Google News-KN | Google News-EN | Telegram |
ಚೆಸ್ಕಾಂ AEE ವಿನಯ್ ಕಿರುಕುಳ ನೀಡಿದ್ದಾಗಿ ಆರೋಪಿಸಿ ಚೆಸ್ಕಾಂ ಕಂಪ್ಯೂಟರ್ ಆಪರೇಟರ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ.
ಸೌಮ್ಯ ಮೃತ ಮಹಿಳೆ. ಸೌಮ್ಯ 2022 ಮೇ ನಲ್ಲಿ ಮಡಿಕೇರಿ ಚೆಸ್ಕಾಂ ಕಚೇರಿಗೆ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸಕ್ಕೆ ಸೇರಿದ್ದರು..
ಈ ವೇಳೆ ಸೌಮ್ಯಗೆ ಮೇಲಧಿಕಾರಿ ಚೆಸ್ಕಾಂ AEE ವಿನಯ್ ಕಿರುಕುಳ ನೀಡಲು ಆರಂಭಿಸಿದ್ದನಂತೆ.. ಪೋನ್ ಮಾಡು, ವಾಟ್ಸಪ್ ಚಾಟ್ ಮಾಡುವಂತೆ ವಿನಯ್ ಸೌಮ್ಯಾಳಿಗೆ ಒತ್ತಾಯ ಮಾಡ್ತಿದ್ದಂತೆ.
ಸೌಮ್ಯ ಈ ವಿಚಾರವನ್ನು ತನ್ನ ಪತಿಗೆ ತಿಳಿಸಿದ್ದು, ಪತಿ ಮಡಿಕೇರಿ ಮಹಿಳಾ ಠಾಣೆಗೆ ದೂರು ನೀಡಿದ್ದರು. ವಿನಯ್ ಕಾಟ ಅಧಿಕವಾಗ್ತಿದ್ದಂತೆ ಮನನೊಂದ ಸೌಮ್ಯ ಆತ್ಯಹತ್ಯೆ ಹತ್ನ ನಡೆಸಿದ್ದಾರೆ.
ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದ್ದು, ಆದರೆ ಚಿಕಿತ್ಸೆ ಫಲಿಸದೇ ಸೌಮ್ಯ ಮೃತಪಟ್ಟಿದ್ದಾರೆ.
AEE ವಿನಯ್ ವಿರುದ್ಧ IPC ಸೆಕ್ಷನ್ 306 ಅಡಿಯಲ್ಲಿ ದೂರು ದಾಖಲಿಸಲಾಗಿದ್ದು, FIR ದಾಖಲಾಗಿದೆ.. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Google News-KN | Google News-EN | Telegram |
Azad Times.
Disclaimer: This story is auto-aggregated by a Syndicated Feed and has not been created or edited By Azad Times Staff.