ಈ ಸಲ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ- ಎಂಟಿಬಿ ನಾಗರಾಜ್ | Azad Times

2 weeks ago 3
Google News-KN Google News-EN Telegram Facebook

Azad Times News Desk.

ಸಿಂದಗಿ: ಉಪ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ನೀಡುವಲ್ಲಿ ಸರಕಾರ ಜಾತ್ಯತೀತವಾಗಿ ಎಲ್ಲ ಸಮುದಾಯಗಳಿಗೆ ತಾರತಮ್ಯವಿಲ್ಲದೆ ಸಮನಾಗಿ ಯೋಜನೆಗಳನ್ನು ನೀಡಿದ್ದು ಡಬಲ್ ಇಂಜನ್ ಸರಕಾರದ ಕೊಡುಗೆಗಳಾಗಿವೆ ಅದಕ್ಕೆ ಜನಸಾಮಾನ್ಯ ಒಪ್ಪುವಂತೆ 2023ರ ಚುನಾವಣೆಯಲ್ಲಿ 130-140 ಸೀಟು ಗೆದ್ದು ಅಧಿಕಾರ ಹಿಡಿಯುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಸಚಿವ ಎಂ. ಟಿ.ಬಿ. ನಾಗರಾಜ ಭವಿಷ್ಯ ನುಡಿದರು.

ತಾಲೂಕಿನ ಚಾಂದಕವಠೆ ಗ್ರಾಮದಲ್ಲಿ ಕುಂಭಮೇಳದೊಂದಿಗೆ ಶ್ರೀ ಕನಕದಾಸರ ಭವ್ಯಮೆರವಣಿಗೆ ಹಾಗೂ ರಾಷ್ಟ್ರಮಟ್ಟದ ಪುರುಷರ ಮತ್ತು ಮಹಿಳಾ ಕುಸ್ತಿ ಪಂದ್ಯಾವಳಿ, ಸಂತ ಶ್ರೇಷ್ಠ ಶ್ರೀ ಕನಕದಾಸರ ಕನಕ ಭವನದ ಅಡಿಗಲ್ಲು ಸಮಾರಂಭ ಹಾಗೂ ಕನಕದಾಸರ ಪುತ್ತಳಿ ಅನಾವರಣಗೊಳಿಸಿ ಮಾತನಾಡಿ, ಹಿಂದೆ ಅನೇಕ ಪಕ್ಷಗಳು ಅಧಿಕಾರ ನಡೆಸಿವೆ ಆದರೆ ಜಲ ಜೀವ ಮಿಷನ್ ಯೋಜನೆಯಡಿ ಜನಸಾಮಾನ್ಯರ ಪ್ರತಿ ಮನೆಗಳಿಗೆ ನೀರು ಕೊಡುವ ಕೆಲಸ ಮಾಡಿಲ್ಲ ಅದನ್ನು ಸಹಕಾರಗೊಳಿಸಿದ್ದು ಭಾಜಪ ಸರಕಾರ ಮಾತ್ರ.

ಅಲ್ಲದೆ ಪ್ರತಿ ರೈತರಿಗೆ ವರ್ಷಕ್ಕೆ ರೂ 10 ಸಾವಿರ ಹಣ ನೀಡಿದ್ದು ಈ ಸರಕಾರದ ಇತಿಹಾಸವಾಗಿದೆ. ಈ ತಾಲೂಕಿನಲ್ಲಿ ರೂ 4 ಕೋಟಿ ವೆಚ್ಚದಲ್ಲಿ 40 ಕನಕ ಭವನಗಳನ್ನು ಮಂಜೂರು ನೀಡಿದೆ. ಹಾಗೆ ಎಲ್ಲ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಶಾಸಕ ರಮೇಶ ಭೂಸನೂರ ಅವರ ಪಾತ್ರ ಅಮೋಘವಾದದ್ದು ಕಾರಣ ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಗೆಲ್ಲಿಸಿ ನಾಲ್ಕನೇ ಬಾರಿ ವಿಧಾನ ಸೌಧಕ್ಕೆ ಪ್ರವೇಶ ನೀಡಿ ನಿಮ್ಮ ಋಣ ತೀರಿಸಲು ಮಂತ್ರಿಪಟ್ಟ ನೀಡಲು ಹಿಂಜರಿಯುವುದಿಲ್ಲ ಎಂದರು.

