ಬೈಕ್ ಮೇಲೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಮೂವರ ಬಂಧನ | Azad Times

2 weeks ago 2
Google News-KN Google News-EN Telegram Facebook

Azad Times News Desk.

ಬೀದರ: ಗಡಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲಾ ವರಿಷ್ಠ ಪೋಲಿಸ್ ಅಧಿಕಾರಿ ಚನ್ನಬಸವ ಲಂಗೋಟಿ ಮೊನ್ನೆ ತಾನೇ ಗಡಿ ಪ್ರದೇಶದ ಪೊಲೀಸ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚುನಾವಣೆಯಲ್ಲಿ  ಅಕ್ರಮಗಳು ನಡೆಯದಂತೆ ನಿಗಾ ವಹಿಸಿದ್ದರೂ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಪ್ರಕರಣ ಜರುಗಿದೆ.

ಬೈಕ್‍ಗಳ ಮೇಲೆ ಅಕ್ರಮವಾಗಿ ಸಾಗಿಸುತ್ತಿದ್ದ 70 ಕೆ.ಜಿ. ಗಾಂಜಾ ಅನ್ನು ಪೊಲೀಸರು ಔರಾದ್ ತಾಲ್ಲೂಕಿನ  ವಡಗಾಂವ್-ಜಮಗಿ ರಸ್ತೆಯ ಚಿಕ್ಲಿ(ಜೆ) ಕ್ರಾಸ್ ಬಳಿ ವಶಪಡಿಸಿ ಕೊಂಡಿದ್ದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ಅಂದಾಜು ರೂ.9.80 ಲಕ್ಷ ಮೌಲ್ಯದ ಗಾಂಜಾ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಾಚರಣೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಅವರು, ಪರಾರಿಯಾದ ಇನ್ನೂ ಮೂವರು ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ತಿಳಿಸಿದರು.

ಖಚಿತ ಸುಳಿವಿನ ಮೇರೆಗೆ ಔರಾದ್ ಸಿಪಿಐ ಮಲ್ಲಿಕಾರ್ಜುನ ಇಕ್ಕಳಕಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‍ಐಗಳಾದ ಸುರೇಶ ಭಾವಿಮನಿ, ಉಪೇಂದ್ರಕುಮಾರ, ಸಿದ್ಧಲಿಂಗ, ಅಸಿಸ್ಟಂಟ್ ಹೆಡ್ ಕಾನ್‍ಸ್ಟೆಬಲ್ ಶಿವಕುಮಾರ, ಕಾನ್‍ಸ್ಟೆಬಲ್‍ಗಳಾದ ಅರುಣಸಿಂಗ್, ವೆಂಕಟ, ಜಾನೇಶ್ವರ, ನರಸಾರೆಡ್ಡಿ ಹಾಗೂ ಅರುಣ ಪಾಲ್ಗೊಂಡಿದ್ದರು. ತಂಡಕ್ಕೆ ಬಹುಮಾನ ಹಾಗೂ ಪ್ರಶಂಸೆ ಪತ್ರ ಕೊಡಲಾಗುವುದು ಎಂದು ವರಿಷ್ಠಾಧಿಕಾರಿಗಳು ಹೇಳಿದರು.

ಅಪರಾಧ ತಡೆಗಟ್ಟಲು ಗಾಂಜಾ ಸಾಗಾಟ ಮತ್ತು ಇನ್ನೂ ಈ ತರಹದ ಚಟುವಟಿಕೆಗಳನ್ನು ತಡೆಗಟ್ಟಲು ಸಹಾಯ ಮಾಡಬೇಕೆಂದು ತೆಲಂಗಾಣ, ಸಂಗರಡ್ಡಿ ಹಾಗು ಮಹಾರಾಷ್ಟ್ರ  ಪೊಲೀಸ ಅಧಿಕಾರಿಗಳ ಜೊತೆಗೆ ಮೊನ್ನೆ ತಾನೆ ಚರ್ಚೆ ನಡೆಸಿದ್ದರು. ಇಷ್ಟರಲ್ಲಿಯೇ ಈ ಗಾಂಜಾ ಸಾಗಾಟ ಪ್ರಕರಣ ಜರುಗಿದ್ದು ಚುನಾವಣೆಯ ಸಮಯದಲ್ಲಿ ಇನ್ನೂ ಹೆಚ್ಚಿ‌ನ ಅಪರಾಧ ಪ್ರಕರಣಗಳ ಮುನ್ಸೂಚನೆ ನೀಡಿದೆ.

ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರಿಷ್ಠಾಧಿಕಾರಿ ತಿಳಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್ ಇದ್ದರು.


ವರದಿ: ನಂದಕುಮಾರ ಕರಂಜೆ, ಬೀದರ

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page