ವಿದ್ಯುತ್ ಸಮಸ್ಯೆ ಬಾರದಂತೆ ವಿದ್ಯುತ್ ಕಾಮಗಾರಿ – ರಮೇಶ ಭೂಸನೂರ | Azad Times

2 weeks ago 3
Google News-KN Google News-EN Telegram Facebook

Azad Times News Desk.

ಸಿಂದಗಿ: ಉಪ ಚುನಾವಣೆಯ ನಂತರ ವಿದ್ಯುತ್ ಕ್ಷೇತ್ರದಲ್ಲಿ ಅತೀ ದೊಡ್ಡ ಬದಲಾವಣೆ ಸೃಷ್ಟಿಸಿದಂತಾಗಿದೆ  ಭೂಸನೂರ ಅವರ ಅಭಿವೃದ್ಧಿ ಕೆಲಸಗಳು ಮಾತನಾಡುತ್ತವೆ ಎಂದು ಕ್ಷೇತ್ರದಲ್ಲಿ ಮತದಾರರು ಮಾತನಾಡುತ್ತಿರುವುದು ಹೊಸದೇನೂ ಅಲ್ಲ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಪಟ್ಟಣದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಹೆಸ್ಕಾಂ ಕಛೇರಿ ಆವರಣದಲ್ಲಿ ನಿರ್ಮಿಸಲಾದ ಉಪವಿಬಾಗೀಯ ಕಛೇರಿಯ ನೂತನ ಕಟ್ಟಡ  ಹಾಗೂ ವಿದ್ಯುತ್ ಪರಿವರ್ತಕ ಪರೀಕ್ಷಾ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿ, ಉಪ ವಿಭಾಗೀಯ ಕಛೇರಿ ಕಟ್ಟಡಕ್ಕೆ ರೂ 80 ಲಕ್ಷ, ಹಾಗೂ ಪರಿವರ್ತಕ ಪರೀಕ್ಷಾ ಕೇಂದ್ರದ ಕಟ್ಟಡಕ್ಕೆ ರೂ 40 ಲಕ್ಷ ಹೀಗೆ ಮೋರಟಗಿ ಕಛೇರಿಗೆ ರೂ 40 ಲಕ್ಷ, ಗೋಲಗೇರಿ ಕಛೇರಿಗೆ 30 ಹೀಗೆ ಹಲವಾರು ಕಟ್ಟಡ ನಿರ್ಮಾಣಕ್ಕೆ ಸಾಕಷ್ಟು ಹಣ ಒದಗಿಸಲಾಗಿದೆ ಅಲ್ಲದೆ 2018ರಲ್ಲಿ ಆಹೇರಿ ಗ್ರಾಮದಲ್ಲಿ 220 ಕೇವ್ಹಿ ಸ್ಟೇಷನ್‍ಗೆ ಶಂಕುಸ್ಥಾಪನೆ ಮಾಡಲಾಗಿತ್ತು ಮತ್ತೆ ನಾ ಶಾಸಕನಾದ ಮೇಲೆ ಉದ್ಘಾಟಿಸಿದ್ದೇನೆ. ಅಲ್ಲದೆ ಕನ್ನೋಳ್ಳಿ, ತಾಂಬಾ ಭಾಗದ ರೈತರಿಗೆ ಹಗಲೊತ್ತಿನಲ್ಲಿ ಸುಮಾರು 8 ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು ಎಂದು 2 ಗ್ರಾಮಗಳಲ್ಲಿ 110 ಕೆವ್ಹಿ ಸ್ಟೇಷನ್ ನಿರ್ಮಾಣಕ್ಕೆ ಪ್ರಸ್ತಾವನೆಗೆ ಕಳಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ  ಮುಂದಿನ 40 ವರ್ಷಗಳ ವರೆಗೆ ವಿದ್ಯುತಿನ ಕೊರತೆ ಕಾಣ ಬಾರದು ಎಂದು ಹೊಸ ಹೊಸ ಸ್ಟೆಷನ್‍ಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

