ದ್ವೇಷ ಅಸೂಯೆಗಳನ್ನು ಬಣ್ಣಗಳ ಮೂಲಕ ತೊಳೆಯೋಣ: ಹೋಳಿ ಹಬ್ಬ ಹೀಗೂ ಅರ್ಥೈಸಬಹುದು! | Azad Times

3 weeks ago 9
Google News-KN Google News-EN Telegram Facebook

Azad Times News Desk.

ಭಾರತದಲ್ಲಿ ಪ್ರತಿಯೊಂದು ಹಬ್ಬವು ತನ್ನದೇ ಆದ ಹಿನ್ನೆಲೆ ಸಂಪ್ರದಾಯಗಳು ಆಚರಣೆಗಳನ್ನು ಒಳಗೊಂಡಿದೆ. ಯಾವುದೇ ಜಾತಿ ಮತ ಧರ್ಮಗಳ ಭೇದವಿಲ್ಲದೆ ಜನರು ಒಟ್ಟಾಗಿ ಸೇರಿ ವಿಶಿಷ್ಟ ರೀತಿಯಲ್ಲಿ ಆಚರಿಸುವ ಹಬ್ಬಗಳಲ್ಲೊಂದಾದ ಹೋಳಿ ಹುಣ್ಣಿಮೆಯು ಬಣ್ಣಗಳ ಹಬ್ಬವಾಗಿದೆ.

ಪುರಾಣ ಕಥೆಗಳಲ್ಲಿ ನಮಗೆ ತಿಳಿದಿರುವಂತೆ ಪಾಲ್ಗುಣ ಮಾಸದ ಶುದ್ಧ ಹುಣ್ಣಿಮೆಯಂದು ಶಿವನು ತನ್ನ ಮೂರನೇ ಕಣ್ಣಿನಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದ್ದಕ್ಕಾಗಿ ಹೋಳಿ ಹುಣ್ಣಿಮೆಯನ್ನು ಕಾಮನ ಹಬ್ಬವನ್ನಾಗಿ ಆಚರಿಸಲಾಗುತ್ತದೆ.

ಮನುಷ್ಯನಲ್ಲಿರುವ ದ್ವೇಷ, ಅಸೂಯೆ, ಅಜ್ಞಾನ, ಅಂಧಕಾರ, ಮೂಢಾಚಾರಗಳನ್ನು ಬಣ್ಣಗಳಿಂದ ತೊಳೆದು ಪರಸ್ಪರ ನಂಬಿಕೆಗೆ ಅರ್ಹವಾದ ಪ್ರೀತಿ, ಗೌರವ, ಮಮಕಾರ, ಸುವಿಚಾರ, ಸತ್ಸಂಗಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು ಹೋಳಿ ಹಬ್ಬವನ್ನು ಆಚರಿಸಿದರೆ ಹಬ್ಬಕ್ಕೆ ವಿಶೇಷವಾದ ಅರ್ಥವಿರುತ್ತದೆ.

ಪುರಾಣ ಕಥೆಗಳಲ್ಲಿ ಇರುವುದು ಕೂಡ ಇದೇ ಆಗಿದೆ ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಎನ್ನುವಂತೆ ಮನುಷ್ಯ ನಲ್ಲಿರುವ ಅರೀಶ್ಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಾದಿಯಾಗಿ ದುಷ್ಟ ಆಲೋಚನೆಗಳನ್ನು, ದ್ವೇಷ ಅಸೂಯೆಗಳನ್ನು ಬಣ್ಣಗಳ ಮೂಲಕ ತೊಳೆಯಬೇಕೇ ವಿನಹ ಮನುಷ್ಯರನ್ನೇ ದ್ವೇಷಿಸುವುದು ಒಳ್ಳೆಯದಲ್ಲ ಎಂಬುದು ಇದರ ಅರ್ಥ. ಪ್ರತಿಯೊಬ್ಬರು ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಕೆಲವು ವಿಚಾರಗಳಲ್ಲಿ ಗೊಂದಲವಿರಬಹುದು. ಇಲ್ಲಿ ವ್ಯಕ್ತಿತ್ವ ವಿಕಸನವಾದಾಗ ಮಾತ್ರ ಹೋಳಿ ಹಬ್ಬಕ್ಕೊಂದು ಮಹತ್ವವಿರುತ್ತದೆ.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page