Google News-KN | Google News-EN | Telegram |
ಮೂಡಲಗಿ– ನಗರದ ಸಮುದಾಯ ಆರೋಗ್ಯ ಕೇಂದ್ರದ ಹತ್ತಿರದ ಬಸ್ ತಂಗುದಾಣಕ್ಕೆ ಡಾ. ಪುನೀತ ರಾಜಕುಮಾರ ಬಸ್ ತಂಗುದಾಣ ಎಂದು ನಾಮಕರಣ ಮಾಡಿ ಉದ್ಘಾಟನೆ ಮಾಡಲಾಯಿತು.
ಪುರಸಭಾ ಅಧ್ಯಕ್ಷ ಹನುಮಂತ ಗುಡ್ಲಮನಿಯವರು ಪುನೀತ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಿಬ್ಬನ್ ಕತ್ತರಿಸುವ ಮೂಲಕ ನವೀಕೃತ ಬಸ್ ನಿಲ್ದಾಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ, ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಸಂತೋಷ ಸೋನವಾಲಕರ, ಶಿವು ಚಂಡಕಿ, ಈರಣ್ಣ ಕೊಣ್ಣೂರ, ಲಕ್ಷ್ಮಣ ಅಡಿಹುಡಿ, ಶಿವು ಸಣ್ಣಕ್ಕಿಯವರಲ್ಲದೆ ಬಸ್ ನಿಲ್ದಾಣಕ್ಕೆ ಬಣ್ಣ ನೀಡಿದ ಶ್ರೀಧರ ಉಡುಪಿ ಮುಂತಾದವರು ಉಪಸ್ಥಿತರಿದ್ದರು.
ಅಮರನಾದ ಅಪ್ಪು:
ಕರ್ನಾಟಕದ ಮನೆ ಮನಗಳಲ್ಲಿ ಅಮರತ್ವ ಪಡೆದಿರುವ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ ನಿಧನರಾಗಿ ವರ್ಷ ಕಳೆದಿದ್ದರೂ ಇನ್ನೂ ಎಲ್ಲರ ಮನಗಳಲ್ಲಿ ನೆಲೆ ನಿಂತಿದ್ದಾರೆ ಎನ್ನುವುದಕ್ಕೆ ಇಂಥ ಕಾರ್ಯಕ್ರಮಗಳು ಉದಾಹರಣೆಯಾಗುತ್ತವೆ.
ರಾಜ್ಯದ ಹಳ್ಳಿ ಹಳ್ಳಿಗಳ ಸಣ್ಣ ಸಣ್ಣ ವೃತ್ತಗಳಿಗೂ ಕೂಡ ಅಪ್ಪು ಅವರ ಹೆಸರಿಟ್ಟು ಅಭಿಮಾನ ವ್ಯಕ್ತ ಮಾಡಲಾಗುತ್ತಿದೆ. ಅದೆ ಥರ ಮೂಡಲಗಿಯ ಸರ್ಕಾರಿ ಆಸ್ಪತ್ರೆಯ ಹತ್ತಿರದ ಬಸ್ ತಂಗುದಾಣಕ್ಕೆ ಇಲ್ಲಿನ ಯುವ ಸಮಯದಾಯ ಡಾ.ಪುನೀತ್ ಅವರ ಹೆಸರಿಟ್ಟು ಅಭಿಮಾನ ವ್ಯಕ್ತಪಡಿಸಿದರು. ಇದರಿಂದ ಅಪ್ಪು ಎಂದೆಂದಿಗೂ ಅಮರ ಎಂಬ ಸಂದೇಶ ಸಾರಲಾಯಿತು.
ವರದಿ: ಉಮೇಶ ಬೆಳಕೂಡ
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.