ವಿಶಾಲ ಧರೆಪ್ಪಗೋಳ ಮಾತನಾಡಿ, ಸುಟ್ಟ ಪರಿವರ್ತಕಗಳನ್ನು ರಿಪೇರಿ ಮಾಡಿ ಅದನ್ನು ಪರೀಕ್ಷೆ ನಡೆಸಿ ರೈತರ ಕೈಗೆ ಸಿಗಬೇಕಾದರೆ 2 ದಿನಗಳು ಬೇಕಾಗಿತ್ತು ಆ ಸಮಸ್ಯೆಯನ್ನು ನೀಗಿಸಲು ಅಲ್ಲದೆ ರೈತರಿಗೆ ಸಕಾಲಕ್ಕೆ ಟ್ರಾನ್ಸಪಾರ್ಮರಗಳನ್ನು ನೀಡಲು ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ರೈತರಿಗೆ ಹಗಲು ಹೊತ್ತಿನಲ್ಲಿ 7 ಗಂಟೆ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಮಲಘಾಣ ದೇವಣಗಾಂವ, ಆಹೇರಿ ಬಾಗಗಳಲ್ಲಿನ ಹಳ್ಳಿಗಳಲ್ಲಿನ 400 ಫಲಾನುಭವಿಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಿಕೊಡಲಾಗಿದೆ. ಇನ್ನೂ  398 ಫಲಾನುಭವಿಗಳ ಯಾದಿಯನ್ನು ಶಾಸಕರ ಸಹಕಾರದಿಂದ ಪ್ರಸ್ತಾವನೆಗೆ ಕಳಿಸಲಾಗಿದ್ದು ಮತ್ತು ಅಧಿಕಾರಿಗಳಿಗೆ ಸಹಕಾರ ನೀಡವಲ್ಲಿ ಶಾಸಕರ ಪಾತ್ರ ಮೆಚ್ಚುವಂತದ್ದು ಪ್ರಾರಂಭಿಸಿದ ಕಾಮಗಾರಿಯ ಬಗ್ಗೆ ನಿತ್ಯ ವಿಚಾರಣೆ ನಡೆಸಿ ಅದನ್ನು ಪ್ರಗತಿಗೆ ಕೊಂಡೊಯ್ಯುವ ಏಕೈಕ ಶಾಸಕರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ, ಹೆಸ್ಕಾಂ ಇಂಜನೀಯರ ಗೋಪಾಲ ಬಡಿಗೇರ ಮಾತನಾಡಿದರು.

ಉಪಾಧ್ಯಕ್ಷ ಹಾಸೀಂ ಆಳಂದ, ಹೆಸ್ಕಾಂ ನಿಗಮದ ನಿರ್ದೇಶಕ ಪುಟ್ಟು ಸಾವಳಗಿ, ಪ್ರಗತಿಪರ ರೈತ ಬಾಗಪ್ಪಗೌಡ ಪಾಟೀಲ, ಓತಿಹಾಳ ಗ್ರಾಮದ ವಠಾರ, ಬ್ಯಾಕೋಡ ಗ್ರಾಮದ ನಿಂಗಣ್ಣ ಬಾವಿಕಟ್ಟಿ, ಹೆಸ್ಕಾಂ ಅಧಿಕಾರಿಗಳಾದ ಬಿ.ಎನ್. ಸಾಗನೂರ, ಕಲ್ಲಪ್ಪ ಇಂಗಳೆ, ಕಾರ್ಮಿಕರ ಸಂಘದ ಅಧ್ಯಕ್ಷ ಸಂಜು ರಾಠೋಡ, ಗುತ್ತಿಗೆದಾರರ ಸಂಘದ ಅದ್ಯಕ್ಷ ನಾಗು, ಗುರು ಗಡಗಿ, ಚಂದ್ರಶೇಖರ ಅಮಲಿಹಾಳ, ಸತೀಶಗೌಡ ಬಿರಾದಾರ, ಗುತ್ತಿಗೆದಾರ ಆರ್.ಎಸ್.ಚೋರಗಿ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು,

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page