Google News-KN | Google News-EN | Telegram |
ನಾಯಕಿ ಅಲೈಸಾ ಹೀಲಿ ಸಿಡಿಸಿದ ಅಜೇಯ 96 ರನ್ ಗಳ ನೆರವಿನಿಂದ ಉತ್ತರ ಪ್ರದೇಶ ವಾರಿಯರ್ಸ್ ತಂಡ 10 ವಿಕೆಟ್ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದೆ. ಈ ಮೂಲಕ ವನಿತಾ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸತತ 4ನೇ ಸೋಲಿನಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
ಬ್ರೇಬೊರ್ನ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 19.3 ಓವರ್ ಗಳಲ್ಲಿ 138 ರನ್ ಗೆ ಆಲೌಟಾಯಿತು. ಸುಲಭ ಗುರಿ ಬೆಂಬತ್ತಿದ ಯುಪಿ ವಾರಿಯರ್ಸ್ 13 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಜಯಭೇರಿ ಬಾರಿಸಿತು.
ಯುಪಿ ವಾರಿಯರ್ಸ್ ಪರ ನಾಯಕಿ ಅಲೈಸಾ ಹೀಲಿ 47 ಎಸೆತಗಳಲ್ಲಿ 18 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 96 ರನ್ ಬಾರಿಸಿ ಔಟಾಗದೇ ಉಳಿದರೆ, ದೇವಿಕಾ ವೈದ್ಯ 31 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡ 36 ರನ್ ಬಾರಿಸಿದರು. ಆರ್ ಸಿಬಿ ಬೌಲರ್ ಗಳು ಒಂದು ವಿಕೆಟ್ ಪಡೆಯಲು ಆಗದೇ ನಿರಾಸೆ ಮೂಡಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆರ್ ಸಿಬಿ ಪರ ಎಲ್ಲಿಸಿ ಪೆರ್ರಿ 39 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 52 ರನ್ ಬಾರಿಸಿದರು. ಪೆರ್ರಿ ಮತ್ತು ಸೋಫಿನ್ ಡೆವಿನ್ 2ನೇ ವಿಕೆಟ್ ಗೆ 44 ರನ್ ಜೊತೆಯಾಟದಲ್ಲಿ ಪಾಲ್ಗೊಂಡಿದ್ದರು.
ಯುಪಿ ವಾರಿಯರ್ಸ್ ಪರ ಸೋಫಿ ಎಕ್ಲಿಸ್ಟೊನ್ 4 ವಿಕೆಟ್ ಪಡೆದರೆ, ದೀಪ್ತಿ ಶರ್ಮ 3 ವಿಕೆಟ್ ಪಡೆದು ಆರ್ ಸಿಬಿ ಮಧ್ಯಮ ಕ್ರಮಾಂಕದಲ್ಲಿ ನಾಟಕೀಯ ಕುಸಿತ ಅನುಭವಿಸಿತು
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.