ಕನಕ ಭವನದ ಭೂಮಿಪೂಜೆ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ  ಶಾಸಕರ ರಮೇಶ  ಭೂಸನೂರ ಮಾತನಾಡಿ, ಕಳೆದ ಉಪಚುನಾವಣೆಯಲ್ಲಿ ನನ್ನ ಗೆಲುವಿನ ಮುನ್ನುಡಿ ಬರೆದಂತವರು ಎಂಟಿಬಿ ನಾಗರಾಜ ಅವರು ಇಟ್ಟಿಗೆ ಶ್ರಮಿಕರು ಅಂತವರು ನನ್ನ ರಾಜಕೀಯಕ್ಕೆ ಸ್ಪೂರ್ತಿ ಎಂದು ಹೇಳಿದ ಅವರು, ಇಂದು ಮಹಾಪುರುಷ ತತ್ವಾದರ್ಶಗಳು ಇಂದಿನ ಪೀಳಿಗೆಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಈ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸಂಗೊಳ್ಳಿ ರಾಯಣ್ಣ, ಸಂತ ಶ್ರೇಷ್ಠ ಕನಕದಾಸರ ಪುತ್ಥಳಿ ಅನಾವರಣಗೊಳಿಸಲಾಗುತ್ತಿದೆ. ಅಲ್ಲದೆ ದೇಶಕ್ಕೆ ಸಂವಿಧಾನವನ್ನು ಬರೆದು ಸಾಮಾಜಿಕ ನ್ಯಾಯಕೊಟ್ಟಂತ ಡಾ. ಅಂಬೇಡ್ಕರರವರ ಭವನ ಮತ್ತು ಮೂರ್ತಿ ಪ್ರತಿಸ್ಥಾಪಿಸಲಾಗುತ್ತಿದೆ ಕಾರಣ ಇಂದಿನ ನವ ಪೀಳಿಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ನೇತೃತ್ವ ವಹಿಸಿದ ಭಾಜಪ ಹಿಂದುಳಿದ ವರ್ಗಗಳ ಅಧ್ಯಕ್ಷ ರವಿಕಾಂತ ನಾಯ್ಕೋಡಿ ಮಾತನಾಡಿ, ಕುರುಬ ಸಮಾಜ ನಂಬಿಕೆ ದ್ರೋಹಿಗಳಲ್ಲ. ಕಷ್ಟದ ಸಂದರ್ಭದಲ್ಲಿ ಯಾರು ಸ್ಪಂದಿಸುತ್ತಾರೋ ಅಂತವರ ಬೆನ್ನಿಗೆ ನಿಲ್ಲುತ್ತದೆ ಅಲ್ಲದೆ ಮುಂದಿನ ಯುವ ಪೀಳಿಗೆಗೆ ಭಕ್ತ ಕನಕದಾಸರ, ಮತ್ತು ಸಂಗೋಳ್ಳಿ ರಾಯಣ್ಣನವರ ಇತಿಹಾಸ ತಿಳಿಸಿಕೊಡುವ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಪುತ್ಥಳಿಗಳ ಅನಾವರಣಗೊಳಿಸಲಾಗುತ್ತಿದೆ ವಿನಃ ಯಾವುದೇ ರಾಜಕೀಯ ಪ್ರೇರಿತವಲ್ಲ ಎಂದು ಹೇಳಿದರು. 

ಗೋಳಸಾರ ಶ್ರೀ ಸದ್ಗುರು ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ಸುಕ್ಷೇತ್ರ ಹುಲಜಂತಿ ಶ್ರೀ ಮಾಳಿಂಗರಾಯ ಮಹಾರಾಜರು, ಯಲಗೋಡ ಶ್ರೀ ಗುರುಲಿಂಗ ಮಹಾಸ್ವಾಮಿಗಳು, ಮುಮ್ಮೇಟಿಗುಡ್ಡ ಅಭಿನವ ಶ್ರೀ ಬನಸಿದ್ದೇಶ್ವರ ಮಹಾರಾಜರು, ಮುದ್ದೇಬಿಹಾಳ ಸರೂರ ಮಠದ  ಶ್ರೀ ಸಿದ್ದಯ್ಯ ಸ್ವಾಮಿಗಳು,  ಶ್ರೀ ಸಿದ್ದಪ್ಪ ಪೂಜಾರಿ, ಶ್ರೀ ಸಿದ್ದಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು.

ಮೆರವಣೆಗೆಗೆ ಚಾಲನೆ ನೀಡಿದ ಕುರುಬ ಸಮಾಜದ ಜಿಲ್ಲಾಧ್ಯಕ್ಷ ಶರಣಪ್ಪ ಕಣಮೇಶ್ವರ, ಅಧ್ಯಕ್ಷತೆ ವಹಿಸಿದ ಕುರುಬ ಸಮಾಜದ ಅಧ್ಯಕ್ಷ ನಿಂಗಣ್ಣ ಬಿರಾದಾರ, ಗುರುರಾಜಗೌಡ ಪಾಟೀಲ, ಸಿಪಿಐ ಡಿ.ಹುಲಗೇಪ್ಪ, ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ, ಮಂಡಲ ಅಧ್ಯಕ್ಷ ಈರಣ್ಣಾ ರಾವೂರ, ಸಂಗನಗೌಡ ಪಾಟೀಲ, ನಾಗಪ್ಪ ಶಿವೂರ, ಮಲ್ಲು ಸಾವಳಸಂಗ, ಎಂ.ಪಿ.ಬಾದನ್, ರೈತಸಂಘದ ಅಧ್ಯಕ್ಷ ಪೀರು ಕೆರೂರ ಅನೇಕರು ವೇದಿಕೆ ಮೇಲಿದ್ದರು.

ಸಿದ್ದು ಬುಳ್ಳಾ ಸ್ವಾಗತಿಸಿದರು. ಬಿ.ಎಸ್.ಜೋಗಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Google News-KN Google News-EN Telegram Facebook
HTML smaller font

Azad Times.

Disclaimer: This story is auto-aggregated by a Syndicated Feed and has not been created or edited By Azad Times Staff.

This is the title of the web page
This is the title of the web page