Google News-KN | Google News-EN | Telegram |
ನಟಿ ಖುಷ್ಬೂ ಸುಂದರ್ ಅವರು ಚಿತ್ರರಂಗಕ್ಕಿಂತ ರಾಜಕೀಯದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಆಗಿ ಕಾರ್ಯ ಆರಂಭಿಸಿದ್ದಾರೆ.
ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಇದರ ಜೊತೆ ಅನೇಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಬರ್ಖಾ ದತ್ ಜೊತೆಗೆ ಮಾತನಾಡಿದ ಖುಷ್ಬೂ ಅವರು ಎಳೆಎಳೆಯಾಗಿ ತಮ್ಮ ಬಾಲ್ಯದ ದಿನಗಳನ್ನು ಹೇಳಿಕೊಂಡಿದ್ದಾರೆ.
‘ಮಗುವಿನ ಮೇಲೆ ದೌರ್ಜನ್ಯ ಆದರೆ ಆ ಗಾಯ ಜೀವನ ಪರ್ಯಂತ ಹಾಗೆಯೇ ಇರುತ್ತದೆ. ಅದು ಹುಡುಗಿ ಆಗಿರಬಹುದು, ಹುಡುಗನೇ ಆಗಿರಬಹುದು. ನನ್ನ ತಾಯಿ ಸಾಕಷ್ಟು ನಿಂದನೆಗೆ ಒಳಗಾಗುತ್ತಿದ್ದರು.
ತನ್ನ ಹೆಂಡತಿ ಹಾಗೂ ಮಕ್ಕಳನ್ನು ಹೊಡೆಯುವುದು, ಏಕೈಕ ಮಗಳಿಗೆ ಲೈಂಗಿಕ ಕಿರುಕುಳ ನೀಡುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಆ ವ್ಯಕ್ತಿ ಭಾವಿಸಿದ್ದ. ನನ್ನ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗಿದಾಗ ನನಗೆ ಕೇವಲ 8 ವರ್ಷ ವಯಸ್ಸು. 15 ವರ್ಷ ತುಂಬಿದ ಬಳಿಕ ತಂದೆಯ ವಿರುದ್ಧ ಮಾತನಾಡುವುದನ್ನು ಕಲಿತೆ ಎಂದಿದ್ದಾರೆ ಖುಷ್ಬೂ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.