್ರ ಸರ್ಕಾರ ಭಾನುವಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.

ಸಲಿಂಗ ಸಂಬಂಧಗಳು ಮತ್ತು ಭಿನ್ನಲಿಂಗೀಯ ಸಂಬಂಧಗಳು ಸ್ಪಷ್ಟವಾಗಿ ವಿಭಿನ್ನ ವರ್ಗಗಳಾಗಿದ್ದು, ಅವುಗಳನ್ನು ಒಂದೇ ರೀತಿಯಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಕೇಂದ್ರ ಸುಪ್ರೀಂಕೋರ್ಟ್​​ನಲ್ಲಿ ಹೇಳಿದೆ.

ಸುಪ್ರೀಂಕೋರ್ಟ್‌ನಲ್ಲಿ ತನ್ನ ಪ್ರತಿ-ಅಫಿಡವಿಟ್‌ ಸಲ್ಲಿಸಿದ ಕೇಂದ್ರ ಸೆಕ್ಷನ್ 377 ಐಪಿಸಿಯ ಅಪರಾಧೀಕರಣವು ಸಲಿಂಗ ವಿವಾಹಕ್ಕೆ ಮಾನ್ಯತೆ  ಸಾಧ್ಯವಿಲ್ಲ ಎಂದು ಹೇಳಿದೆ. ಭಿನ್ನಲಿಂಗೀಯ ಸ್ವಭಾವಕ್ಕೆ ಸೀಮಿತವಾದ ವಿವಾಹದ ಶಾಸನಬದ್ಧ ಮಾನ್ಯತೆ ಇತಿಹಾಸದುದ್ದಕ್ಕೂ ರೂಢಿಯಾಗಿದೆ. ಇದು ಅಸ್ತಿತ್ವ ಮತ್ತು ಮುಂದುವರಿಕೆ ಎರಡಕ್ಕೂ ಅಡಿಪಾಯವಾಗಿದೆ ಎಂದು ಕೇಂದ್ರ ಹೇಳಿದೆ.

ಸಾಮಾಜಿಕ ಮೌಲ್ಯವನ್ನು ಪರಿಗಣಿಸಿ, ಇತರ ರೀತಿಯ ಮದುವೆ ಹೊರತುಪಡಿಸಿ ಭಿನ್ನಲಿಂಗೀಯ ವಿವಾಹಕ್ಕೆ ಮಾನ್ಯತೆ ನೀಡುವಲ್ಲಿ ಬಲವಾದ ಆಸಕ್ತಿಯನ್ನು ಹೊಂದಿದೆ ಎಂದು ಕೇಂದ್ರ ಪ್ರತಿ-ಅಫಿಡವಿಟ್​​ನಲ್ಲಿ ಹೇಳಿರುವುದಾಗಿ ಎಂದು ಲೈವ್‌ಲಾ ವರದಿ ಮಾಡಿದೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page